Narendra Modi: ಹವಾಯಿ ಚಪ್ಪಲಿ ಧರಿಸುವವನೂ ವಿಮಾನದಲ್ಲಿ ಪ್ರಯಾಣಿಸ್ಬೇಕು! ಸ್ವದೇಶಿ ನಿರ್ಮಿತ ವಿಮಾನಗಳು ಹೆಚ್ಚಾಗಬೇಕು: ಪ್ರಧಾನಿ ಮೋದಿ

PM Modi: ಬಿಜೆಪಿ(BJP) ಅಧಿಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಿಗೂ ಏರ್ ಪೋರ್ಟ್(Airport) ಆಗಿದೆ. ಇನ್ನು ಹವಾಯಿ ಚಪ್ಪಲಿ ಧರಿಸುವವರೂ ವಿಮಾನದಲ್ಲಿ ಪ್ರಯಾಣಿಸ್ಬೇಕು. ಹೀಗಾಗಿ ಮುಂದಿನ ದಿನ​ಗಳಲ್ಲಿ ದೇಶಕ್ಕೆ ಸಾವಿ​ರಾರು ವಿಮಾ​ನ​ಗಳ ಅವ​ಶ್ಯ​ಕತೆ ಬೀಳ​ಲಿ​ದೆ. ಸದ್ಯ ನಾವು ಪ್ರಯಾ​ಣಿ​ಕರ ವಿಮಾ​ನ​ಗ​ಳಿ​ಗಾಗಿ ವಿದೇ​ಶ​ಗಳನ್ನು ಅವ​ಲಂಬಿ​ಸಿ​ದ್ದೇ​ವೆ. ಆದರೆ ಭಾರ​ತೀ​ಯರು ‘ಮೇಡ್‌ ಇನ್‌ ಇಂಡಿಯಾ’(Made In India)ಪ್ರಯಾ​ಣಿ​ಕರ ವಿಮಾ​ನ​ದ​ಲ್ಲಿ ಪ್ರಯಾ​ಣಿ​ಸುವ ದಿನವೂ ಶೀಘ್ರ ಬರ​ಲಿ​ದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಹೇಳಿದ್ದಾರೆ.

ಯಡಿಯೂರಪ್ಪನ(Yadiyurappa)ವರ ಕನಸಿನ ಕೂಸಾದ ಶಿವ​ಮೊಗ್ಗ(Shivmogga) ವಿಮಾನ ನಿಲ್ದಾಣ ಸೇರಿ ಸುಮಾರು .7,165 ಕೋಟಿ ಮೌಲ್ಯದ ಹಲವು ಯೋಜನೆಗಳ ಉದ್ಘಾಟನೆ ಮತ್ತು ಕೆಲವು ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತ​ನಾ​ಡಿದ ಅವರು, ಏರ್‌​ ಇಂಡಿಯಾವು ನೂರಾರು ವಿಮಾ​ನ​ಗ​ಳಿ​ಗಾಗಿ ವಿದೇಶಿ ಕಂಪ​ನಿ​ಗ​ಳೊಂದಿಗೆ ಮಾಡಿ​ಕೊಂಡಿ​ರುವ ಒಪ್ಪಂದದ ವಿಚಾ​ರ​ವನ್ನು ಪರೋ​ಕ್ಷ​ವಾಗಿ ಪ್ರಸ್ತಾ​ಪಿ​ಸಿ​ದರು. ಜತೆಗೆ, ಸದ್ಯ​ದಲ್ಲೇ ದೇಶೀ ನಿರ್ಮಿತ ಪ್ರಯಾಣಿ​ಕರ ವಿಮಾನಗಳು ಹಾರಾಟ ನಡೆ​ಸುವ ದಿನವೂ ದೂರ​ವಿಲ್ಲ ಎಂಬ ಸುಳಿವು ನೀಡಿ​ದ​ರು.

