Horiculture Programs : ಪರಿಶಿಷ್ಟ ರೈತರಿಗೆ ಗುಡ್‌ನ್ಯೂಸ್‌! ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ 3 ವಿಶೇಷ ಯೋಜನೆ!

Horiculture Programs :ಸರ್ಕಾರ SC, ST ಯವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಇದೀಗ SC, ST ವರ್ಗದ ರೈತರಿಗೆ(farmers) ವಿಶೇಷ ಯೋಜನೆ ಜಾರಿಯಾಗಿದೆ. ಹೌದು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗದ ರೈತರನ್ನು ತೋಟಗಾರಿಕೆ ಕ್ಷೇತ್ರದಲ್ಲಿ ಆರ್ಥಿಕವಾಗಿ ಸಬಲರನ್ನಾಗಿಸುವ ಸಲುವಾಗಿ ಹೆಸರಘಟ್ಟದ ಮೂರು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ (Horiculture programs for SC and ST).

 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (SC, ST) ಕಾರ್ಯಕ್ರಮ , ಟಿಎಸ್‌ಪಿ (ಟ್ರೈಬಲ್‌ ಸಬ್‌ ಪ್ಲಾನ್‌-ಬುಡಕಟ್ಟು ಜನಾಂಗದ ಯೋಜನೆ) ಹಾಗೂ ನಾರ್ತ್‌ ಈಸ್ಟರ್ನ್‌ ಹಿಲ್‌ (ಎನ್‌ಇಎಚ್‌-ಈಶಾನ್ಯ) ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ವರ್ಗದವರಿಗೆ ಪ್ರತ್ಯೇಕ ಕಾರ್ಯಕ್ರಮಗಳ ಅಡಿಯಲ್ಲಿ ತೋಟಗಾರಿಕೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ಹಾಗೂ ಈ ಚಟುವಟಿಕೆಗಳಿಗೆ ಬೇಕಾದ ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಕೇಂದ್ರ ಸರಕಾರ(central government)ದ ಪ್ರಾಯೋಜಕತ್ವದಡಿ ನಡೆಯುತ್ತಿರುವ ಯೋಜನೆಯಾಗಿದೆ.

ಯಾವೆಲ್ಲಾ ಸೇವೆಗಳು ಲಭ್ಯ?

• ಈ ಯೋಜನೆಯ ಲಾಭ ಪಡೆಯಲು, ರೈತರು(farmers) ಸ್ವಂತ ಜಮೀನು ಹೊಂದಿದ್ದು, ಪಹಣಿ ಹೊಂದಿರಬೇಕು.
• ಅಂತಹವರಿಗೆ ಅರ್ಧ ಎಕರೆವರೆಗೆ ಗುಣಮಟ್ಟದ ಹಣ್ಣಿನ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತದೆ.
• ಹಲಸು, ಮಾವು(mango), ಸೀತಾಫಲ, ಸಪೋಟ, ನಿಂಬೆ, ಚಕ್ಕೋತಾ ಸೇರಿದಂತೆ ಐಐಎಚ್‌ಆರ್‌ ಅಭಿವೃದ್ಧಿಪಡಿಸಿದ ಗುಣಮಟ್ಟದ ಹಣ್ಣಿನ ಸಸಿಗಳನ್ನು ಅರ್ಧ ಎಕರೆಗೆ ನೆಡುವಷ್ಟು ಉಚಿತವಾಗಿ ನೀಡಲಾಗುವುದು.
• ಅದು ಸಾಧ್ಯವಾಗದಿದ್ದರೆ ಒಂದು ಎಕರೆವರೆಗೆ ಗುಲಾಬಿ(rose) ಹೂವಿನ ಸಸಿಗಳನ್ನು ನೀಡಲಾಗುವುದು.
• ಹಾಗೆಯೇ ತುಂತುರು ನೀರಾವರಿ ವ್ಯವಸ್ಥೆಗೆ ಪೈಪ್‌ಗಳನ್ನು ಕೂಡ ನೀಡಲಾಗುತ್ತದೆ.
• ನರ್ಸರಿ ಮಾಡುವವರಿದ್ದರೆ ಅವರಿಗೆ ಬೇಕಾದ ವ್ಯವಸ್ಥೆ
• ಜೇನು ಸಾಕಣೆ (Beekeeping)ಗೆ ಜೇನು ಪೆಟ್ಟಿಗೆ ಹಾಗೂ ಜೇನು ಸಾಕಣೆ ತಂತ್ರಜ್ಞಾನ
• ಅಣಬೆ ಕೃಷಿ (Fungiculture) ಮಾಡುವವರಿದ್ದರೆ ಅಣಬೆ ಸ್ಟ್ಯಾಂಡ್‌ ಮತ್ತು ಅದಕ್ಕೆ ಬೇಕಾದ ಬೀಜ ವಿತರಣೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ರೈತ ಉತ್ಪಾದನಾ ಸಂಘಗಳು (FPO), ಕೃಷಿ ವಿಕಾಸ ಕೇಂದ್ರ (KVK)ಗಳ ಮೂಲಕ ರೈತರು ಗುಂಪು ಗುಂಪಾಗಿ ಅಥವಾ ಪ್ರತ್ಯೇಕವಾಗಿಯೂ ಐಐಎಚ್‌ಆರ್‌ಗೆ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳೇನು?
• ಹೆಸರಿನಲ್ಲಿರುವ ಜಮೀನಿನ ಪಹಣಿ
• ಆಧಾರ್‌ ಕಾರ್ಡ್‌
• ಜಾತಿ ಪ್ರಮಾಣ ಪತ್ರ

ಹಾಗೆಯೇ ಯಾವ ಹಳ್ಳಿಗಳಲ್ಲಿ ಶೇ. 40ರಷ್ಟು ಎಸ್‌ಸಿ/ಎಸ್ಟಿ, ಬುಡಕಟ್ಟು ಜನಾಂಗದ ಜನರು ಇದ್ದಾರೆ, ಆ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ ಡಾ. ಸೇಂಥಿಲ್‌ ಕುಮಾರನ್‌ ಹೇಳಿದ್ದಾರೆ. ಸದ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗದ ರೈತರನ್ನು ತೋಟಗಾರಿಕೆ ಕ್ಷೇತ್ರದಲ್ಲಿ ಆರ್ಥಿಕವಾಗಿ ಸಬಲರನ್ನಾಗಿಸಲು ಈ ಯೋಜನೆ ಜಾರಿಯಾಗಿದೆ.

Leave A Reply

Your email address will not be published.