ರೈಲಿನೊಳಗೆ ಹೆಣ್ಮಕ್ಕಳ ಗಾಂಜಾ ಅಮಲು, ವೀಡಿಯೋ ವೈರಲ್!

Share the Article

Viral video: ರೂಲ್ಸ್ ಗಳಿರುವುದೇ ಬ್ರೇಕ್ ಮಾಡೋದಕ್ಕೆ ಎಂಬ ಫಿಲಾಸಫಿ ಯನ್ನ ಪಾಲಿಸುವವರೇ ಹೆಚ್ಚು ಮಂದಿ. ಅದರಲ್ಲಿಯೂ ಯುವ ಜನತೆಯ ಕಥೆ ಕೇಳೋದೇ ಬೇಡ. ಟ್ರಾಫಿಕ್ ರೂಲ್ಸ್( Traffic Rules) ಗಳನ್ನ ಬ್ರೇಕ್ ಮಾಡಿ ಪೋಲೀಸರ ಕೈಯಲ್ಲಿ ತಗಾಲಾಕಿಕೊಳ್ಳುತ್ತೇವೆ ಎಂದಾಗ ಅಲ್ಲಿಂದ ಹೇಗೋ ಎಸ್ಕೇಪ್ ಆಗುವವರು ಕೂಡ ಇದ್ದಾರೆ. ಅದೇ ರೀತಿ, ಬಸ್ಸು, ರೈಲಿನಲ್ಲಿ ಸಿಗರೇಟ್ (Smoking)ಸೇದುವ ಹವ್ಯಾಸ ಕೂಡ ಕೆಲವರಿಗೆ ಇದೆ.

ರೈಲ್ವೇ ಕಾಯಿದೆಯ ಸೆಕ್ಷನ್ 167 ರ ಅಡಿಯಲ್ಲಿ ರೈಲುಗಳ(Train) ಒಳಗೆ ಇಲ್ಲವೇ ರೈಲ್ವೆ ಆವರಣದಲ್ಲಿ ಧೂಮಪಾನ ಅಥವಾ ಮದ್ಯಪಾನ(Drinking) ಮಾಡುವುದನ್ನು ನಿಷೇದ ಮಾಡಲಾಗಿದೆ. ಆದರೆ, ಯಾವುದೇ ಕಾನೂನಿದ್ದರೂ ಕೂಡ ಅವುಗಳನ್ನೆಲ್ಲ ಗಳಿಗೆ ತೂರಿ ಕೆಲವರು ರೈಲಿನಲ್ಲಿ ಪ್ರಯಾಣಿಸುವಾಗ ಸಿಗರೇಟ್ ಸೇದುವ ಚಟ ರೂಡಿಸಿಕೊಳ್ಳುತ್ತಾರೆ.

