ನಿಮ್ಮ ತರಗತಿಯ ಲೆವಲ್ ಹೆಚ್ಚಾದಂತೆ ಹಾಕೋ ಸ್ಕರ್ಟ್ ಸೈಜ್ ಕಡಿಮೆಯಾಗುತ್ತೆ ಈ ಸ್ಕೂಲ್ ನಲ್ಲಿ! ಇದಕ್ಕೊಂದು ಇಂಟೆರೆಸ್ಟಿಂಗ್ ಕಾರಣ ಇದೆ!

School uniform :ಪ್ರತೀ ಶಾಲೆ(school), ಕಾಲೇಜು(college)ಗಳಲ್ಲಿ ಶಿಕ್ಷಣಕ್ಕೆ ಮಹತ್ವ ಕೊಡುವ ಹಾಗೇ ಯುನಿಫಾರ್ಮ್ ಗೂ ಕೂಡ ಮಹತ್ವ ಕೊಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಸಮಾನರು, ಬಡವ- ಶ್ರೀಮಂತ, ಮೇಲು-ಕೀಳು ಭಾವನೆ ಇರಬಾರದು ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಒಂದೇ ಬಣ್ಣದ, ಒಂದೇ ರೀತಿಯ ಸಮವಸ್ತ್ರ(school uniform) ಕೊಡಲಾಗುತ್ತದೆ.

ಅದರಲ್ಲಿ ಕೆಲವು ವಿದ್ಯಾರ್ಥಿಗಳು ಯುನಿಫಾರ್ಮ್(uniform) ಅನ್ನು ಫ್ಯಾಶನ್ ನೆಪದಲ್ಲಿ ತಮಗೆ ಬೇಕಾದ ಹಾಗೆ, ಶಿಕ್ಷಕರ ಕಣ್ಣಿಗೆ ಬೀಳದೆ ಹಾಗೆ ಕತ್ತರಿಸಿಕೊಂಡಿರುತ್ತಾರೆ. ಇದು ಸಾಮಾನ್ಯವಾಗಿ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಮಾಡೋವಂತದ್ದು, ಈ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳು(students) ಧರಿಸುವ ಯುನಿಫಾರ್ಮ್ ಕಂಡರೆ ನಿಮಗೆ ಆಶ್ಚರ್ಯ ಆಗುತ್ತದೆ. ಯಾಕೆ ಗೊತ್ತಾ? ಇಲ್ಲಿ ತರಗತಿ ಲೆವೆಲ್ ಹೆಚ್ಚಾಗುತ್ತಿದ್ದಂತೆ, ಹುಡುಗಿಯರ ಯೂನಿಫಾರ್ಮ್ ಗಾತ್ರ ಕೂಡ ಕಡಿಮೆಯಾಗುತ್ತದೆಯಂತೆ. ಇದೇನಪ್ಪಾ!! ಹೀಗೂ ಇದ್ಯಾ? ಎಲ್ಲಿ ಇಂತಹ ವ್ಯವಸ್ಥೆ ಇರೋದು?

