ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆಪಟ್ಟಿ ಬಿಡುಗಡೆ!

KEA Assistant Professor : ರಾಜ್ಯದ ಜಿಎಫ್‌ಜಿಸಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ, (KEA)ವಿಷಯವಾರು ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ 2021 ರ ಸೆಪ್ಟೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ, ಅರ್ಜಿ ಸ್ವೀಕರಿಸಿ ಕೆಇಎ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಸದ್ಯ, ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿ ಕರ್ನಾಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಕುರಿತಂತೆ, ಇದೀಗ ಅಂತಿಮ ಆಯ್ಕೆಪಟ್ಟಿಯನ್ನು (KEA Assistant Professor)ಪ್ರಕಟಿಸಿದೆ.

ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಪಡೆದು, ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಈ ಅಂತಿಮ ಆಯ್ಕೆಪಟ್ಟಿಗಳನ್ನು ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕೆಇಎ ವಿಷಯವಾರು ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆಪಟ್ಟಿ ಪ್ರಕಟಗೊಂಡಿದ್ದು, ಅಭ್ಯರ್ಥಿಗಳ ರಿಜಿಸ್ಟರ್ ನಂಬರ್, ಹೆಸರು, ಜನ್ಮ ದಿನಾಂಕ, ಮೀಸಲಾತಿ ವಿವರ, ಸ್ಪರ್ಧಾತ್ಮಕ ಪರೀಕ್ಷೆ ಅಂಕಗಳು, ಆಯ್ಕೆಯಾದ ಕೆಟಗರಿ ವಿವರ ಪ್ರಕಟಿಸಲಾಗಿದೆ.

ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆಪಟ್ಟಿ ಚೆಕ್‌ ಮಾಡುವ ವಿಧಾನ ಹೀಗಿದೆ:
ಮೊದಲು, ಕೆಇಎ ವೆಬ್‌ಸೈಟ್‌ ಗೆ https://cetonline.karnataka.gov.in/kea/ ಭೇಟಿ ನೀಡಬೇಕು. ನಂತರ, ತೆರೆದ ಮುಖಪುಟದಲ್ಲಿ ಮೊದಲಿಗೆ “ನೇಮಕಾತಿ” ಪ್ರಕ್ರಿಯೆಯನ್ನು ಆರಿಸಿಕೊಳ್ಳಬೇಕು. ಬಳಿಕ, ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸಹಾಯಕ ಪ್ರಾಧ್ಯಾಪಕರು)-2021 ಎಂದಿರುವ ಲಿಂಕ್ ಕ್ಲಿಕ್ ಮಾಡಬೇಕು. ಆಗ ನಿಮಗೆ ತೆರೆದ ವೆಬ್‌ಪುಟದಲ್ಲಿ ‘ಆಯ್ಕೆಪಟ್ಟಿ’ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ವಿಷಯವಾರು ಅಂತಿಮ ಆಯ್ಕೆಪಟ್ಟಿ ಕಾಣಿಸುತ್ತದೆ. ಇದನ್ನು ಕ್ಲಿಕ್ ಮಾಡುವ ಮೂಲಕ ಅಂತಿಮ ಪಟ್ಟಿಯನ್ನು ಪರಿಶೀಲನೆ ನಡೆಸಬಹುದು.

Leave A Reply

Your email address will not be published.