ದೇಶ​ಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 2014 ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೇವಲ 9 ವರ್ಷದಲ್ಲಿ ಇಷ್ಟೇ ಪ್ರಮಾಣದ ವಿಮಾನ ನಿಲ್ದಾಣಗಳನ್ನು ಹೊಸ​ದಾಗಿ ನಿರ್ಮಿಸಿದ್ದೇವೆ ಎಂದು ತಮ್ಮ ಸರ್ಕಾ​ರದ ಸಾಧನೆ ಬಣ್ಣಿ​ಸಿ​ದ​ ಅವರು, ಹವಾಯಿ ಚಪ್ಪಲಿ ಹಾಕಿಕೊಂಡವರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬುದು ನಮ್ಮ ಗುರಿ. ಅದು ಸಾಧ್ಯ​ವಾ​ಗು​ತ್ತಿ​ರು​ವು​ದನ್ನು ನಾನೀಗ ನೋಡು​ತ್ತಿ​ದ್ದೇನೆ ಎಂದರು.

ನಷ್ಟ​ದ ಹೊರೆ​ಯಿಂದಾಗಿ ಇತ್ತೀ​ಚೆಗೆ ಖಾಸ​ಗಿ​ಯ​ವ​ರಿಗೆ ಮಾರಾ​ಟ​ವಾ​ಗಿ​ರುವ ದೇಶದ ಪ್ರತಿ​ಷ್ಠಿತ ಏರ್‌​ಇಂಡಿಯಾ ವಿಮಾ​ನದ ವಿಚಾ​ರ​ವನ್ನೂ ಭಾಷ​ಣ​ದಲ್ಲಿ ಪ್ರಸ್ತಾ​ಪಿ​ಸಿದ ಅವರು, ಈ ಸರ್ಕಾರಿ ಏರ್‌​ಲೈ​ನ್ಸ್‌ನ(Airlines) ವೈಫ​ಲ್ಯಕ್ಕೆ ಕಾಂಗ್ರೆಸ್ಸೇ(Congress) ಕಾರಣ ಎಂದು ಆರೋ​ಪಿ​ಸಿ​ದ​ರು. 2014ಕ್ಕಿಂತ ಮೊದಲು ಕಾಂಗ್ರೆಸ್‌ ಸರ್ಕಾ​ರದ ಅವ​ಧಿ​ಯಲ್ಲಿ ಏರ್‌ ಇಂಡಿಯಾವು ಋುಣಾ​ತ್ಮಕ ವಿಚಾ​ರ​ಗ​ಳಿ​ಗಾ​ಗಿ, ಹಗ​ರ​ಣ​ಗಳು ಮತ್ತು ನಷ್ಟ​ಗಳಿಂದಾ​ಗಿಯೇ ಸುದ್ದಿ​ಯ​ಲ್ಲಿ​ತ್ತು. ಆದರೆ ಇದೀಗ ಏರ್‌ ಇಂಡಿ​ಯಾವು ಬದ​ಲಾ​ಗಿದೆ, ವಿಶ್ವದ ಮುಂದೆ ಭಾರ​ತದ ಹೊಸ ಸಾಮ​ರ್ಥ್ಯ​ವನ್ನು ಪ್ರದ​ರ್ಶಿ​ಸು​ತ್ತಿ​ದೆ ಎಂದ​ರು.

ಅಲ್ಲದೆ ಶಿವಮೊಗ್ಗವನ್ನು ಹಾಡಿ ಹೊಗಳಿದ ಅವರು ‘ಆಗುಂಬೆ ಸೂರ್ಯಾಸ್ತವನ್ನು ಎಂದಿಗೂ ಮರೆಯಲು ಆಗಲ್ಲ, ಇಲ್ಲಿ ಜೋಗ ಜಲಪಾತವೂ(Jog Falls)ಇದೆ. ಸಿಗಂದೂರು ಚೌಡೇಶ್ವರಿ(Sigandhuru Chowdeshwari), ಕೋಟೆ ಆಂಜನೇಯ(Kote Anjaneya) ದೇವಸ್ಥಾನವಿದೆ. ಇಲ್ಲಿಗೆ ವಿಮಾನ ಪ್ರಯಾಣದ ಸಂಪರ್ಕ ಅವಶ್ಯಕವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಭಿವೃದ್ಧಿ ಆಗಲಿದೆ.. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣವಾದ್ರೆ ಸಾಕಷ್ಟು ಅನುಕೂಲವಾಗುತ್ತದೆ. ಹಾವೇರಿವರೆಗೂ ಜನರಿಗೆ ಸಂಪರ್ಕ ಸಾಧ್ಯವಾಗುತ್ತದೆ ಎಂದರು.

Leave A Reply

Your email address will not be published.