Nano Liquid DAP: ರೈತರಿಗೆ ಗುಡ್ ನ್ಯೂಸ್ ; ನ್ಯಾನೊ ಲಿಕ್ವಿಡ್ ಡಿಎಪಿ ಗೊಬ್ಬರ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮೋದನೆ!
Nano Liquid DAP : ಕೃಷಿ ವಲಯಕ್ಕೆ ಹೊಸ ಕೊಡುಗೆಯೊಂದು ಇಲ್ಲಿದೆ. ಇದು ರೈತರಿಗೆ ಸಿಹಿಸುದ್ದಿಯೆಂದೇ ಹೇಳಬಹುದು. ಇದೀಗ ಕೇಂದ್ರ ಸರಕಾರವು ರೈತರಿಗೆ(farmer) ಸಹಾಯವಾಗಲೆಂದು ನ್ಯಾನೊ ಲಿಕ್ವಿಡ್ ಡಿಎಪಿ (Nano Liquid DAP) (ಡೈ-ಅಮೋನಿಯಂ ಫಾಸ್ಪೇಟ್) ರಸಗೊಬ್ಬರವನ್ನು ಪರಿಚಯಿಸಿದೆ.
ಇತ್ತೀಚಿನ ದಿನದಲ್ಲಿ ರಸಗೊಬ್ಬರಗಳ ಬೇಡಿಕೆ ಹೆಚ್ಚಾಗಿದೆ. ಕೃಷಿಗೆ ಗೊಬ್ಬರ ಅತ್ಯವಶ್ಯಕ. ಫಸಲು ಚೆನ್ನಾಗಿ ಬರಬೇಕು ಅಂದ್ರೆ ಅದಕ್ಕೆ ಬೇಕಾದ ಅಂಶಗಳನ್ನು ನೀಡಬೇಕು. ಹಾಗಾಗಿ ನ್ಯಾನೊ ಯೂರಿಯಾ(Nano Urea)ವನ್ನು 2021 ರಲ್ಲಿ ಸಹಕಾರ ಸಂಸ್ಥೆ ಇಫ್ಕೋ(IFFCO) ಬಿಡುಗಡೆ ಮಾಡಿತ್ತು. ಹಾಗೆಯೇ ಇದೀಗ ರೈತರಿಗೆ ಅನುಕೂಲವಾಗಲು ಲಿಕ್ವಿಡ್ ನ್ಯಾನೊ ಡಿಎಪಿಯನ್ನು ಇಫ್ಕೋ ತಯಾರಿಸಲಿದ್ದು, ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೇಂದ್ರ ಸರಕಾರ(central government) ಅನುಮೋದನೆ ನೀಡಿದೆ.
ಇದು ರೈತರಿಗೆ ಬೇಗನೆ ಗೊಬ್ಬರ ಪೂರೈಸಲು ಸಹಕಾರಿಯಾಗಲಿದೆ. ಹಾಗೂ ಸರಕಾರಕ್ಕೆ ಸಬ್ಸಿಡಿ(subsidy) ಹೊರೆಯ ಮಟ್ಟ ಕಡಿಮೆ ಮಾಡಲು ನೆರವಾಗಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ನ್ಯಾನೊ ಯೂರಿಯಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವು ನ್ಯಾನೊ ಡಿಎಪಿ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ನ್ಯಾನೊ ರಸಗೊಬ್ಬರಗಳಿಂದ ಭಾರತಕ್ಕೆ ವಿದೇಶಿ ವಿನಿಮಯವನ್ನು ಉಳಿಸಲು ಅನುಕೂಲವಾಗುತ್ತದೆ. ಅಲ್ಲದೆ, ಸರಕಾರಕ್ಕೆ ಸಬ್ಸಿಡಿ ಹೊರೆಯ ಮಟ್ಟ ಕಡಿಮೆ ಮಾಡಲು ನೆರವಾಗಲಿದೆ. ಹಾಗೆಯೇ ರೈತರಿಗೆ ಇದರಿಂದ ಭಾರೀ ಅನುಕೂಲವಿದೆ. ಕೃಷಿಯು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ರಸಗೊಬ್ಬರದ ಬಳಕೆಯಿಂದ ಕೃಷಿ ಸಮೃದ್ಧಿಯಾಗಲಿದೆ.