2nd PUC Exam 2023 : ಸೆಕೆಂಡ್‌ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ, ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪ್ರವೇಶ ಪತ್ರ ಪ್ರಕಟ!!!

PUC Hall Ticket: 2023ರ ದ್ವಿತೀಯ ಪಿಯುಸಿ(2nd PUC Exam 2023 ) ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 2023ರ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಹೊಸದಾಗಿ ಸೇರ್ಪಡೆ ಆಗಿರುವ ಪ್ರವೇಶ ಪತ್ರಗಳನ್ನು ಹಾಗೂ ಕಾಲೇಜುವಾರು ನಾಮಿನಲ್ ರೋಲ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸೂಚಿಸಿದೆ.

2023ರ ದ್ವಿತೀಯ ಪಿಯುಸಿ (2nd PUC Exam 2023 ಕಾಲೇಜುವಾರು ನಾಮಿನಲ್ ರೋಲ್‌ಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಶಾಲಾ-ಕಾಲೇಜು ಮುಖ್ಯಸ್ಥರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ(Karnataka School Examination and Assessment Board) ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಗೆ ಭೇಟಿ ನೀಡಿ PU EXAM PORTAL ಲಾಗಿನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಕುರಿತು ಪರೀಕ್ಷಾ ಮಂಡಲಿ ಸುತ್ತೋಲೆ ಹೊರಡಿಸಿದ್ದು, 2023ರ ದ್ವಿತೀಯ ಪಿಯುಸಿ (2nd PUC Exam 2023)ಮುಖ್ಯ ಪರೀಕ್ಷೆಗೆ ಹಾಜರಾಗುವ, ಹೊಸದಾಗಿ ಸೇರ್ಪಡೆ ಆಗಿರುವ 265 ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ( Download)ಮಾಡಿಕೊಳ್ಳುವ ಜೊತೆಗೆ ಅವಶ್ಯಕ ವೆನಿಸಿದರೆ ಪರಿಷ್ಕರಣೆಗಳನ್ನು ಮಾಡಲು ವಿಧ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಳಿಕ ಅಂತಿಮ ಪ್ರವೇಶ ಪತ್ರಗಳನ್ನು (2nd PUC Hall Ticket) ಕೂಡ ಅಪ್ಲೋಡ್ ಮಾಡಲಾಗಿದ್ದು, ಆದರೆ ಅಂತಿಮ ಪ್ರವೇಶ ಪತ್ರದಲ್ಲಿ ಸುಮಾರು 5,802 ವಿದ್ಯಾರ್ಥಿಗಳ ಭಾವ ಚಿತ್ರಗಳು ಪ್ರಕಟವಾಗದೆ ಇರುವುದು ಪತ್ತೆಯಾಗಿದೆ. ಹೀಗಾಗಿ, ಸದರಿ ವಿದ್ಯಾರ್ಥಿಗಳ ಪ್ರವೇಶ ಪತ್ರಗಳಲ್ಲಿ ಬಿಟ್ಟು ಹೋಗಿರುವ ಭಾವಚಿತ್ರಗಳನ್ನು 03-03-2023 ದಿನಾಂಕದ ಒಳಗೆ ಕಡ್ಡಾಯವಾಗಿ ಅಪ್ಲೋಡ್ ಮಾಡಿಕೊಂಡು ಪರಿಷ್ಕೃತ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸೂಚನೆ ನೀಡಲಾಗಿದೆ.

ಕರ್ನಾಟಕ ಮಾರ್ಚ್ 2023ರ ದ್ವಿತೀಯ ಪಿಯುಸಿ ವಿಷಯವಾರು ಅಂತಿಮ ವೇಳಾಪಟ್ಟಿ ಹೀಗಿದೆ.
09-03-2023 – ಕನ್ನಡ, ಅರೇಬಿಕ್.
11-03-2023 -ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ.
13-03-2023- ಅರ್ಥಶಾಸ್ತ್ರ.
14-03-2023- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ.
15-03-2023- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ , ಫ್ರೆಂಚ್.
16-03-2023 – ತರ್ಕಶಾಸ್ತ್ರ, ವ್ಯವಹಾಎ ಅಧ್ಯಯನ.
17-03-2023 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್.
18-03-2023- ಭೂಗೋಳಶಾಸ್ತ್ರ, ಜೀವಶಾಸ್ತ್ರ.
20-03-2023- ಇತಿಹಾಸ, ಭೌತಶಾಸ್ತ್ರ.
21-03-2023 – ಹಿಂದಿ.
23-03-2023- ಇಂಗ್ಲಿಷ್.
25-03-2023 -ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
27-03-2023 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ.
29-03-2023 -ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ.

ಒಂದು ವೇಳೆ, ದಿನಾಂಕ 03-03-2023 ರೊಳಗೆ ಭಾವಚಿತ್ರಗಳನ್ನು ಅಪ್ಲೋಡ್ ಮಾಡದೇ ಇರುವುದು ಕಂಡುಬಂದರೆ ಮುಂದಿನ ಪರಿಣಾಮಗಳಿಗೆ ಸಂಬಂಧಿಸಿದಂತೆ ಕಾಲೇಜುಗಳ ಪ್ರಾಂಶುಪಾಲರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಡಲಿ ಸುತ್ತೋಲೆಯಲ್ಲಿ ಸೂಚನೆ ನೀಡಿದೆ ಎನ್ನಲಾಗಿದೆ. ಪ್ರವೇಶ ಪತ್ರ ಡೌನ್‌ಲೋಡ್‌(2nd PUC Hall Ticket) ಮಾಡಿಕೊಂಡ ನಂತರ ಶಾಲಾ-ಕಾಲೇಜು ಮುಖ್ಯಸ್ಥರಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಲು ಮಂಡಲಿ ಸೂಚನೆ ನೀಡಿದ್ದು, ಜೊತೆಗೆ 2023ರ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳಲ್ಲಿ ಬಿಟ್ಟುಹೋಗಿರುವ ಭಾವಚಿತ್ರಗಳನ್ನು ಕಡ್ಡಾಯವಾಗಿ ಅಪ್ಲೋಡ್‌ ಮಾಡುವಂತೆ ಸೂಚನೆ ನೀಡಿದೆ.

Leave A Reply

Your email address will not be published.