Udupi : ಜಿಲ್ಲಾಧಿಕಾರಿಯವರ ಕಾರ್ಯಾಲಯ ಉಡುಪಿಯಲ್ಲಿ ಉದ್ಯೋಗವಕಾಶ ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!!

Udupi Job : ಮಾನ್ಯ ಮುಖ್ಯಮಂತ್ರಿಗಳ ಅಮೃತ್‌ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-04 ರ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಹಾಯಕ ಅಭಿಯಂತರರು ಮತ್ತು ಲೆಕ್ಕಾಧಿಕಾರಿ/ಲೆಕ್ಕಾಧೀಶರ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಆದ್ದರಿಂದ ಈ ಕೆಳಗೆ ವಿವರಿಸಿರುವ ಅರ್ಹತೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ.(Udupi Job)

ಹುದ್ದೆಯ ವಿವರ :1. ಸಹಾಯಕ ಅಭಿಯಂತರರು
2. ಲೆಕ್ಕಾಧಿಕಾರಿ/ಲೆಕ್ಕಾಧೀಕ್ಷಕರು

ಸಹಾಯಕ ಅಭಿಯಂತರರು : ವಿದ್ಯಾರ್ಹತೆ: ಬಿ.ಇ ಸಿವಿಲ್ ಅಥವಾ ತತ್ಸಮಾನ ಪದವಿಧರರಾಗಿರತಕ್ಕದ್ದು.

ಅನುಭವ: ಸರ್ಕಾರದಲ್ಲಾಗಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಾಗಲಿ ಕನಿಷ್ಠ 03 ವರ್ಷಗಳು ಸೇವೆ ಸಲ್ಲಿಸಿರತಕ್ಕದ್ದು.

ವಯೋಮಿತಿ: 50 ವರ್ಷದೊಳಗಿರತಕ್ಕದ್ದು.

ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನದ ಜೊತೆಗೆ ಎಂ.ಎಸ್ ಆಫೀಸ್ ಹಾಗೂ ಆಟೋ /ಕ್ಯಾಡ್ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ವಿಭಾಗ, ರಸ್ತೆ, ಚರಂಡಿ, ಕಟ್ಟಡ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವವಿರತಕ್ಕದ್ದು.

ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂದಾಜು ಪಟ್ಟಿಯ ಸಿದ್ಧಪಡಿಸುವುದು, EOT, work Slip, EIRL ಗಳನ್ನು ತಯಾರಿಸಿ ಮತ್ತು ಪರಿಶೀಲಿಸುವ ಅನುಭವವಿರತ್ತಕ್ಕದ್ದು.

ಇ-ಪ್ರಕ್ಯೂ‌ಮೆಂಟ್ ಪೋರ್ಟಲ್ ಮುಖಾಂತರ ಟೆಂಡರ್ ಆಹ್ವಾನಿಸುವುದು, ತಾಂತ್ರಿಕ ಮೌಲ್ಯ ಮಾಪನ ಮತ್ತು ಆರ್ಥಿಕ ಮೌಲ್ಯ ಮಾಪನ ತಯಾರಿಸುವಲ್ಲಿ ಅನುಭವ ಹೊಂದಿರತಕ್ಕದ್ದು.

ಕರ್ತವ್ಯ ನಿರ್ವಹಿಸುವ ಸ್ಥಳ: ಜಿಲ್ಲಾ ನಗರಾಭಿವೃದ್ಧಿ ಕೋಶ ಉಡುಪಿ (ಕೇಂದ್ರ ಸ್ಥಾನ) 9, ಸರ್ಕಾರಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಲೆಕ್ಕಾಧಿಕಾರಿ: ವಿದ್ಯಾರ್ಹತೆ: ಎಂ.ಕಾಂ ಪದವೀಧರರಾಗಿತಕ್ಕದ್ದು, 2. ಅನುಭವ; ಸರ್ಕಾರದಲ್ಲಾಗಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಾಗಲಿ ಕನಿಷ್ಠ 05 ವರ್ಷಗಳು ಸೇವೆ ಸಲ್ಲಿಸಿರತಕ್ಕದ್ದು.

ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನದ ಜೊತೆಗೆ ಎಂ.ಎಸ್ ಆಫೀಸ್ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ವಯೋಮಿತಿ: 50 ವರ್ಷ ಮೀರಿರಬಾರದು

ಸರ್ಕಾರಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ.

ಮೇಲ್ಕಂಡ ಅರ್ಹತೆಯಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿಯೊಂದಿಗೆ, ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ, ಹುಟ್ಟಿದ ದಿನಾಂಕದ ದೃಢೀಕರಣ ಪತ್ರ ಹಾಗೂ ಇನ್ನಿತರ ಸೂಕ್ತ ದಾಖಲೆಗಳೊಂದಿಗೆ ದಿನಾಂಕ:12.03.2023 ರೊಳಗೆ “ಯೋಜನಾ ನಿರ್ದೇಶಕರ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಯವರ ಕಾರ್ಯಲಯ, “ಎ” ಬ್ಲಾಕ್, ನೆಲ ಮಹಡಿ, ಕೊಠಡಿ ಸಂಖ್ಯೆ:101 ರಜತಾದ್ರಿ ಮಣಿಪಾಲ ಉಡುಪಿ-576104″ ಈ ವಿಳಾಸಕ್ಕೆ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0820-2574933 ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಸದ್ರಿ ಅಧಿಸೂಚನೆಯ ತಿದ್ದುಪಡಿ ಅಥವಾ ರದ್ದುಪಡಿಸುವ ಅಧಿಕಾರವನ್ನು ಕಾಯ್ದಿರಿಸಲಾಗಿದೆ.

Leave A Reply

Your email address will not be published.