Unwanted Hair : ಹೆಣ್ಮಕ್ಕಳೇ, ನೀವು ಬೇಡದ ಕೂದಲು ಶೇವಿಂಗ್‌ ಮಾಡೋ ಮುನ್ನ ಇದನ್ನು ಖಂಡಿತ ಓದಿ!

Unwanted Hair : ಸುಂದರವಾಗಿ ಕಾಣಿಸಬೇಕು ಎಂದು ಯಾರು ತಾನೇ ಬಯಸಲ್ಲ ಹೇಳಿ! ಅದರಲ್ಲಿಯೂ ಸೌಂದರ್ಯದ ವಿಷಯದಲ್ಲಿ ಮಹಿಳೆಯರಿಗೆ ವಿಶೇಷ ಕಾಳಜಿ ಎಂದರೆ ತಪ್ಪಾಗದು. ಕೆಲವೊಮ್ಮೆ ತಮ್ಮ ಸೌಂದರ್ಯಕ್ಕೆ ಬೇಡದ ಕೂದಲು ಅಡ್ಡಿ ಪಡಿಸುತ್ತವೆ.ಯಾವುದಾದರೂ ಫಂಕ್ಷನ್ ಗೆ ಹೋಗಬೇಕು ಎಂದಾಗ ಸ್ಲೀವ್ ಲೆಸ್ ಡ್ರೆಸ್ ಧರಿಸಿದಾಗ ಕೈ, ಕಂಕುಳ ಹೀಗೆ ಅನಗತ್ಯ ಕೂದಲು ಇದ್ದರೆ ಒಂದು ರೀತಿಯ ಕಿರಿಕಿರಿ ಅನಿಸುತ್ತದೆ. ನಮ್ಮಲ್ಲಿ ಹೆಚ್ಚಿನವರು ವ್ಯಾಕ್ಸಿಂಗ್ ಅಥವಾ ಶೇವ್ ಮಾಡುವ ಮೂಲಕ ದೇಹದ ಕೂದಲನ್ನು ತೆಗೆಯುವ ವಿಧಾನ ಅನುಸರಿಸುತ್ತಾರೆ. ಆದರೆ, ಎರಡು ವಿಧಾನಗಳಲ್ಲಿ ಯಾವುದು ಉತ್ತಮ ಎಂಬುದರ ಕುರಿತು ಗೊಂದಲ ಮೂಡುವುದು ಸಹಜ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಮಹಿಳೆಯರು(Women) ದೇಹದ ಮೇಲಿನ ಅನಗತ್ಯ ಕೂದಲನ್ನು(Unwanted Hair) ತೆಗೆಯಲು ವ್ಯಾಕ್ಸಿಂಗ್(Waxing) ಹಾಗೂ ಶೇವಿಂಗ್(Shaving)​ ಹೀಗೆ ಹಲವಾರು ವಿವಿಧ ಮಾರ್ಗಗಳನ್ನು ಅನುಸರಿಸುವುದು ವಾಡಿಕೆ. ಆದರೆ, ಹೇರ್ ರಿಮೂವ್(Hair Remove) ಮಾಡಲು ಅನೇಕ ವಿಧಾನಗಳಿವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಎಲ್ಲ ವಿಧಾನಗಳು ನಮಗೆ ಎಷ್ಟು ಅನುಕೂಲ ಉಂಟು ಮಾಡುತ್ತವೆಯೋ, ಅಷ್ಟೇ ಅಡ್ಡ ಪರಿಣಾಮಗಳನ್ನು ಕೂಡ ಉಂಟು ಮಾಡುವ ಸಾಧ್ಯತೆಗಳಿವೆ.

ಇಂದು ಮಾರುಕಟ್ಟೆಯಲ್ಲಿ ವ್ಯಾಕ್ಸಿಂಗ್, ರೇಜರ್‌ಗಳು, ಶೇವಿಂಗ್ ಕ್ರೀಮ್‌ಗಳು ಮತ್ತು ಕೂದಲು ತೆಗೆಯುವ ಕ್ರೀಮ್‌ಗಳಂತಹ ಅನಗತ್ಯ ಕೂದಲನ್ನು ತೆಗೆದುಹಾಕಲು ಹಲವು ಆಯ್ಕೆಗಳು ಲಭ್ಯವಿದೆ. ಮಹಿಳೆಯರು ಹೆಚ್ಚಿನವರು ಅನಗತ್ಯ ಕೂದಲು ತೆಗೆಯಲು ಬಳಕೆ ಮಾಡುವ ವಿಧಾನ(Unwanted Hair Removal Tips) ಎಂದರೆ ವ್ಯಾಕ್ಸಿಂಗ್. ವ್ಯಾಕ್ಸಿಂಗ್ (Waxing)ಮಾಡುವುದರಿಂದ ಬೇಡದ ಕೂದಲನ್ನು ತೆಗೆಯುವುದು ಮಾತ್ರವಲ್ಲದೆ ಟ್ಯಾನಿಂಗ್ ಸಮಸ್ಯೆಯನ್ನು ಪರಿಹರಿಸಲು ನೆರವಾಗುತ್ತದೆ.

