Beauty Tips : ತೆಂಗಿನೆಣ್ಣೆಗೆ ಇದನ್ನು ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ನೋಡಿ, ಕಲೆಯೆಲ್ಲಾ ಮಾಯ!

Coconut oil :ಮಹಿಳೆಯರು (women ) ಅನೇಕ ರೀತಿಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ ಇದು ನಮಗೆ ತಿಳಿದಿರುವ ವಿಚಾರ. ಆದರೆ ಅವುಗಳನ್ನು ಬಳಸುವುದರಿಂದ ನಿಮ್ಮ ತ್ವಚೆಯನ್ನು ಕೆಡಿಸಬಹುದು. ಮತ್ತು ವೆಚ್ಚದಾಯಕವು ಹೌದು. ಆದರೆ ನಿಮ್ಮ ಮುಖದಲ್ಲಿ (face ) ಸುಕ್ಕು ಗಳು, ದದ್ದುಗಳು ಇದ್ದಲ್ಲಿ ಅದನ್ನು ತೆಂಗಿನ ಎಣ್ಣೆಯ ( coconut oil ) ಮೂಲಕ ಸುಲಭವಾಗಿ ಹೋಗಲಾಡಿಸಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

 

ಹೌದು ತೆಂಗಿನ ಎಣ್ಣೆಯು ಕೂದಲು ಮಾತ್ರವಲ್ಲ ಚರ್ಮಕ್ಕೂ ತುಂಬಾ ಉಪಯುಕ್ತವಾಗಿದೆ. ತೆಂಗಿನ ಎಣ್ಣೆಯು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ತೆಂಗಿನೆಣ್ಣೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ತ್ವಚೆಗೆ ಹಚ್ಚಿದರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ನಿಮಗೆ ತ್ವಚೆಯ ಮೇಲೆ ತೆಂಗಿನ ಎಣ್ಣೆಯ ಜೊತೆಗೆ ಯಾವೆಲ್ಲಾ ವಸ್ತುಗಳನ್ನು ಬೆರೆಸಬಹುದು ಎಂದು ಈ ಕೆಳಗೆ ತಿಳಿಸಲಾಗಿದೆ.

ವಿಟಮಿನ್ ಇ (vitamin E) ಎಣ್ಣೆಯೊಂದಿಗೆ ತೆಂಗಿನ ಎಣ್ಣೆ:
ವಿಟಮಿನ್ ಇ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದು ಮಂದ ತ್ವಚೆಯನ್ನು ಫ್ರೆಶ್ ಮಾಡುತ್ತದೆ ಮತ್ತು ನಿಮ್ಮ ಚರ್ಮದ (skin ) ಮೇಲಿನ ಸುಕ್ಕುಗಳ ಸಮಸ್ಯೆ ದೂರವಾಗುತ್ತದೆ. ಆದ್ದರಿಂದ ಸುಕ್ಕುಗಳನ್ನು ನಿಭಾಯಿಸಲು ವಿಟಮಿನ್ ಇ ಮತ್ತು ತೆಂಗಿನ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ, ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಕತ್ತರಿಸಿ, ಬಳಿಕ ಅದನ್ನು ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಈಗ ಚೆನ್ನಾಗಿ ಕಲಸಿದ ನಂತರ ಸ್ವಚ್ಛವಾದ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.

ಅರಿಶಿನ ಮತ್ತು ತೆಂಗಿನ ಎಣ್ಣೆ:
ಅರಿಶಿನವನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಮುಖವು ಹೊಳೆಯುತ್ತದೆ ಮತ್ತು ಸುಂದರವಾಗಿರುತ್ತದೆ. ತೆಂಗಿನ ಎಣ್ಣೆಯಲ್ಲಿ ಅರಿಶಿನವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಖದ ಮೇಲೆ 15 ನಿಮಿಷಗಳ ಕಾಲ ಹಚ್ಚಿ. ಈಗ ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ. ಈ ಮಿಶ್ರಣವನ್ನು ವಾರಕ್ಕೊಮ್ಮೆ ಬಳಸಬಹುದು. ಈ ಸಂದರ್ಭದಲ್ಲಿ, ಮೂರು ಚಮಚ ತೆಂಗಿನ ಎಣ್ಣೆಯಲ್ಲಿ ಚಿಟಿಕೆ ಅರಿಶಿನವನ್ನು ಬೆರೆಸಿ ಮುಖಕ್ಕೆ ಹಚ್ಚಿ. 15 ರಿಂದ 20 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ (water) ತೊಳೆಯಿರಿ. ಹೀಗೆ ಮಾಡುವುದರಿಂದ ಮೃದುವಾಗಿಸುವುದು(smooth ) ಮಾತ್ರವಲ್ಲದೆ ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಇನ್ನು ತೆಂಗಿನ ಎಣ್ಣೆಯೊಂದಿಗೆ ಅರಿಶಿನವನ್ನು ನಿಮ್ಮ ತ್ವಚೆಯ ಮೇಲೆ ಹಚ್ಬಬಹುದು.

