ಹೋಳಿ ಹಬ್ಬಕ್ಕೆ ಮೊದಲೇ ಸಿಹಿ ಸುದ್ದಿ ಕೊಟ್ಟ ಭಾರತೀಯ ರೇಲ್ವೆ!

Holi special trains 2023 : ಜನರು ಹಬ್ಬದ(festival )ಸಂದರ್ಭದಲ್ಲಿ ತಮ್ಮ ತಮ್ಮ ಊರಿಗೆ ಹಬ್ಬ ಆಚರಿಸಲು ಪ್ರಯಾಣ ಮಾಡುವುದು ಸಾಮಾನ್ಯ. ಆದ್ದರಿಂದ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಒಂದು ಸಂತೋಷದ ಸುದ್ದಿ ನೀಡಿದೆ. ಹೌದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪಶ್ಚಿಮ ರೇಲ್ವೆ ( Holi special trains 2023)ವಿಭಾಗ 11 ಹೋಳಿ ಸ್ಪೆಷಲ್ ಜೋಡಿ ರೈಲುಗಳ 40 ಹೆಚ್ಚುವರಿ ಸಾರಿಗೆಗಳನ್ನು ಚಲಾಯಿಸಲು ನಿರ್ಧರಿಸಿದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಭಾರತೀಯ ರೈಲ್ವೇ ವತಿಯಿಂದ ಪ್ರಯಾಣಿಕರಿಗೆ ವಿಶೇಷ (special )ವ್ಯವಸ್ಥೆ ಮಾಡಲಾಗುತ್ತಿದ್ದು, ಇದರಿಂದ ಊರಿಗೆ ಹೋಗಲು ಟಿಕೆಟ್ ಕನ್ಫರ್ಮ್ ಆಗುವ ತೊಂದರೆ ಇರುವುದಿಲ್ಲ.

ಹೋಳಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗಲು ಪಶ್ಚಿಮ ರೈಲ್ವೆಯು 11 ಜೋಡಿ ‘ಹೋಳಿ ವಿಶೇಷ ರೈಲು’ಗಳ ಹೆಚ್ಚುವರಿ 40 ಟ್ರಿಪ್‌ಗಳನ್ನು ವಿವಿಧ ಸ್ಥಳಗಳಿಗೆ ಓಡಿಸಲು ನಿರ್ಧರಿಸಿದೆ.

ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಪ್ರಕಾರ, ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ 40 ಟ್ರಿಪ್‌ಗಳೊಂದಿಗೆ 11 ಜೋಡಿ ಹೋಳಿ ವಿಶೇಷ ರೈಲುಗಳನ್ನು ಓಡಿಸಲು ಪಶ್ಚಿಮ ರೈಲ್ವೆಯು ಸೂಚಿಸಿದೆ. ಇದಲ್ಲದೆ, ಕಾಯುವ ಪಟ್ಟಿಯನ್ನು ತೆರವುಗೊಳಿಸಲು 10 ಜೋಡಿ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಸಹ ವಿಸ್ತರಿಸಲಾಗಿದೆ.

ಹೋಳಿಯ ಸಮಯದಲ್ಲಿ ಚಲಿಸುವ ವಿಶೇಷ ರೈಲುಗಳ ಸಂಪೂರ್ಣ ಪಟ್ಟಿ ಇಲ್ಲಿದೆ :

