IRCTC – HDFC ಯಿಂದ ಟ್ರಾವೆಲ್‌ ಕ್ರೆಡಿಟ್‌ ಕಾರ್ಡ್‌ ಯೋಜನೆ! ಏನಿದು ಮಾಹಿತಿ, ಇಲ್ಲಿದೆ ಸಂಪೂರ್ಣ ವಿವರ

IRCTC-HDFC : ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಮತ್ತು HDFC ಬ್ಯಾಂಕ್ ಇವೆರಡೂ ಸಂಸ್ಥೆಗಳು ಸೇರಿ ಬ್ರಾಂಡೆಡ್ ಟ್ರಾವೆಲ್ ಕ್ರೆಡಿಟ್ ಕಾರ್ಡ್(credit card) ಅನ್ನು ಹೊರತಂದಿದೆ. ಏನಿದು ಯೋಜನೆ? ಇದರ ಪ್ರಯೋಜನ ಏನು? ಇವೆಲ್ಲದರ ಮಾಹಿತಿ ಇಲ್ಲಿದೆ.

IRCTC-HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ನ ಪ್ರಯೋಜನಗಳೇನು?

• ಕ್ರೆಡಿಟ್ ಕಾರ್ಡ್ IRCTC ಯ ಟಿಕೆಟಿಂಗ್ ವೆಬ್‌ಸೈಟ್ ಮೂಲಕ ಮತ್ತು IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾದ ರೈಲು ಟಿಕೆಟ್‌ಗಳ ಬುಕಿಂಗ್‌ನಲ್ಲಿ ಗರಿಷ್ಠ ಉಳಿತಾಯವನ್ನು ಒದಗಿಸುತ್ತದೆ.
• ಅಲ್ಲದೆ, IRCTC- HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರು ಆಕರ್ಷಕ ಬೋನಸ್, ಬುಕಿಂಗ್‌ಗಳ ಮೇಲೆ ರಿಯಾಯಿತಿಗಳನ್ನು ಪಡೆಯುತ್ತಾರೆ
• ದೇಶದಾದ್ಯಂತದ ರೈಲ್ವೇ ನಿಲ್ದಾಣಗಳಲ್ಲಿ ಹಲವಾರು ಕಾರ್ಯನಿರ್ವಾಹಕ ಲಾಂಜ್‌ಗಳಿಗೆ ಪ್ರವೇಶ ಪಡೆಯಬಹುದು. ಮತ್ತು ಹಲವು ವಿಶೇಷ ಪ್ರಯೋಜನ ಲಭ್ಯವಾಗುತ್ತದೆ.
• ಈ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೊಸದಾಗಿ ತೆರೆಯಲಾದ ಅತ್ಯಾಧುನಿಕ ಲಾಂಜ್‌ಗಳಿಗೆ ವಿಶೇಷ ಪ್ರವೇಶವನ್ನು ನೀಡುತ್ತದೆ‌.
• ಹಾಗೆಯೇ ಈ ಕ್ರೆಡಿಟ್ ಕಾರ್ಡ್ ಎನ್‌ಪಿಸಿಐನ ರುಪೇ ನೆಟ್‌ವರ್ಕ್‌(rupe network) ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.

IRCTC ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಜನಿ ಹಸಿಜಾ ಅವರು ಅಸೋಸಿಯೇಷನ್ ಬಗ್ಗೆ ಪ್ರತಿಕ್ರಿಯಿಸಿದ್ದು, ‘HDFC ಬ್ಯಾಂಕ್ ದೇಶದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದು. ಅವರೊಡನೆ ಪಾಲುದಾರರಾಗಲು ಸಂತೋಷವಿದೆ. ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಉತ್ತಮ ಪ್ರಯೋಜನಗಳನ್ನು ಮತ್ತು ಅನುಭವವನ್ನು ನೀಡುತ್ತದೆ ಎಂದು ಹೇಳಿದರು.

ಭಾರತೀಯ ರೈಲ್ವೇಯು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದು. ರೈಲು(train) ಪ್ರಯಾಣಿಕರು ಟಿಕೆಟ್ ಗಾಗಿ ಕಾಯುವ ಸಮಯ ಈ ಯೋಜನೆಯಿಂದ ಕಡಿಮೆಯಾಗುತ್ತದೆ. IRCTC ಯೊಂದಿಗೆ ಪಾಲುದಾರರಾಗಿರುವ ಮೊದಲ ಖಾಸಗಿ ವಲಯದ ಬ್ಯಾಂಕ್ HDFC ಆಗಿರುವುದು ಹೆಚ್ಚಿನ ಸಂತೋಷ ನೀಡಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿ ಹೇಳಿದ್ದಾರೆ.

Leave A Reply

Your email address will not be published.