SSLC ಪಾಸಾದವರಿಗೆ ಉದ್ಯೋಗವಕಾಶ : ಮಾಸಿಕ ರೂ.52ಸಾವಿರ ಸಂಬಳ, ಟೈಪಿಸ್ಟ್ ಹುದ್ದೆಗಳೂ ಇವೆ, ಈಗಲೇ ಅರ್ಜಿ ಸಲ್ಲಿಸಿ
Kalaburagi District Court Recruitment 2023: ಕಲಬುರಗಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ(Kalaburagi District Court Recruitment 2023) ಆರಂಭಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 60 ಹುದ್ದೆ(job)ಗಳು ಖಾಲಿಯಿದ್ದು, ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಿರುದ್ಯೋಗಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಇಂತಹ ಅವಕಾಶವನ್ನು ಮಿಸ್ ಮಾಡ್ಕೋಬೇಡಿ. ಈ ಕೂಡಲೇ ಅರ್ಜಿ ಸಲ್ಲಿಸಿ.
ಹುದ್ದೆಯ ವಿವರ:
ಸ್ಟೆನೋಗ್ರಾಫರ್(Stenographer) (ಗ್ರೇಡ್ III)- 8
ಟೈಪಿಸ್ಟ್- 9
ಟೈಪಿಸ್ಟ್- ಕಾಪಿಯಿಸ್ಟ್- 1
ಪಿಯೋನ್(Peon)- 29
ಪ್ರೊಸೆಸ್ ಸರ್ವರ್(Process Server)- 13
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 24/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 25/3/ 2023
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27/3/2023
ವಿದ್ಯಾರ್ಹತೆ:
ಸ್ಟೆನೋಗ್ರಾಫರ್ (ಗ್ರೇಡ್ III)- ಪಿಯುಸಿ(puc), ಡಿಪ್ಲೊಮಾ
ಟೈಪಿಸ್ಟ್- ಪಿಯುಸಿ, ಡಿಪ್ಲೊಮಾ(diploma)
ಟೈಪಿಸ್ಟ್- ಕಾಪಿಯಿಸ್ಟ್- ಪಿಯುಸಿ, ಡಿಪ್ಲೊಮಾ
ಪಿಯೋನ್- ಎಸ್ಎಸ್ಎಲ್ಸಿ(SSLC)
ಪ್ರೊಸೆಸ್ ಸರ್ವರ್- ಎಸ್ಎಸ್ಎಲ್ಸಿ
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ.
ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/2ಬಿ/3ಎ/3ಬಿ ಅಭ್ಯರ್ಥಿಗಳು- 3 ವರ್ಷ
ಮಾಸಿಕ ವೇತನ:
ಸ್ಟೆನೋಗ್ರಾಫರ್ (ಗ್ರೇಡ್ III)- ₹ 27,650-52,650
ಟೈಪಿಸ್ಟ್- ₹ 21,400-42,000
ಟೈಪಿಸ್ಟ್- ಕಾಪಿಯಿಸ್ಟ್- ₹ 21,400-42,000
ಪಿಯೋನ್- ₹ 17,000- 28,950
ಪ್ರೊಸೆಸ್ ಸರ್ವರ್- ₹ 19,950- 37,900
ಅರ್ಜಿ ಶುಲ್ಕ: SC/ST/ಪ್ರವರ್ಗ-1/ PH ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಆದರೆ, ಸಾಮಾನ್ಯ/ ಪ್ರವರ್ಗ- 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ಇರಲಿದೆ. ಈ ಶುಲ್ಕವನ್ನು
ಆನ್ಲೈನ್ ಅಥವಾ ಚಲನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್(merit list), ಟೈಪಿಂಗ್ ಟೆಸ್ಟ್ ಕಂಪ್ಯೂಟರ್ (computer) ಪ್ರಾವೀಣ್ಯತೆ ಪರೀಕ್ಷೆ ಹಾಗೂ ಸಂದರ್ಶನ(interview) ದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ: ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ districts.ecourts.gov.in ಗೆ ಭೇಟಿ ನೀಡಿ.