ವ್ಯಾಕ್ಸಿಂಗ್ ಮಾಡಿದ ಬಳಿಕ ಕನಿಷ್ಠ ಎರಡು ವಾರಗಳವರೆಗೆ ಚರ್ಮವು ಮೃದುವಾಗಿರುತ್ತದೆ. ವ್ಯಾಕ್ಸಿಂಗ್ ಮಾಡುವಾಗ ಕೂದಲು ಬೇರುಗಳ ಜೊತೆಗೆ ಹೊರಬರುವುದರಿಂದ, ಕೂದಲು ಮತ್ತೆ ಬೆಳೆಯುವ ಸಮಯವನ್ನು ಕಡಿಮೆ ಮಾಡುವ ಜೊತೆಗೆ ನಿಮ್ಮ ದೇಹದಲ್ಲಿರುವ ಕೊಳೆ ಸುಲಭವಾಗಿ ನಿವಾರಣೆಯಾಗುತ್ತದೆ. ವ್ಯಾಕ್ಸಿಂಗ್ ಮಾಡಿದ ತಕ್ಷಣ ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಕ್ರೀಮ್ ಅಥವಾ ಡಿಯೋಡರೆಂಟ್ ಅನ್ನು ಹಚ್ಚುವುದು ಒಳ್ಳೆಯದಲ್ಲ. ವ್ಯಾಕ್ಸ್ ಮಾಡಿದ ನಂತರ ಕನಿಷ್ಠ ಮುಂದಿನ 24 ಗಂಟೆಗಳ ಕಾಲ ಸೂರ್ಯನ ಬೆಳಕಿನಡಿ ಓಡಾಡುವುದನ್ನು ತಪ್ಪಿಸಿ.

ವ್ಯಾಕ್ಸಿಂಗ್ ಮಾಡುವುದರಿಂದ ಚರ್ಮದ ಅಲರ್ಜಿಗಳು ಮತ್ತು ನಿಮ್ಮ ದೇಹದಲ್ಲಿ ದದ್ದುಗಳನ್ನು ಉಂಟಾಗುವ ಸಾಧ್ಯತೆಗಳಿವೆ. ಅದನ್ನು ಶಮನಗೊಳಿಸಲು ಪೀಡಿತ ಭಾಗಕ್ಕೆ ಐಸ್ ಅನ್ನು ಅನ್ವಯಿಸಬಹುದು. ಇದರ ಜೊತೆಗೆ ನೀವು ಅಲೋವೆರಾ, ತೆಂಗಿನ ಎಣ್ಣೆ, ಚಹಾ ಎಣ್ಣೆ ಅಥವಾ ನಿಂಬೆ ರಸವನ್ನು ದೇಹದಲ್ಲಿ ಸಮಸ್ಯೆ ಉಂಟಾದ ಭಾಗಕ್ಕೆ ಬಳಕೆ ಮಾಡಬಹುದು.

ನಮಗೆ ಅನಗತ್ಯ ಕೂದಲು ತೆಗೆಯಬೇಕು ಎಂದೆನಿಸಿದಾಗ ಮೊದಲು ಹೊಳೆಯುವ ಯೋಚನೆ ಎಂದರೆ ಶೇವಿಂಗ್ (Shaving) ಮಾಡಲು ನೀವು ಹೆಚ್ಚೇನು ಖರ್ಚು ಮಾಡಬೇಕಾಗಿಲ್ಲ. ಅಷ್ಟೆ ಏಕೆ ಅದಕ್ಕಾಗಿ ಸಲೂನ್ ಗೆ ತೆರಳಬೇಕಾಗಿಲ್ಲ. ಮತ್ತೊಂದು ಸಮಯ ಉಳಿಯುವ ಜೊತೆಗೆ ಹೆಚ್ಚೇನು ನೋವು ಕೂಡ ಆಗುವುದಿಲ್ಲ.ಹೀಗಾಗಿ, ಹೆಚ್ಚಿನ ಮಹಿಳೆಯರು ಶೇವಿಂಗ್ ಮಾಡಲು ಮುಂದಾಗುತ್ತಾರೆ. ಆದರೆ, ಶೇವಿಂಗ್ ಮಾಡುವಾಗ ಸರಿಯಾದ ಕ್ರಮ ಬಳಕೆ ಮಾಡದೆ ಇದ್ದಲ್ಲಿ ತುರಿಕೆ, ಕಜ್ಜಿ, ಗುಳ್ಳೆಯಾಗುವ ಚರ್ಮದ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿ, ಶೇವಿಂಗ್ ಮಾಡಿಕೊಳ್ಳುವ ಮುನ್ನ ಕೆಲವು ಸರಳ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.

