KCET 2023: :ಕೆಇಎಯಿಂದ ಸಿಇಟಿ ವೇಳಾಪಟ್ಟಿ, ಶುಲ್ಕ, ಇತ್ಯಾದಿ ಬಿಡುಗಡೆ, ಇಲ್ಲಿದೆ ಎಲ್ಲಾ ವಿವರ

KCET Application fees : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಸಾಮಾನ್ಯ ಪ್ರವೇಶ ಪರೀಕ್ಷೆ 2023 (KCET 2023) ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸ್ಗಳು, ಬಿ.ಫಾರ್ಮ್ ಇತ್ಯಾದಿ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆ ಅರ್ಜಿ ಭರ್ತಿ ಮಾಡುವ ಸಲುವಾಗಿ ಸೂಚನೆಗಳನ್ನು ಮಾರ್ಗ ಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ.

ಆಸಕ್ತ ಅಭ್ಯರ್ಥಿಗಳಿಗಾಗಿ ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ರಿಜಿಸ್ಟ್ರೇಷನ್ ವಿಧಾನ, ಸೂಚನೆಗಳು ಮತ್ತು ಮಾರ್ಗಸೂಚಿಗಳು ಹಾಗೂ ಪ್ರಮುಖ ದಿನಾಂಕಗಳನ್ನ ಒಳಗೊಂಡ ಕೆಸಿಇಟಿ-2023 ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮೊದಲು ಈ ಮಾಹಿತಿ ಪುಸ್ತಕವನ್ನು ಓದಿಕೊಂಡು ಬಳಿಕ ಭರ್ತಿ ಮಾಡುವಂತೆ ಸೂಚನೆ ನೀಡಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 02,2023 ರಿಂದ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ಪರೀಕ್ಷೆಯ ಬರೆಯಲು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

KCET 2023 ರಿಜಿಸ್ಟ್ರರೇಶನ್ ಮಾಡೋದು ಹೇಗೆ?(How to KCET 2023 Registration?)
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಬೇಕು. ಆ ನಂತರ ಓಪನ್ ಆದ ಪೇಜ್ನಲ್ಲಿ ‘KCET Online Registration Link’ ಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಓಪನ್ ಆಗುವ ಪೇಜ್ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ, ರಿಜಿಸ್ಟ್ರೇಷನ್ ಪಡೆದುಕೊಳ್ಳಬೇಕು.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಹೀಗಿವೆ:

ಎಸ್ಎಸ್ಎಲ್ಸಿ ಅಂಕಪಟ್ಟಿ. (SSLC Marks Card)
ದ್ವಿತೀಯ ಪಿಯುಸಿ ಪ್ರವೇಶಾತಿ, ಇತರೆ ಮಾಹಿತಿಗಳು, ಆಧಾರ್ ಕಾರ್ಡ್ ನಂಬರ್ (Aadhar Number), ಜನ್ಮ ದಿನಾಂಕ ಪ್ರಮಾಣ ಪತ್ರ( Date of Birth Certificate), ವಾಸಸ್ಥಳ ವಿಳಾಸ/ ದಾಖಲೆಗಳು. (Permanent Address)ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ(Inome Certificate), ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, Passport Size Photo Copy) ಸಹಿ ಸ್ಕ್ಯಾನ್ ಕಾಪಿ ಈ ಎಲ್ಲ ದಾಖಲೆಗಳು ಬೇಕಾಗುತ್ತವೆ.

ಸಾಮಾನ್ಯ ಪ್ರವೇಶ ಪರೀಕ್ಷೆ-2023 (ವೇಳಾಪಟ್ಟಿ-2023-)

20-05-2023 -ಜೀವಶಾಸ್ತ್ರ( ಶನಿವಾರ – ಬೆಳಗ್ಗೆ 10.30 ರಿಂದ 11.50ರವರೆಗೆ ಪರೀಕ್ಷೆ ನಡೆಯಲಿದೆ).
20-05-2023-ಗಣಿತ ಶಾಸ್ತ್ರ (ಮಧ್ಯಾಹ್ನ 2.30 ರಿಂದ 3.50ರವರೆಗೆ ನಡೆಯಲಿದೆ).

21-05-2023 – ಭೌತಶಾಸ್ತ್ರ.(ಬೆಳಗ್ಗೆ 10.30 ರಿಂದ 11.50ರವರೆಗೆ )
21-05-2023- ರಸಾಯನಶಾಸ್ತ್ರ.(ಮಧ್ಯಾಹ್ನ 2.30 ರಿಂದ 3.50ರವರೆಗೆ- )

ಈ ಮೇಲಿನ ವಿಷಯಗಳಿಗೆ ತಲಾ 60 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಕನ್ನಡ ಭಾಷಾ ಪರೀಕ್ಷೆ – ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಯಲಿದೆ.22-05-2023 – ಬೆಳಗ್ಗೆ 11.30 ರಿಂದ 12.30ರವರೆಗೆ – ಹೊರನಾಡು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.

KCET 2023 ಸಂಪೂರ್ಣ ವೇಳಾಪಟ್ಟಿ
kcet-2023- ಸಿಇಟಿ 2023 ಆನ್ಲೈನ್ ಅರ್ಜಿ ಸಲ್ಲಿಕೆಗೆ 02-03-2023 ಆರಂಭಿಕ ದಿನವಾಗಿದೆ.
ಆನ್ಲೈನ್ ಮೂಲಕ ಶುಲ್ಕ ಪಾವತಿ ಮಾಡಲು 07-04-2023 ಕೊನೆಯ ದಿನವಾಗಿದೆ.
ಸಿಇಟಿ 2023 ಆನ್ಲೈನ್ ಅರ್ಜಿ ಸಲ್ಲಿಕೆಗೆ 05-04-2023 ಅಂತಿಮ ದಿನಾಂಕವಾಗಿದೆ.

KCET 2023 ಪ್ರವೇಶ ಪತ್ರ 05-05-2023 ಬಿಡಗಡೆಯಾಗಲಿದೆ.
ದಿನಾಂಕ – 10-05-2023 ರಿಂದ 16-05-2023ರ ವರೆಗೆ ವಿಶೇಷ ಪ್ರವರ್ಗಗಳ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
KCET 2023 ತಾತ್ಕಾಲಿಕ ಕೀ ಉತ್ತರ 25-05-2023 ಬಿಡುಗಡೆಯಾಗಲಿದೆ.

ಆನ್ಲೈನ್ ಮೂಲಕ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು 25-05-2023. ಆರಂಭಿಕ ದಿನವಾಗಿದೆ. 27-05-2023 ಆನ್ಲೈನ್ ಮೂಲಕ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.12-06-2023 ರಂದು ಸಿಇಟಿ 2023 ಫಲಿತಾಂಶ ಪ್ರಕಟವಾಗಲಿದೆ. ಈ ಪರೀಕ್ಷೆಗಳಿಗೆ ಪ್ರಾಯೋಗಿಕ ಪರೀಕ್ಷೆಯ ಕೇಂದ್ರಗಳಲ್ಲಿ ಕೃಷಿಕ ಕೋಟಕ್ಕೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ.

​ಅರ್ಜಿ ಶುಲ್ಕ​ (KCET Application fees)
ಸಾಮಾನ್ಯ ಅಭ್ಯರ್ಥಿಗಳಿಗೆ – ರೂ. 500/-.
ಎಸ್ಸಿ, ಎಸ್ಟಿ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ – ರೂ. 250/-.

ಮೇಲೆ ತಿಳಿಸಿದ ಮಾಹಿತಿ ಅನುಸರಿಸಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.