ಮಂಗಳೂರು: ಕಾಡ್ಗಿಚ್ಚು ಬೆಂಕಿ ಅವಘಡ ಕಂಡುಬಂದರೆ ತಕ್ಷಣವೇ ಮಾಹಿತಿ ನೀಡಲು ಸೂಚನೆ
Fire accident :ಇತ್ತೀಚೆಗೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ವನ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ.ವನ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಸಾವಿರಾರು ಎಕರೆ ಗಟ್ಟಲೆ ಹಬ್ಬಿರುವ ವನ್ಯ ಸಂಪತ್ತು ನಶಿಸಿ ಹೋಗುವ ಭೀತಿಯು ಹೆಚ್ಚಿದೆ. ಹೀಗಾಗಿ, ಮಂಗಳೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಸಾರ್ವಜನಿಕರು ಅರಣ್ಯ ಪ್ರದೇಶಗಳಲ್ಲಿ ಕಸ, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿ ಹಾಕುವ ಜೊತೆಗೆ ವಿನಾ ಕಾರಣ ಬೆಂಕಿ ಹಚ್ಚುವುದರಿಂದ ಬೆಂಕಿ ಜ್ವಾಲೆ ಸುತ್ತಲೂ ಹಬ್ಬಿ ಕಾಡ್ಗಿಚ್ಚು (fire accident)ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ, ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ವಿದ್ಯುತ್ ಸರಬರಾಜು ಪರಿವರ್ತಕ, ತಂತಿಗಳ ಮುಖಾಂತರ ಬೆಂಕಿಯ ಕಿಡಿ ಹಾರಿ ಬೆಂಕಿ ಜ್ವಾಲೆ ಕಂಡುಬಂದಲ್ಲಿ ತಕ್ಷಣವೇ ಮಂಗಳೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಾಪಮಾನದ ವೈಪರಿತ್ಯದ ಹಿನ್ನೆಲೆ ಬಿಸಿಲಿನ ಶಾಖ 32 ಡಿಗ್ರಿಯಿಂದ 40.7ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವು ಸೂರ್ಯನ ಕಿರಣಗಳ ಪ್ರಖರತೆ ಸುಡುವಂತೆಯಿದೆ. ಹೀಗಾಗಿ, ಮಾರ್ಚ್, ಎಪ್ರಿಲ್, ಮೇಯಲ್ಲಿ ರಸ್ತೆ ಪಕ್ಕದಲ್ಲಿ ಧೂಮಪಾನ ಮಾಡುವ, ಅಂಗಡಿಯವರು ತ್ಯಾಜ್ಯ ಬಿಸಾಡಿ ಎಲ್ಲೆಂದರಲ್ಲಿ ಬೆಂಕಿ ಹಚ್ಚುವ, ಪಟಾಕಿ ಸಿಡಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಒಂದು ವೇಳೆ, ಬೆಂಕಿ ಅವಘಡ, ಕಾಡ್ಗಿಚ್ಚು ಕಂಡುಬಂದಲ್ಲಿ ಸಾರ್ವಜನಿಕರು ಆಯಾ ವಲಯದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಪುತ್ತೂರು-9980808650, ಬೆಳ್ತಂಗಡಿ- 9481808105, ಸುಳ್ಯ-9449506304, ಬಂಟ್ವಾಳ-9845732332, ಮಂಗಳೂರು-9620426901, ಸುಬ್ರಹ್ಮಣ್ಯ- 9036604975, ಪಂಜ- 9481390040, ಉಪ್ಪಿನಂಗಡಿ-9480346249
ಅರಣ್ಯ ವೀಕ್ಷಕರು ಅಧಿಕಾರಿಗಳು ಅರಣ್ಯ ಪ್ರದೇಶಗಳ ರಕ್ಷಣೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಬೆಂಕಿ ಅವಘಡ, ಕಾಡ್ಗಿಚ್ಚು, ಬೆಂಕಿ ಜ್ವಾಲೆ ಕಂಡು ಬಂದರೆ ಸಾರ್ವಜನಿಕರು ಆಯಾ ವಲಯದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲು ಮಂಗಳೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮನವಿ ಮಾಡಿದ್ದಾರೆ.