ಚರ್ಮದ ಮೇಲ್ಭಾಗವನ್ನು ಶೇವಿಂಗ್ ಮಾಡುವ ಸಂದರ್ಭದಲ್ಲಿ, ಚರ್ಮದ ಮೇಲಿನ ಸ್ಟ್ರಾಟಮ್ ಕಾರ್ನಿಯಮ್‌ಗೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ಶೇವಿಂಗ್ ಮಾಡಿದ ನಂತರ ಮಾಯಿಶ್ಚರೈಸರ್ ಕ್ರೀಮ್ ಬಳಕೆ ಮಾಡುವುದು ಅವಶ್ಯಕ. ಇದರಿಂದಾಗಿ, ತುರಿಕೆ, ಒಣಚರ್ಮ, ಚರ್ಮ ಕೆಂಪಾಗುವುದು ಮೊದಲಾದ ಸಮಸ್ಯೆಯಿಂದ ಪಾರಾಗಬಹುದು. ಒಣಗಿದ ಚರ್ಮವನ್ನು ಶೇವಿಂಗ್ ಮಾಡುವುದರಿಂದ ಚರ್ಮದಲ್ಲಿ ಗಾಯ, ಫಾಲಿಕಲ್ಸ್‌ಗಳಿಗೆ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಅಷ್ಟೆ ಅಲ್ಲದೇ,ಚರ್ಮದ ತುರಿಕೆ ಉಂಟಾಗಬಹುದು. ಹೀಗಾಗಿ, ಶೇವಿಂಗ್ ಮಾಡಿಕೊಳ್ಳುವ ಮೊದಲು ಉಗುರು ಬೆಚ್ಚಗಿನ ನೀರಿನಿಂದ ಶೇವಿಂಗ್ ಮಾಡುವ ಜಾಗವನ್ನು ಒದ್ದೆ ಮಾಡುವುದು ಉತ್ತಮ. ಶೇವಿಂಗ್‌ಗೆ ಮೊದಲು ಹಾಗೂ ಶೇವಿಂಗ್ ನಂತರ ಸಮರ್ಪಕ ವಿಧಾನವನ್ನು ಅನುಸರಿಸುವ ಮೂಲಕ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬೇಕು.

ಒಮ್ಮೆ ಬಳಸಿದ ಬ್ಲೇಡ್‌ ಅ‌ನ್ನು ಚೆನ್ನಾಗಿ ತೊಳೆದು ಒಣಗಿಸಿ ತೇವವಿಲ್ಲದ ಜಾಗದಲ್ಲಿ ಇಡುವ ಅಭ್ಯಾಸ ರೂಢಿಸಿಕೊಳ್ಳಿ. ಶೇವಿಂಗ್ ಮಾಡುವಾಗ ಹರಿತವಿಲ್ಲದ ಬ್ಲೇಡ್ ಉಪಯೋಗಿಸಿದರೆ ಚರ್ಮದ ಕಿರಿಕಿರಿ, ಸುಟ್ಟಂತಾಗುವುದು, ಚರ್ಮದ ಬೆಳವಣೆಗೆ ಕುಂಠಿತವಾಗುವ ಸಮಸ್ಯೆ ಉಂಟಾಗುತ್ತದೆ. ಶೇವಿಂಗ್ ಮಾಡಿಕೊಳ್ಳುವ ಮೊದಲು ಶೇವಿಂಗ್ ಕ್ರೀಮ್ ಹಚ್ಚಿ ಒಂದೆರಡು ನಿಮಿಷ ಬಿಡುವುದು ಒಳ್ಳೆಯದು. ಇದರಿಂದ ಚರ್ಮದಲ್ಲಿ ಮೃದುತನ ಕಾಣಿಸಿಕೊಳ್ಳುತ್ತದೆ. ಏಕ್ಸ್‌ಪೋಲಿಯಷನ್ ವಿಚಾರದಲ್ಲಿ ಸ್ಕ್ರಬ್‌ ಮಾಡಿಕೊಳ್ಳುವುದಕ್ಕಿಂತ ರಾಸಾಯನಿಕ ಸ್ಕ್ರಬ್ ಮಾಡಿಕೊಳ್ಳುವುದು ಒಳ್ಳೆಯದು. ಏಕ್ಸ್‌ಪೋಲಿಯೇಷನ್ ಮತ್ತು ಶೇವಿಂಗ್ ನಡುವೆ 4 ದಿನಗಳ ಅಂತರ ಇರುವಂತೆ ನೋಡಿಕೊಂಡರೆ ಒಳ್ಳೆಯದು.ಮೇಲೆ ತಿಳಿಸಿದ ವಿಧಾನಗಳನ್ನು ಅನುಸರಿಸಿ ನಿಮ್ಮ ಚರ್ಮದ ಕಾಳಜಿಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು.

 

 

 

.

Leave A Reply

Your email address will not be published.