RTE Admission 2023: ಆರ್‌ಟಿಇ ಮೂಲಕ ಪ್ರವೇಶಾತಿಗೆ ಅರ್ಜಿ ಪ್ರಕ್ರಿಯೆ ಆರಂಭ | ವೇಳಾಪಟ್ಟಿ, ಬೇಕಾಗುವ ದಾಖಲೆಗಳ ಕಂಪ್ಲೀಟ್ ವಿವರ ಇಲ್ಲಿದೆ.

RTE Admission 2023 : ಆರ್‌ಟಿಇ(RTE) ಮೂಲಕ ಪ್ರವೇಶಾತಿ ಆರಂಭವಾಗಿದ್ದು, ಪೋಷಕರು ತಮ್ಮ ಮಕ್ಕಳ(students)ನ್ನು ಉಚಿತವಾಗಿ ಶಾಲೆಗೆ ದಾಖಲು ಮಾಡಬಹುದಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ಅಡಿಯಲ್ಲಿ (RTE Admission 2023 -24) ಉಚಿತವಾಗಿ ಪ್ರವೇಶಕ್ಕೆ ಅರ್ಜಿ ಹಾಕಲು ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಬೇಕಾಗುವ ದಾಖಲೆ, ಅರ್ಜಿ ಸಲ್ಲಿಸುವ ವಿಧಾನಗಳ ಮಾಹಿತಿ ಇಲ್ಲಿದೆ.

 

ಆರ್‌ಟಿಇ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
RTE ಮೂಲಕ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು-ಒನ್, ಬೆಂಗಳೂರು(Bengaluru) ನಗರ, ಕರ್ನಾಟಕ-ಒನ್, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್-ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು?
• ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಮಗು, ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಬೇಕು.
• ಹಾಗೂ ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ.

ವೇಳಾಪಟ್ಟಿ –
• 2023-24ನೇ ಸಾಲಿನ ಪ್ರವೇಶಾತಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಆ ಪ್ರಕಾರ ಅನುದಾನಿತ ಶಾಲೆಗಳೂ ಸೇರಿದಂತೆ ದಾಖಲಾತಿ ಕೋರಿ ಪೋಷಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 20-03-2023 ರಿಂದ 20-04-2023ರವರೆಗೆ ಅವಕಾಶ ಇರಲಿದೆ.
• EID ಮೂಲಕ ಅರ್ಜಿ ಸಲ್ಲಿಸಿದ ದತ್ತಾಂಶದ ನೈಜತೆ ಪರಿಶೀಲನೆ ಹಾಗೂ ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ಧವಲ್ಲದ ಅರ್ಜಿಗಳ ಪರಿಶೀಲನೆಗೆ ದಿನಾಂಕ – 21-03-2023 ರಿಂದ 21-04-2023ರ ವರೆಗೆ ಅವಕಾಶ ಇರಲಿದೆ.
• ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ದಿನಾಂಕ: 24-04-2023 ಆಗಿದೆ.
• ಆನ್‌ಲೈನ್‌ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ದಿನಾಂಕ – 27-04-2023. ಇರಲಿದೆ.
• ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ ಹಾಗೂ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಶದಲ್ಲಿ ದಿನಾಂಕ – 28-04-2023 ರಿಂದ 08-05-2023ರ ವರೆಗೆ. ಅಪ್‌ಲೋಡ್ ಮಾಡಲಾಗುವುದು.
• ಆನ್‌ಲೈನ್‌ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ದಿನಾಂಕ – 16-05-2023. ರಂದು ಇರಲಿದೆ.
• ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ ಹಾಗೂ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಶದಲ್ಲಿ 17-05-2023 ರಿಂದ 25-05-2023 ರವರೆಗೆ ಅಪ್‌ಲೋಡ್ ಮಾಡಲಾಗುತ್ತದೆ.

ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯಿಂದ ಮಾಹಿತಿ ಸರಿಯಾಗಿ ಸಿಗದೇ ಇದ್ದಲ್ಲಿ ಅಥವಾ ಅರ್ಜಿ ಕ್ರಮಬದ್ಧವಾಗಿ ಇಲ್ಲದೇ ಇದ್ದರೆ, ಅರ್ಜಿದಾರರ ಪೋಷಕರ ಮೊಬೈಲಿಗೆ ಮಾಹಿತಿಗಳನ್ನು ಸರಿಪಡಿಸಲು
ಮೆಸೇಜ್ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್ https://www.schooleducation.kar.nic.in ಗೆ ಭೇಟಿ ನೀಡಬಹುದು.

Leave A Reply

Your email address will not be published.