IMD : ಕರಾವಳಿ ತಾಪಮಾನದಲ್ಲಿ 2 ಡಿಗ್ರಿ ಇಳಿಕೆ ಸಾಧ್ಯತೆ ಹೆಚ್ಚಳ

IMD :ಭಾರತೀಯ (india ) ಹವಾಮಾನ ಇಲಾಖೆಯ (IMD) ಮಾಹಿತಿ (information ) ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಬಗ್ಗೆ ಮಾಹಿತಿ ನೀಡಿದ್ದು, ಜೊತೆಗೆ ಬಿಸಿ ಗಾಳಿಯ ಎಚ್ಚರಿಕೆಯನ್ನು ನೀಡಲಾಗಿತ್ತು.

ಇದೀಗ ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಜಿಲ್ಲೆಗಳಿಗೆ ನೀಡಿದ್ದ ಬಿಸಿ ಗಾಳಿ ಎಚ್ಚರಿಕೆಯನ್ನು ಹಿಂಪಡೆದಿದ್ದು, ಇವತ್ತಿನಿಂದ ಅಂದರೆ ಭಾನುವಾರ (ಮಾ. 5)ರಿಂದ ಗರಿಷ್ಠ ಉಷ್ಣಾಂಶ 2 ಡಿಗ್ರಿ ಸೆ.ಗಳಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ವಾತಾವರಣದಲ್ಲಿ ಉಷ್ಣ ಅಲೆಯ ಪರಿಣಾಮ ಶನಿವಾರ (ಮಾರ್ಚ್ 4) ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 36.6 ಡಿಗ್ರಿ ಸೆ. ದಾಖಲಾದರೆ, ಕನಿಷ್ಠ 20.8 ಡಿಗ್ರಿ ಸೆ. ದಾಖಲಾಗಿದೆ. ಆದ್ದರಿಂದ ವಾತಾವರಣದಲ್ಲಿ ಉಷ್ಣತೆಯ ಅನುಭವ ಹೆಚ್ಚಾಗಿತ್ತು. ಮಧ್ಯಾಹ್ನ ಉರಿ ಸೆಕೆ ಜನರನ್ನು ತತ್ತರಿಸುವಂತೆ ಮಾಡಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ, ರುಮಾಲು, ಟೋಪಿ, ಮರದ ನೆರಳಿನ ಆಶ್ರಯ ಪಡೆಯುವುದು ಸಾಮಾನ್ಯವಾಗಿತ್ತು. ಅಲ್ಲದೆ ಜನರು ತಂಪು ಪಾನೀಯಗಳ ಮೊರೆ ಹೋಗಿದ್ದರು. ಇನ್ನು ವಿವಿಧ ವಾಹನಗಳಲ್ಲಿ ತೆರಳುವವರಿಗೆ ಗಾಳಿಯಲ್ಲಿ ಬಿಸಿ ಹೆಚ್ಚಿರುವುದು ಅನುಭವಕ್ಕೆ ಬಂದಿರುತ್ತದೆ. ಹಲವರು ಹೊರಗೆ ಬರಲು ಹಿಂದೇಟು ಹಾಕುವಷ್ಟು ಬಿಸಿಲಿನ ಬೇಗೆ ಸುಡುತ್ತಿತ್ತು.

ಸದ್ಯ ಹವಾಮಾನ ವಿಶ್ಲೇಷಕರ ಪ್ರಕಾರ ಬಿಸಿ ಗಾಳಿ, ಗರಿಷ್ಠ ಉಷ್ಣಾಂಶವು, ಸಾಮಾನ್ಯವಾಗಿ ಉಂಟಾಗುವ ಹೀಟ್‌ ವೇವ್‌ ಅಲ್ಲ, ಬದಲಾಗಿ ಇದು ತಾತ್ಕಾಲಿಕ ತಾಪಮಾನದ ದಿಢೀರ್‌ ಏರಿಕೆಯಿಂದ ಈ ರೀತಿ ಆಗಿದೆ. ಹಾಗಾಗಿ ಎರಡು ದಿನಗಳಿಗೆ ಸೀಮಿತಗೊಂಡು ಕಡಿಮೆಯಾಗಿದೆ. ಅದಲ್ಲದೆ ಸಾಮಾನ್ಯವಾಗಿ ಏಪ್ರಿಲ್‌ -ಮೇ ತಿಂಗಳಲ್ಲಿ ಉಷ್ಣ ಅಲೆಯ ಪ್ರಮಾಣ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

ಮುಖ್ಯವಾಗಿ ಹವಾಮಾನ ಇಲಾಖೆ ಕರಾವಳಿಯಲ್ಲಿ ಹೀಟ್‌ ವೇವ್‌ ಘೋಷಿಸಬೇಕಾದರೆ ತಾಪಮಾನ 37 ಡಿಗ್ರಿ ಸೆ. ತಲುಪುವುದರೊಂದಿಗೆ ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆ. ಉಷ್ಣಾಂಶ ಏರಿಕೆಯಾಗಬೇಕು. ಈ ರೀತಿಯ ತಾಪಮಾನ ಒಂದೇ ಭಾಗದ ಕನಿಷ್ಠ ಎರಡು ಹವಾಮಾನ ನಿಗಾ ಕೇಂದ್ರಗಳಲ್ಲಿ ಎರಡು ದಿನ ದಾಖಲಾದರೆ ಆಗ ಎರಡನೇ ದಿನ ಇದನ್ನು ಉಷ್ಣ ಅಲೆ ಎಂದು ಪ್ರಕಟಿಸಲಾಗುತ್ತದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಾರವಾರ ಮತ್ತು ಪಣಂಬೂರು ಹವಾಮಾನ ಕೇಂದ್ರಗಳಲ್ಲಿ ಈ ಮೇಲಿನಂತೆ ಉಷ್ಣಾಂಶ ದಾಖಲಾಗಿದ ಕಾರಣ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ಬೆಂಗಳೂರು ವಿಜ್ಞಾನಿ ಪ್ರಸಾದ್‌ ಅವರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.