ನಿಂಬೆ(lemeon) ಮತ್ತು ತೆಂಗಿನ ಎಣ್ಣೆ:
ತೆಂಗಿನ ಎಣ್ಣೆ ಮತ್ತು ನಿಂಬೆ ರಸ ಮಂದ ಚರ್ಮದ ಹೊಳಪನ್ನು ತರಲು ಪರಿಪೂರ್ಣ ಪರಿಹಾರವಾಗಿದೆ. ನೀವು ತೆಂಗಿನ ಎಣ್ಣೆಯಲ್ಲಿ ಕೆಲವು ಹನಿ ನಿಂಬೆ ರಸವನ್ನು ಮಿಶ್ರಣ ಮಾಡಿ ಮತ್ತು ಅದಕ್ಕೆ ಹಸಿ ಹಾಲನ್ನು ಸೇರಿಸಿ, ಈಗ ಎಲ್ಲವನ್ನೂ ಮಿಶ್ರಣ ಮಾಡಿ. ಇದರ ನಂತರ ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಮೆತ್ತಗೆ ಕೈಗಳಿಂದ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಸುಕ್ಕುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದನ್ನು ಪ್ರತಿದಿನ ಹಚ್ಚಿದರೆ, ನಿಮ್ಮ ತ್ವಚೆಯು ಸ್ವಚ್ಛ ಆಗುತ್ತದೆ ಮತ್ತು ಹೊಳೆಯುತ್ತದೆ

ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್:
ನಿಮ್ಮ ತ್ವಚೆಗೆ ತೆಂಗಿನೆಣ್ಣೆಯೊಂದಿಗೆ ಅಲೋವೆರಾ ಜೆಲ್ ಅನ್ನು ಮಿಕ್ಸ್‌ ಮಾಡಿ ಹಚ್ಚಬಹುದು. ಇವೆರಡನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಕೆಲವು ನಿಮಿಷಗಳ ನಂತರ ನಿಮ್ಮ ಚರ್ಮವನ್ನು ತೊಳೆಯಿರಿ. ಅಲ್ಲದೆ ಈ ಎರಡನ್ನೂ ಕ್ರೀಮ್ ರೂಪದಲ್ಲಿ ಬಳಸಬಹುದು. ಹೀಗೆ ಮಾಡುವುದರಿಂದ ತ್ವಚೆಯಲ್ಲಿನ ಕಲೆಗಳು, ಮೊಡವೆ ಇತ್ಯಾದಿಗಳು ಮಾಯವಾಗುವುದಲ್ಲದೆ, ತ್ವಚೆಯು ಮೃದುವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ.

ತೆಂಗಿನ ಎಣ್ಣೆ ಮತ್ತು ಕಾಫಿ ಪುಡಿ(coffee powder ) :
ತೆಂಗಿನ ಎಣ್ಣೆಯಲ್ಲಿ ಅರ್ಧ ಟೀಚಮಚ ಕಾಫಿ ಪುಡಿಯನ್ನು ಮಿಕ್ಸ್‌ ಮಾಡಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮುಖಕ್ಕೆ ಹಚ್ಚಿರಿ. 15 ರಿಂದ 20 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಸುಕ್ಕುಗಳು, ದದ್ದುಗಳು, ಗೆರೆಗಳು ನಿವಾರಣೆಯಾಗುವುದಲ್ಲದೆ ಬಣ್ಣದಲ್ಲಿ ಬದಲಾವಣೆ ಉಂಟಾಗಿ ತ್ವಚೆಯು ಹೊಳೆಯುತ್ತದೆ.

ಮುಖ್ಯವಾಗಿ ಪ್ರತಿ ಋತುವಿನಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಏಕೆಂದರೆ ವಯಸ್ಸು ಹೆಚ್ಚಾದಂತೆ ಚರ್ಮವು ನಿಸ್ತೇಜವಾಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಆದ್ದರಿಂದ ಈ ಮೇಲಿನಂತೆ ತೆಂಗಿನೆಣ್ಣೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ತ್ವಚೆಗೆ ಹಚ್ಚುವ ಮೂಲಕ ಮುಖವನ್ನು ಕಾಂತಿಯುತವಾಗಿ ಇರಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.