HAL Recruitment 2023 : ಬೆಂಗಳೂರಿನ ಸಂಸ್ಥೆಯಲ್ಲಿ ಉದ್ಯೋಗಾವಕಾಶ : ತಿಂಗಳಿಗೆ 1.40 ಲಕ್ಷ ಸಂಬಳ!
HAL Recruitment 2023 : ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಸುವರ್ಣವಕಾಶ ಇಲ್ಲಿದೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 6 ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದು. ಇಂದಿನ ದಿನದಲ್ಲಿ ಎಲ್ಲಾ ಜನರು ಬೆಂಗಳೂರಿ(Bengaluru)ನಲ್ಲಿ ಹುದ್ದೆಗೆ ಸೇರಲು ಬಯಸುತ್ತಾರೆ. ಅಂತಹದ್ರಲ್ಲಿ ಇದೀಗ ಬೆಂಗಳೂರಿನ ಹುದ್ದೆ(job)ಯ ಮಾಹಿತಿ ನಿಮ್ಮ ಮುಂದೆ ಇದೆ. ಇನ್ನೇಕೆ ತಡ ಈ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆಯ (HAL Recruitment 2023) ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.
ಹುದ್ದೆಯ ವಿವರ:
ಫೈಯರ್ ಆಫೀಸರ್- 1 ಹುದ್ದೆ
ಆಫೀಸರ್/ ಅಸಿಸ್ಟೆಂಟ್ ಆಫೀಸರ್- 2
ಸೆಕ್ಯುರಿಟಿ ಆಫೀಸರ್- 3
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 01/03/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -15/3/ 2023
ವಿದ್ಯಾರ್ಹತೆ:
ಫೈಯರ್ ಆಫೀಸರ್- ಫೈಯರ್ ಎಂಜಿನಿಯರಿಂಗ್ನಲ್ಲಿ ಪದವಿ, ಬಿ.ಎಸ್ಸಿ
ಆಫೀಸರ್/ ಅಸಿಸ್ಟೆಂಟ್ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ
ಸೆಕ್ಯುರಿಟಿ ಆಫೀಸರ್- ಅಧಿಸೂಚನೆ ಪರಿಶೀಲಿಸಿ
ವಯೋಮಿತಿ: 35 ವರ್ಷ
ವಯೋಮಿತಿ ಸಡಿಲಿಕೆ:
SC ಅಭ್ಯರ್ಥಿಗಳು- 5 ವರ್ಷ
OBC (NCL) ಅಭ್ಯರ್ಥಿಗಳು- 3 ವರ್ಷ
PWD ಅಭ್ಯರ್ಥಿಗಳು- 10 ವರ್ಷ
ಮಾಸಿಕ ವೇತನ:
ಫೈಯರ್ ಆಫೀಸರ್- ₹ 40,000-1,40,000
ಆಫೀಸರ್/ ಅಸಿಸ್ಟೆಂಟ್ ಆಫೀಸರ್- ₹ 30,000-1,40,000
ಸೆಕ್ಯುರಿಟಿ ಆಫೀಸರ್- ₹ 40,000-1,40,000
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಕ್ವಾಲಿಫಿಕೇಶನ್, ಅನುಭವ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಉದ್ಯೋಗದ ಸ್ಥಳ: ಉತ್ತರ ಪ್ರದೇಶ, ಕರ್ನಾಟಕ, ಒಡಿಶಾ
ಅರ್ಜಿ ಶುಲ್ಕ: SC/ST/PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಆದರೆ ಉಳಿದ ಎಲ್ಲಾ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಮೊತ್ತವನ್ನು ಚಲನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ: ಮುಖ್ಯ ವ್ಯವಸ್ಥಾಪಕರು (HR)
ನೇಮಕಾತಿ ವಿಭಾಗ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಕಾರ್ಪೊರೇಟ್ ಕಚೇರಿ
15/1 ಕಬ್ಬನ್ ರಸ್ತೆ
ಬೆಂಗಳೂರು – 560001
ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ hal-india.co.in ಗೆ ಭೇಟಿ ನೀಡಿ.