• ರೈಲು ಸಂಖ್ಯೆ. 09207 ಬಾಂದ್ರಾ ಟರ್ಮಿನಸ್ – ಭಾವನಗರ ಟರ್ಮಿನಸ್ : 3ನೇ ಮಾರ್ಚ್, 2023 ರಂದು
• ರೈಲು ಸಂಖ್ಯೆ. 09208 ಜಮ್ಮು ತಾವಿ-ಬಾಂದ್ರಾ ಟರ್ಮಿನಸ್ ಎಸಿ ಸೂಪರ್‌ಫಾಸ್ಟ್ : 2ನೇ ಮಾರ್ಚ್, 2023 ರಂದು
• ರೈಲು ಸಂಖ್ಯೆ. 09193 ಸೂರತ್-ಕರ್ಮಾಲಿ: ಮಾರ್ಚ್ 7, 2023 ರಂದು
• ರೈಲು ಸಂಖ್ಯೆ 09194 ಕರ್ಮಾಲಿ-ಸೂರತ್: ಮಾರ್ಚ್ 8, 2023 ರಂದು
• ರೈಲು ಸಂಖ್ಯೆ. 05270 ವಲ್ಸಾದ್-ಮುಜಾಫರ್‌ಪುರ್: 12 ಮತ್ತು 19ನೇ ಮಾರ್ಚ್, 2023 ರಂದು
• ರೈಲು ಸಂಖ್ಯೆ. 05269 ಮುಜಫರ್‌ಪುರ-ವಲ್ಸಾದ್ : 9 ಮತ್ತು 16ನೇ ಮಾರ್ಚ್, 2023 ರಂದು
• ರೈಲು ಸಂಖ್ಯೆ. 09417 ಅಹಮದಾಬಾದ್-ಪಾಟ್ನಾ: ಮಾರ್ಚ್ 6, 2023 ರಂದು
• ರೈಲು ಸಂಖ್ಯೆ 09418 ಪಾಟ್ನಾ-ಅಹಮದಾಬಾದ್: ಮಾರ್ಚ್ 7, 2023 ರಂದು
• ರೈಲು ಸಂಖ್ಯೆ. 09093 ಮುಂಬೈ ಸೆಂಟ್ರಲ್-ಭಗತ್ ಕಿ ಕೋಠಿ : ಮಾರ್ಚ್ 4, 2023 ರಂದು
• ರೈಲು ಸಂಖ್ಯೆ 09094 ಭಗತ್ ಕಿ ಕೋಠಿ – ಮುಂಬೈ ಸೆಂಟ್ರಲ್: ಮಾರ್ಚ್ 5, 2023 ರಂದು
• ರೈಲು ಸಂಖ್ಯೆ. 09201 ಬಾಂದ್ರಾ ಟರ್ಮಿನಸ್-ಭಾವನಗರ ಟರ್ಮಿನಸ್: 6ನೇ ಮಾರ್ಚ್, 2023 ರಂದು
• ರೈಲು ಸಂಖ್ಯೆ. 09202 ಭಾವನಗರ ಟರ್ಮಿನಸ್-ಬಾಂದ್ರಾ ಟರ್ಮಿನಸ್: ಮಾರ್ಚ್ 5, 2023 ರಂದು
• ರೈಲು ಸಂಖ್ಯೆ. 09011 ವಲ್ಸಾದ್ – ಮಾಲ್ಡಾ ಟೌನ್ ಸೂಪರ್‌ಫಾಸ್ಟ್: 2, 9, 16 ಮತ್ತು 23ನೇ ಮಾರ್ಚ್, 2023 ರಂದು
• ರೈಲು ಸಂಖ್ಯೆ. 09012 ಮಾಲ್ಡಾ ಟೌನ್-ವಲ್ಸಾದ್ : 5, 12, 19 ಮತ್ತು 26 ಮಾರ್ಚ್, 2023 ರಂದು
• ರೈಲು ಸಂಖ್ಯೆ 09057 ಉದ್ನಾ-ಮಂಗಳೂರು : 1 ಮತ್ತು 5 ಮಾರ್ಚ್ 2023 ರಂದು
• ರೈಲು ಸಂಖ್ಯೆ 09058 ಮಂಗಳೂರು-ಉದ್ನಾ: 2 ಮತ್ತು 6 ಮಾರ್ಚ್ 2023 ರಂದು
• ರೈಲು ಸಂಖ್ಯೆ. 09412 ಅಹಮದಾಬಾದ್-ಕರ್ಮಾಲಿ : ಮಾರ್ಚ್ 7, 2023 ರಂದು
• ರೈಲು ಸಂಖ್ಯೆ 09411 ಕರ್ಮಾಲಿ-ಅಹಮದಾಬಾದ್: ಮಾರ್ಚ್ 8, 2023 ರಂದು
• ರೈಲು ಸಂಖ್ಯೆ. 09525 ಓಖಾ-ನಹರ್ಲಗುನ್: ಮಾರ್ಚ್ 7, 2023 ರಂದು
• ರೈಲು ಸಂಖ್ಯೆ. 09526 ನಹರ್ಲಗುನ್-ಓಖಾ: ಮಾರ್ಚ್ 11, 2023 ರಂದು
• ರೈಲು ಸಂಖ್ಯೆ. 09343 ಡಾ. ಅಂಬೇಡ್ಕರ್‌ನಗರ-ಪಾಟ್ನಾ: 3, 10 ಮತ್ತು 17ನೇ ಮಾರ್ಚ್, 2023 ರಂದು
• ರೈಲು ಸಂಖ್ಯೆ. 09344 ಪಾಟ್ನಾ-ಡಾ. ಅಂಬೇಡ್ಕರ್ ನಗರ: 04, 11 ಮತ್ತು 18 ಮಾರ್ಚ್, 2023 ರಂದು,

ಈ ಮೇಲಿನಂತೆ ತಿಳಿಸಲಾಗಿರುವ ಸ್ಥಳಗಳಿಗೆ ವಿಶೇಷ ರೈಲಿನಲ್ಲಿ ಹೋಳಿ ಪ್ರಯುಕ್ತ ಪ್ರಯಾಣ ಮಾಡಬಹುದಾಗಿದೆ .

Leave A Reply

Your email address will not be published.