Team India: ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಈ ಸ್ಫೋಟಕ ಬೌಲರ್!
Team india : ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ(holkar stadium) ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ(Australia) ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್(Border Gavaskar Trophy 3rd Test) ಪಂದ್ಯವು ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ(Team India) ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಈ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮುಖ್ಯವಾದ ಬದಲಾವಣೆ ಆಗಿವೆ. ಯಾವೆಲ್ಲಾ ಬದಲಾವಣೆ? ಟೀಂ ಇಂಡಿಯಾಗೆ ದಿಢೀರ್ ಎಂಟ್ರಿ ಕೊಟ್ಟ ಮಾರಕ ಬೌಲರ್ ಯಾರು? ನೋಡೋಣ.
3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ 2 ಪ್ರಮುಖ ಬದಲಾವಣೆಗಳಾಗಿದ್ದು, ಕೆ.ಎಲ್.ರಾಹುಲ್ (KL Rahul) ಬದಲಿಗೆ ಶುಭಮನ್ ಗಿಲ್(Shubman Gill) ತಂಡದಲ್ಲಿ ಆಡಲಿದ್ದಾರೆ. ಹಾಗೆಯೇ ಮತ್ತೊಂದು ಬದಲಾವಣೆ ಏನೆಂದರೆ, ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ (Mohammed Shami) ಬದಲಿಗೆ ವೇಗದ ಬೌಲರ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯಾರು ಆ ವೇಗದ ಬೌಲರ್? ಮೊಹಮ್ಮದ್ ಶಮಿ ಬದಲಿಗೆ ವೇಗದ ಬೌಲರ್ ಉಮೇಶ್ ಯಾದವ್ (Umesh Yadav) ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ಉಮೇಶ್ಗೆ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ನಿರಂತರವಾಗಿ ಆಡುವ ಅವಕಾಶ ಸಿಗುವುದು ತುಂಬಾನೆ ಕಡಿಮೆ. 3ನೇ ಟೆಸ್ಟ್ನಲ್ಲಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಟಾಸ್ ವೇಳೆ ನಾಯಕ ರೋಹಿತ್ ಹೇಳಿದ್ದರು. ಹಾಗಾಗಿ ಅವರ ಸ್ಥಾನದಲ್ಲಿ ವೇಗಿ ಉಮೇಶ್ಗೆ ಅವಕಾಶ ನೀಡಲಾಗಿದೆ. ಉಮೇಶ್ ಯಾದವ್ ಇದುವರೆಗೆ ಟೆಸ್ಟ್ ಕ್ರಿಕೆಟ್(test cricket) ನಲ್ಲಿ 54 ಪಂದ್ಯಗಳನ್ನು ಆಡಿದ್ದಾರೆ. 106 ಇನ್ನಿಂಗ್ಸ್ಗಳಲ್ಲಿ 165 ವಿಕೆಟ್ ಪಡೆದಿರುವ ಅದ್ಭುತ, ವೇಗದ ಬೌಲರ್(Fast bowler) ಆಗಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ(india) ತಂಡ ಮೊದಲೆರಡು ಪಂದ್ಯಗಳನ್ನು ಗೆದ್ದು, 2-0 ಮುನ್ನಡೆ ಸಾಧಿಸಿದೆ. 3ನೇ ಪಂದ್ಯವನ್ನೂ ಗೆದ್ದರೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(championship)ನ ಫೈನಲ್ಗೆ ಎಂಟ್ರಿ ಕೊಡಲಿದೆ.