Mahila Samman: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಕುರಿತ ಕಂಪ್ಲೀಟ್ ವಿವರ ಇಲ್ಲಿದೆ

Mahila Samman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್​​ನಲ್ಲಿ ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ (Mahila Samman Savings Certificate) ಯೋಜನೆಯನ್ನು​​ ಘೋಷಿಸಿದ್ದಾರೆ. ಈ ಯೋಜನೆಯಡಿ ಮಹಿಳೆಯರು ಮತ್ತು ಮಕ್ಕಳು ಸಣ್ಣ ಉಳಿತಾಯ ಮಾಡಬಹುದಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಹಿಳೆಯರು ಮತ್ತು ಬಾಲಕಿಯರಿಗಾಗಿ ಇರುವ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆ ಎರಡು ವರ್ಷಗಳವರೆಗೆ ಲಭ್ಯವಿರುತ್ತದೆ. ಅಂದ್ರೆ, ಏಪ್ರಿಲ್ 2023ರಿಂದ ಮಾರ್ಚ್ 2025ರವರೆಗೆ ಇರಲಿದೆ. ಮಹಿಳೆಯರು ಮತ್ತು ಹುಡುಗಿಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ, ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ 2 ವರ್ಷದ ಅವಧಿಗೆ ನಿಗದಿತ ಬಡ್ಡಿದರಕ್ಕೆ ರೂ 2 ಲಕ್ಷದವರೆಗೆ ಹೂಡಿಕೆ ಮಾಡಬಹುದು. .
ಹಾಗೆಯೇ ಈ ಯೋಜನೆಯಲ್ಲಿ ನಿಗದಿತವಾಗಿ ಶೇಕಡ 7.5ರಷ್ಟು ಬಡ್ಡಿದರ (intrest rate)ವನ್ನು ಪಡೆಯಬಹುದು. ಇದು ಇತರೆ ಬ್ಯಾಂಕ್ ಎಫ್‌ಡಿ(FD) ಗಳಿಗಿಂತ ಹೆಚ್ಚಾಗಿದೆ.

ಈ ಯೋಜನೆಯಡಿಯಲ್ಲಿ ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ ಮಾಡಿಕೊಳ್ಳಬಹುದು. ಅಲ್ಲದೆ, ತೆರಿಗೆ ಪ್ರಯೋಜನ ಕೂಡಾ ಲಭ್ಯವಾಗಲಿದೆ. ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ ಯೋಜನೆಯ ತೆರಿಗೆ ರಚನೆಯ ಬಗ್ಗೆ ಅಂತಿಮವಾಗಿ ಯಾವುದೇ ನಿರ್ಧಾರವಾಗಿಲ್ಲ.

ಯೋಜನೆಯಡಿ ವಿತ್‌ಡ್ರಾ ಮಾಡುವುದು ಹೇಗೆ?
• ಮೊದಲು ಸಮೀಪದ ಬ್ಯಾಂಕ್(bank) ಅಥವಾ ಅಂಚೆ ಕಚೇರಿ(post office) ಗೆ ತೆರಳಿ, ಮಹಿಳಾ ಸಮ್ಮಾನ್ ಬಚ್ತ್ ಪತ್ರ ಯೋಜನೆಯನ್ನು ಫಾರ್ಮ್ ಅನ್ನು ಪಡೆಯಿರಿ.
• ಅರ್ಜಿಯಲ್ಲಿ ವೈಯಕ್ತಿಕ, ಹಣಕಾಸು ಮತ್ತು ನಾಮಿನಿ ಮಾಹಿತಿಯನ್ನು ನಮೂದಿಸಿರಿ.
• ವಿಳಾಸ, ಗುರುತು ಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಪಡೆಯಿರಿ‌.
• ನಂತರ ಹೂಡಿಕೆ ಮೊತ್ತ ಆಯ್ಕೆ ಮಾಡಿ, ಚೆಕ್ ಅಥವಾ ನಗದು ರೂಪದಲ್ಲಿ ಡೆಪಾಸಿಟ್ ಮಾಡಿ.
• ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಅಡಿಯಲ್ಲಿ ನೀವು ಸದಸ್ಯರಾಗಿರುವ ಪುರಾವೆ ಲಭ್ಯವಾಗುತ್ತದೆ.

Leave A Reply

Your email address will not be published.