ಇಂತಹ ವ್ಯವಸ್ಥೆ ಇರೋದು ಜಪಾನ್‌(Japan)ನ ನಲ್ಲಿ ಭಾರತ(india) ದಲ್ಲಿನ ಸಾವಿರಾರು ಶಾಲೆಗಳಲ್ಲಿ ಬೇರೆ ಬೇರೆ ರೀತಿಯ ಯುನಿಫಾರ್ಮ್ ಇದೆ. ಹಾಗೆಯೇ ಜಪಾನ್ ನಲ್ಲೂ ಹೆಚ್ಚಿನ ಶಾಲೆಗಳಿಗೆ ವಿವಿಧ ರೀತಿಯ ಸಮವಸ್ತ್ರ ಇದೆ. ಅದರಲ್ಲಿ ಜಪಾನ್ ನ ಈ ಒಂದು ಶಾಲೆಯ ಸಮವಸ್ತ್ರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಜಪಾನ್ ಶಾಲೆಗಳ ವಿದ್ಯಾರ್ಥಿನಿಯರ ಸ್ಕರ್ಟ್‌ಗಳ ಗಾತ್ರ ಭಾರೀ ಚಿಕ್ಕದಾಗಿರುತ್ತವೆ. ಪ್ರಪಂಚದಲ್ಲಿನ ಅಷ್ಟೂ ಶಾಲೆಗಳಿಗೆ ಹೋಲಿಸಿದರೆ
ಜಪಾನ್ ಶಾಲೆಗಳ ವಿದ್ಯಾರ್ಥಿನಿಯರು ಚಿಕ್ಕದಾದ ಸ್ಕರ್ಟ್ಗಳನ್ನು ಧರಿಸುತ್ತಾರೆ ಎಂದು ಹೇಳಲಾಗುತ್ತದೆ. ಇದಿಷ್ಟೇ ಅಲ್ಲ, ಆಶ್ಚರ್ಯ ಏನಂದ್ರೆ, ಇಲ್ಲಿನ ಹುಡುಗಿಯರ ಸಮವಸ್ತ್ರದ ಉದ್ದವನ್ನು ವರ್ಗದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯಂತೆ. ಅಂದರೆ, ಅವರ ವರ್ಗ ಹೆಚ್ಚಾದಂತೆ, ಹುಡುಗಿಯರ ಸ್ಕರ್ಟ್‌ಗಳ ಗಾತ್ರವೂ ಚಿಕ್ಕದಾಗುತ್ತದೆ ಎಂದು ಹೇಳಲಾಗಿದೆ.

ಜಪಾನ್ ನಲ್ಲಿ 1990 ರ ದಶಕದಲ್ಲಿ ಜಪಾನಿನ ಪ್ರಸಿದ್ಧ ಪಾಪ್ ತಾರೆ ನಮಿ ಅಮುರೊ ಅವರ ಕಾರಣದಿಂದಾಗಿ ಸಣ್ಣ ಸ್ಕರ್ಟ್ಗಳನ್ನು ಧರಿಸುವ ಸಂಸ್ಕೃತಿ ಪ್ರಾರಂಭವಾಯಿತು ಎನ್ನಲಾಗಿದೆ. ಮೊದಲು ಜನರು ಇದನ್ನು ಸಾಮಾನ್ಯ ಬಟ್ಟೆಗಳಂತೆ ಧರಿಸುತ್ತಿದ್ದರು. ಆ ನಂತರ ಈ ಪ್ರವೃತ್ತಿಯು ಶಾಲಾ ಉಡುಗೆಯಲ್ಲಿ ವೇಗವಾಗಿ ಟ್ರೆಂಡ್ ಆಗಲು ಪ್ರಾರಂಭವಾಯಿತು. ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಸ್ಕರ್ಟ್ ಧರಿಸಲಾರಂಭಿಸಿದರು.

ಆದರೆ, ಈ ಶಾರ್ಟ್ ಸ್ಕರ್ಟ್ ನಿಯಮದ ಮೇರೆಗೆ ನಡೆಯುತ್ತಿಲ್ಲ.
ಶಾರ್ಟ್ ಸ್ಕರ್ಟ್‌ಗಳ ಬಗ್ಗೆ ಯಾವುದೇ ನಿಯಮವಿಲ್ಲ. ಶಾಲಾ ಹುಡುಗಿಯರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಇವೆಲ್ಲವನ್ನು ಮಾಡುತ್ತಾರೆ. ಇಲ್ಲಿ ವರ್ಗವಾರು ನಿಯಮವಿಲ್ಲ. ಹಲವು ಶಾಲೆಗಳು ಮೊಣಕಾಲಿನವರೆಗಿನ ಸ್ಕರ್ಟ್‌ಗಳನ್ನು ತೊಡಬೇಕು ಎಂದು ಸಲಹೆಯನ್ನು ನೀಡಿವೆ. ಆದರೆ ವಿದ್ಯಾರ್ಥಿಗಳು ಸ್ಕರ್ಟ್‌ನ ಉದ್ದವನ್ನು ಕಡಿಮೆ ಮಾಡಿಕೊಂಡು ಧರಿಸುತ್ತಾರೆ ಎನ್ನಲಾಗಿದೆ.

Leave A Reply

Your email address will not be published.