FD Interest Rates : ಹಿರಿಯ ನಾಗರಿಕರೇ ನಿಮಗೊಂದು ಸಿಹಿ ಸುದ್ದಿ!
FD Interest Rates : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣದುಬ್ಬರವನ್ನು ಎದುರಿಸುವ ಸಲುವಾಗಿ ಈ ಹಿಂದೆ ಹಲವಾರು ಬಾರಿ ರೆಪೋ ದರ(repo rate)ವನ್ನು ಹೆಚ್ಚಿಸಿದೆ. ಇದರ ಪರಿಣಾಮ ಹಲವು ಪ್ರಮುಖ ಬ್ಯಾಂಕ್ ಗಳು ಬಡ್ಡಿದರವನ್ನು ಹೆಚ್ಚಿಸಿವೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್(HDFC Bank) ಮತ್ತು ಐಸಿಐಸಿಐ ಬ್ಯಾಂಕ್(ICICI bank) ನಂತಹ ಹಲವು ಪ್ರಮುಖ ಬ್ಯಾಂಕ್ ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಇದರಿಂದ ಹಿರಿಯ ನಾಗರಿಕರಿಗೆ(Senior Citizens) ಸಿಹಿ ಸುದ್ದಿ ಸಿಕ್ಕಿದೆ. ಸದ್ಯ ಎಫ್‌ಡಿ ಬಡ್ಡಿದರ (FD Interest Rates) ಹೆಚ್ಚಿಸಿದ ಪ್ರಮುಖ ಬ್ಯಾಂಕುಗಳು ಯಾವುವು? ಅವುಗಳ ಸಂಪೂರ್ಣ ವಿವರ ತಿಳಿಯೋಣ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಿರಿಯ ನಾಗರಿಕರಿಗೆ 5 ರಿಂದ 10 ವರ್ಷಗಳ ನಡುವಿನ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7.5 ರ ಬಡ್ಡಿದರವನ್ನು ನೀಡುತ್ತಿದೆ. ಹಾಗೆಯೇ ಅಮೃತ್ ಕಲಾಶ್ ಠೇವಣಿ ಹೊಸ ಫಿಕ್ಸೆಡ್ ಡಿಪಾಸಿಟ್ ಸ್ಕೀಮ್, 7.60 ಶೇಕಡಾ ಬಡ್ಡಿದರವನ್ನು ನೀಡುತ್ತದೆ.
ಐಡಿಬಿಐ ಬ್ಯಾಂಕ್(IDBI Bank) ಸ್ಥಿರ ಠೇವಣಿಗಳ ಮೇಲಿನ ಹೆಚ್ಚುವರಿ ಬಡ್ಡಿ ದರವನ್ನು ಶೇಕಡಾ 0.75 ರಷ್ಟು ಹೆಚ್ಚಿಸಿದ್ದು, ಕನಿಷ್ಠ ಠೇವಣಿ ಮೊತ್ತ 10,000 ರೂ. ಹಾಗೂ ಗರಿಷ್ಠ ಠೇವಣಿ ಮೊತ್ತ 2 ಕೋಟಿ ರೂ. ಆಗಿದೆ. ಹಿರಿಯ ನಾಗರಿಕರು 1 ರಿಂದ 2 ವರ್ಷಗಳ ನಡುವಿನ ಸ್ಥಿರ ಠೇವಣಿಗಳಿಗೆ 444 ದಿನಗಳು ಮತ್ತು 700 ದಿನಗಳನ್ನು ಹೊರತುಪಡಿಸಿ ಶೇ. 7.50 ರ ಬಡ್ಡಿದರವನ್ನು ಗಳಿಸಬಹುದು ಮತ್ತು 2 ರಿಂದ 3 ವರ್ಷಗಳಿಗೆ ಬಡ್ಡಿ ದರವು ಶೇ. 7.25 ಆಗಿರುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್ 5 ರಿಂದ 10 ರ ಅವಧಿಗೆ ಶೇ. 7.75 ರಷ್ಟು ಬಡ್ಡಿದರ ನೀಡುತ್ತಿದ್ದು, ಜೊತೆಗೆ ಎಫ್‌ಡಿಯನ್ನು ಪ್ರಾರಂಭಿಸಿದೆ. ಮಾರ್ಚ್ 31, 2023 ರವರೆಗಿನ ವರ್ಷಗಳು, ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯಿಸುತ್ತದೆ. ಐಸಿಐಸಿಐ(ICICI) ಬ್ಯಾಂಕ್ ಹಿರಿಯ ನಾಗರಿಕರಿಗೆ 7/4/2023 ರವರೆಗೆ 5 ರಿಂದ 10 ವರ್ಷಗಳ ಅವಧಿಗೆ ಸ್ಥಿರ ಠೇವಣಿಗಳ ಮೇಲೆ 7.50 ಶೇಕಡಾ ಬಡ್ಡಿದರವನ್ನು ನೀಡುತ್ತಿದೆ.
ಬಂಧನ್ ಬ್ಯಾಂಕ್(Bandhan Bank) ಶೇ.3.00 ರಿಂದ ಶೇ, 8.50 ವರೆಗಿನ ಬಡ್ಡಿದರದ ಜೊತೆಗೆ ಹಿರಿಯ ನಾಗರಿಕರಿಗೆ 600 ದಿನಗಳವರೆಗೆ ಎಫ್‌ಡಿ ಯೋಜನೆಯೊಂದಿಗೆ ಶೇ. 8.50 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಮೇಲೆ ಶೇ. 7.5 ರಿಂದ ಶೇ. 8 ರವರೆಗೆ ಆದಾಯವನ್ನು ನೀಡುತ್ತಿದ್ದು, ಸಣ್ಣ ಹಣಕಾಸು ಬ್ಯಾಂಕುಗಳು (SFB) ಶೇ.9.5 ರಷ್ಟು ಆದಾಯವನ್ನು ನೀಡುತ್ತಿವೆ.
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 1001 ದಿನಗಳ ಸ್ಥಿರ ಠೇವಣಿಗಳ ಮೇಲೆ ಶೇ. 8.75 ಬಡ್ಡಿಯನ್ನು ನೀಡುತ್ತಿದೆ. ಹಾಗೆಯೇ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇ. 8.76 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1001 ದಿನಗಳ ನಿಶ್ಚಿತ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಶೇ.8.80 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್(ujjivan small finance bank) ಶೇ. 8.75 ಬಡ್ಡಿಯನ್ನು ನೀಡುತ್ತಿದೆ. ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರೀಕರಿಗೆ ಶೇ.9.50 ರಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತಿದೆ.