ವಯಸ್ಸು 50 ಆಗಿದೆಯೇ? ಜೀವನಶೈಲಿಯ ಸುಧಾರಣೆ ಹೀಗೆ ಇರಲಿ!

Age after 50 :ಆರೋಗ್ಯವೇ (health ) ಭಾಗ್ಯ ಎನ್ನುವ ಮಾತಿನಂತೆ ಆಧುನಿಕ ಜೀವನದಲ್ಲಿ ಆರೋಗ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದರಲ್ಲೂ ಇತ್ತೀಚೆಗೆ ಮಧ್ಯವಯಸ್ಸು ದಾಟುತ್ತಿದ್ದಂತೆ ಕಾಯಿಲೆಗಳು ಬೆನ್ನಟ್ಟುತ್ತವೆ. ನಿಶಕ್ತಿ, ಮಧುಮೇಹ, ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆಗಳು, ಸಂದು ನೋವು, ನಿತ್ರಾಣದಂತಹ ಇತ್ಯಾದಿ ಸಮಸ್ಯೆಯೂ ದೇಹವನ್ನು ಕಾಡುತ್ತವೆ. ಹಾಗಂತ ವಯಸ್ಸಾಗದಂತೆ ತಡೆಯುವುದೂ ಸಾಧ್ಯವಿಲ್ಲ. ಇನ್ನು ಈ ಕಾಯಿಲೆಗಳಿಂದ ಮನುಷ್ಯನಿಗೆ ನೆಮ್ಮದಿಯೇ ಇರುವುದಿಲ್ಲ. ಆದರೆ ಈ ಸಮಸ್ಯೆಗಳನ್ನು ಕೊಂಚ ಮಟ್ಟಿಗೆ ನಿವಾರಿಸಲು, ನಿಮ್ಮ ಮುಪ್ಪಿನ ಸಮಯದಲ್ಲಿ ಕೆಲವೊಂದು ಜೀವನ ಕ್ರಮಗಳನ್ನು ಅನುಸರಿಸುವುದು ಸೂಕ್ತ.

 

ಹೌದು ನಿಮಗೆ 50 ವರ್ಷಗಳಾಗುತ್ತಿದ್ದಂತೆ ಜೀವನಶೈಲಿಯಲ್ಲಿ (life style ) ಈ ಕೆಲವು ಅಂಶಗಳನ್ನು ಅನುಸರಿಸುವುದನ್ನು ಮರೆಯದಿರಿ:

• 50 ವರ್ಷ ದಾಟಿದ ಮೇಲೆ (Age after 50) ದೇಹದಲ್ಲಿ ಶಕ್ತಿಯ ಕೊರತೆ ಕಾಣಿಸಿಕೊಳ್ಳುತ್ತದೆ. ದೇಹಕ್ಕೆ ಬೇಗ ಆಯಾಸ ಆಗುತ್ತದೆ, ಆ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಬಹಳ ಅವಶ್ಯ. ಬಾಯಿ ರುಚಿಸುವುದಿಲ್ಲ ಎಂಬ ಕಾರಣಕ್ಕೆ ಊಟ ತ್ಯಜಿಸುವುದು ಸರಿಯಲ್ಲ. ಸರಿಯಾಗಿ ಸಮಯಕ್ಕೆ ಅನುಸಾರ ಆಹಾರ (food ) ಸೇವಿಸುವುದನ್ನು ರೂಢಿಸಿಕೊಳ್ಳಿ.

• ಸಾಮಾನ್ಯವಾಗಿ 50 ವರ್ಷ ದಾಟಿದವರಲ್ಲಿ ನಿದ್ದೆಯ ಅಭಾವ ಇದ್ದೇ ಇರುತ್ತದೆ. ಆದರೆ ವಯಸ್ಸಾದಂತೆ ಗುಣಮಟ್ಟದ ನಿದ್ದೆಯ ಕ್ರಮವನ್ನು ಅನುಸರಿಸಬೇಕು. ಅಧ್ಯಯನವೊಂದರ ಪ್ರಕಾರ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅಸರ್ಮಪಕ ನಿದ್ದೆಯ ಕಾರಣದಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ (problems ) ಬಳಲುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಈ ವಯಸ್ಸಿನವರು ಕನಿಷ್ಠ 7 ಗಂಟೆ ಹಾಗೂ ಗರಿಷ್ಠ 9 ಗಂಟೆಗಳ ಹೊತ್ತು ನಿದ್ದೆ ಮಾಡುವುದು ಅವಶ್ಯ.

• 50 ವರ್ಷ ದಾಟಿದವರು ಮಾಂಸಾಹಾರವನ್ನು ಕಡಿಮೆ ಮಾಡಿ ಸಸ್ಯಾಹಾರ ಸೇವನೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು ಉತ್ತಮ. ಇವು ನೆನಪಿನ ಶಕ್ತಿ ಹೆಚ್ಚಳ, ಚರ್ಮದ ಆರೋಗ್ಯ ಹಾಗೂ ಕೆಲವೊಂದು ಕ್ಯಾನ್ಸರ್‌ನ ಲಕ್ಷಣಗಳಿಂದ ದೂರವಿರಲು ಇವು ಸಹಾಯ ಮಾಡುತ್ತವೆ. ಸಂಪೂರ್ಣ ಮಾಂಸಾಹಾರವನ್ನು ತ್ಯಜಿಸಬೇಕಾಗಿಲ್ಲ. ಅದರ ಬದಲು ತರಕಾರಿ, ಹಣ್ಣು, ಧಾನ್ಯಗಳ ಸೇವನೆಯನ್ನು ಹೆಚ್ಚು ಮಾಡಬೇಕು. ಇದು ದೀರ್ಘಕಾಲದ ಕಾಯಿಲೆಗಳನ್ನು ತಡೆಹಿಡಿಯುವ ಜೊತೆಗೆ ವಯಸ್ಸಿನ ಲಕ್ಷಣಗಳನ್ನು ಬಾಧಿಸದಂತೆ ನಿಯಂತ್ರಿಸುತ್ತದೆ. ಹಸಿರೆಲೆ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ, ಆಗ ಮೂಳೆಯ ಶಕ್ತಿ ವೃದ್ಧಿಸಬಹುದು. ಹಸಿರೆಲೆ ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇದ್ದು, ಮೂಳೆಯ ಆರೋಗ್ಯ ಕಾಪಾಡುತ್ತದೆ . ಇದರಲ್ಲಿನ ವಿಟಮಿನ್ ಕೆ ಅಂಶವು ಮೂಳೆಯ ಸಾಂದ್ರತೆ ಹೆಚ್ಚು ಮಾಡುವ ಪ್ರೋಟೀನ್ ನ್ನು ಉತ್ಪತ್ತಿ ಮಾಡುತ್ತದೆ.