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ(Video) ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video)ಆಗಿ ಸಂಚಲನ ಮೂಡಿಸುತ್ತವೆ. ಇದೀಗ, ವೈರಲ್ ಆಗಿರುವ ವಿಡಿಯೋದಲ್ಲಿ ಟಾಟಾನಗರದಿಂದ ಕತಿಹಾರ್‌ಗೆ ಸಂಚರಿಸುತ್ತಿದ್ದ ರೈಲಿನಲ್ಲಿದ್ದ ಲೇಡಿ ಗ್ಯಾಂಗ್ ಒಂದು ರೈಲಿನಲ್ಲಿ ಜಾಲಿಯಾಗಿ ಗಾಂಜಾ ಹಾಗೂ ಧೂಮಪಾನ ಮಾಡಿದ್ದು ವೈರಲ್ ಆಗಿದೆ.’ಯುವತಿಯರು ರೈಲಿನೊಳಗೆ ಗಾಂಜಾ ಮತ್ತು ಸಿಗರೇಟ್’ ಸೇದುತ್ತಿರುವ ವೀಡಿಯೊವನ್ನು ಮಹಿಳೆಯೊಬ್ಬರು ಪೋಸ್ಟ್( Post)ಮಾಡಿದ್ದು,ರೈಲಿನೊಳಗೆ ಯುವತಿಯರು ಗಾಂಜಾ ಮತ್ತು ಸಿಗರೇಟ್’ ಸೇದುತ್ತಿರುವ ವೀಡಿಯೊವನ್ನು ಮಹಿಳೆಯೊಬ್ಬರು ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಟಾನಗರದಿಂದ ಕತಿಹಾರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಯುವತಿಯರು ಗಾಂಜಾ ಸೇವನೆ ಮಾಡುತ್ತಿದ್ದ ದೃಶ್ಯಗಳನ್ನು ವೀಡಿಯೋ ಮಾಡಿದ್ದಾರೆ. ಅಸನ್ಸೋಲ್‌ನಲ್ಲಿ ರೈಲು ಹತ್ತಿದ ಮಹಿಳೆಯರು ಇಡೀ ರಾತ್ರಿ ‘ಗಾಂಜಾ ಮತ್ತು ಸಿಗರೇಟ್’ ಸೇದಿರುವ ಕುರಿತು ಆರೋಪ(complain) ಮಾಡಿ ಟ್ವೀಟ್‌ನಲ್ಲಿ ಮಹಿಳೆ(women) ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಹಿಳೆಯ ಟ್ವೀಟ್‌ಗೆ(Tweet) ಪ್ರತಿಕ್ರಿಯಿಸಿದ ‘ರೈಲ್ವೆ ಸೇವಾ’ ಪ್ರಯಾಣದ ಹೆಚ್ಚಿನ ವಿವರ ನೀಡುವಂತೆ ಮನವಿ ಮಾಡಿದೆ.

ರೈಲ್ವೆ ಸೇವಾ ‘ದಯವಿಟ್ಟು ಪ್ರಯಾಣದ ವಿವರಗಳನ್ನು (PNR/Train No.) ಮತ್ತು ಮೊಬೈಲ್ ಸಂಖ್ಯೆಯನ್ನು DM ಮೂಲಕ ರೈಲ್ವೇ ಸೇವಾ ಇಲಾಖೆಯೊಂದಿಗೆ ಹಂಚಿಕೊಳ್ಳಲು ಮನವಿ ಮಾಡಿದೆ. ನೀವು ನೇರವಾಗಿ http://railmadad.indianrailways.gov.in ನಲ್ಲಿ ನಿಮ್ಮ ದೂರಗಳನ್ನು ವ್ಯಕ್ತಪಡಿಸಬಹುದು ಇಲ್ಲವೇ ತ್ವರಿತ ಪರಿಹಾರಕ್ಕಾಗಿ 139 ಅನ್ನು ಡಯಲ್ ಮಾಡಬಹುದು’ ಎಂದು ಕೂಡ ರೈಲ್ವೇ ಸೇವಾ ಟ್ವೀಟ್ ಮೂಲಕ ತಿಳಿಸಿದೆ.

ನೀವು ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಈ ವಿಚಾರ ತಿಳಿದುಕೊಳ್ಳುವುದು ಉತ್ತಮ. ರೈಲ್ವೇ ಕಾಯಿದೆಯ ಸೆಕ್ಷನ್ 167 ರ ಅನುಸಾರ, ಸಹ-ಪ್ರಯಾಣಿಕರ ಆಕ್ಷೇಪಣೆಯ ಹೊರತಾಗಿ ಕಂಪಾರ್ಟ್‌ಮೆಂಟ್‌ನಲ್ಲಿ ಧೂಮಪಾನ ಮಾಡುವುದು ಕಂಡುಬಂದಲ್ಲಿ ₹100 ವರೆಗೆ ದಂಡ ವಿಧಿಸಲಾಗುತ್ತದೆ. ಭಾರತೀಯ ರೈಲ್ವೇ ರೈಲುಗಳಲ್ಲಿ ಧೂಮಪಾನ ಮಾಡುವ ಪ್ರಯಾಣಿಕರನ್ನು ಬಂಧಿಸುವ ಜೊತೆಗೆ ಇನ್ನಿತರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ.

Leave A Reply