ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಒಟ್ಟು 105ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ

DC Office Recruitment : ಸದ್ಯ ಹಲವಾರು ಸಂಸ್ಥೆಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ. ಅದರಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯೂ ಒಂದು. ಹೌದು, ಬೆಳಗಾವಿ (Belagavi) ಜಿಲ್ಲಾಧಿಕಾರಿ ಕಚೇರಿಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ (DC Office Recruitment). ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 105 ಹುದ್ದೆಗಳು ಖಾಲಿಯಿದ್ದು, ಅಭ್ಯರ್ಥಿಗಳು ಆಫ್​ಲೈನ್(offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಿರುದ್ಯೋಗಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಯ ವಿವರ:
ಹುದ್ದೆಯ ಹೆಸರು: ಪೌರಕಾರ್ಮಿಕ
ಉದ್ಯೋಗ ಸ್ಥಳ: ಬೆಳಗಾವಿ-ಕರ್ನಾಟಕ(Karnataka)

ಎಲ್ಲೆಲ್ಲಿ, ಎಷ್ಟು ಹುದ್ದೆಗಳು ಖಾಲಿ ಇವೆ?
ಸಂಕೇಶ್ವರ ಪುರಸಭೆ- 6 ಹುದ್ದೆಗಳು
ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್- 6
ಅರಭಾವಿ ಪಟ್ಟಣ ಪಂಚಾಯಿತಿ- 15
ಐನಾಪುರ ಪಟ್ಟಣ ಪಂಚಾಯಿತಿ- 17
ಪೀರನವಾಡಿ ಪಟ್ಟಣ ಪಂಚಾಯಿತಿ- 29
ಅಥಣಿ ಪುರಸಭೆ- 32

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 15/3/ 2023

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಕಳುಹಿಸಬೇಕಾದ ವಿಳಾಸ :
ಸಂಕೇಶ್ವರ ಪುರಸಭೆ- ಮುಖ್ಯಾಧಿಕಾರಿಗಳು, ಪುರಸಭೆ, ಸಂಕೇಶ್ವರ
ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್- ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯತ್, ಕಿತ್ತೂರು
ಅರಭಾವಿ ಪಟ್ಟಣ ಪಂಚಾಯಿತಿ- ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಅರಭಾವಿ
ಐನಾಪುರ ಪಟ್ಟಣ ಪಂಚಾಯಿತಿ- ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಐನಾಪುರ
ಪೀರನವಾಡಿ ಪಟ್ಟಣ ಪಂಚಾಯಿತಿ- ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಪೀರನವಾಡಿ
ಅಥಣಿ ಪುರಸಭೆ- ಮುಖ್ಯಾಧಿಕಾರಿಗಳು, ಪುರಸಭೆ, ಅಥಣಿ

ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ.

ಅಧಿಸೂಚನೆ ಲಿಂಕ್ :
ಅಧಿಕೃತ ಅಧಿಸೂಚನೆ –ಸಂಕೇಶ್ವರ ಪುರಸಭೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಐನಾಪುರ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಅರಭಾವಿ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಪೀರನವಾಡಿ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಅಥಣಿ ಪುರಸಭೆ: ಇಲ್ಲಿ ಕ್ಲಿಕ್ ಮಾಡಿ

Leave A Reply

Your email address will not be published.