• ವಯಸ್ಸಾದ ಮೇಲೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳೂ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚು. ವಾಕಿಂಗ್‌ ಮಾಡುವುದು, ಜಾಗಿಂಗ್‌ ಮಾಡುವುದು, ಇದನ್ನು ಆರಂಭಿಸಬಹುದು, ಆದಷ್ಟು ಮನೆಯಲ್ಲಿ ಸಣ್ಣ ಪುಟ್ಟ ಕೆಲಸವನ್ನು ಮಾಡುವುದನ್ನು ರೂಢಿಸಿಕೊಳ್ಳಿ . ದೈಹಿಕ ಚಟುವಟಿಕೆಗಳು ಮೂಳೆಯ ಸಾಂಧ್ರತೆಯನ್ನು ಹೆಚ್ಚಿಸುತ್ತವೆ. ಸ್ನಾಯುವಿನ ದ್ರವ್ಯರಾಶಿಯನ್ನು ಗಟ್ಟಿಗೊಳಿಸುತ್ತವೆ. ಸಮತೋಲಿತ ಹಾಗೂ ಸ್ಥಿರ ದೇಹಸ್ಥಿತಿಗೆ ಇದು ಸಹಾಯ ಮಾಡುತ್ತದೆ.

• ಮನಸ್ಸನ್ನು ಸದಾ ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳಬೇಕು. ಯಾವಾಗಲೂ ಪಾಸಿಟಿವ್ (positive ) ಯೋಚನೆಗಳನ್ನು ಇರಿಸಿಕೊಳ್ಳಿ. ದೈನಂದಿನ ಚಟುವಟಿಕೆಯ ಜೊತೆ ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಈ ಅಭ್ಯಾಸಗಳಿಂದ ಒತ್ತಡ ನಿರ್ವಹಣೆ ಸಾಧ್ಯ. ಇದು ದೀರ್ಘಕಾಲದ ಅಪಾಯವನ್ನು ಕಡಿಮೆ ಮಾಡುವ ಜೊತೆಗೆ ಸಂಪೂರ್ಣ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.

• ಧೂಮಪಾನ ಹಾಗೂ ಮಧ್ಯಪಾನದ ಚಟ ಇರುವವರಿಗೆ ವಯಸ್ಸಾದ ನಂತರ ಅದನ್ನು ತ್ಯಜಿಸುವುದು ಕಷ್ಟ ಆಗಬಹುದು. ಆ ಕಾರಣಕ್ಕೆ ಸಂಪೂರ್ಣ ತ್ಯಜಿಸುವ ಬದಲು ಪ್ರಮಾಣವನ್ನು ಕಡಿಮೆ ಮಾಡಿ. ಇದರಿಂದ ತೂಕ ನಿಯಂತ್ರಣಕ್ಕೂ ಇದು ಸಹಕಾರಿ. ಅಲ್ಲದೆ ರಕ್ತದೊತ್ತಡ ನಿಯಂತ್ರಣ ಹಾಗೂ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಕೆಲವೊಂದು ಕ್ಯಾನ್ಸರ್‌ ಅಪಾಯಗಳಿಂದಲೂ ದೂರವಿರಲು ಸಾಧ್ಯವಾಗುತ್ತದೆ.

ಇದಲ್ಲದೆ ಉಪ್ಪಿನಾಂಶ ಇರುವ ಆಹಾರಗಳಿಂದ ದೂರವಿರಿ, ಅಥವಾ ಅಡುಗೆ ಪದಾರ್ಥಗಳಿಗೆ ಉಪ್ಪು ಹೆಚ್ಚು ಬಳಸುವುದನ್ನು ನಿಲ್ಲಿಸಿ. ಮತ್ತು ಹೊರಗಡೆ ಸಿಗುವ ಎಣ್ಣೆಯಾಂಶ ಇರುವ ಆಹಾರಗಳಿಂದ ದೂರವಿರಿ ಹಾಗೂ ಮನೆಯ ಆಹಾರವನ್ನು ಹೆಚ್ಚು ಸೇವನೆ ಮಾಡಿ. ಈ ಮೇಲಿನಂತೆ ಕೆಲವು ಅಂಶಗಳನ್ನು ಜೀವನದಲ್ಲಿ ರೂಡಿಸಿಕೊಂಡಲ್ಲಿ ನಿಮ್ಮ ಮುಪ್ಪಿನಲ್ಲಿ ಕೊಂಚ ಆರೋಗ್ಯ ಸುಧಾರಣೆಯನ್ನು ಕಾಣಬಹುದಾಗಿದೆ.

Leave A Reply

Your email address will not be published.