EPFO : ಇಪಿಎಫ್‌ಒ ಅಧಿಕ ಪಿಂಚಣಿ ಡೆಡೈಲೈನ್ ವಿಸ್ತರಣೆ!
Higher Pension: ಇಪಿಎಫ್ಒ( EPF O) ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯುನಿವರ್ಸಲ್ ಅಕೌಂಟ್ ನಂಬರ್ (UAN) ಮೂಲಕ ಇ-ನಾಮನಿರ್ದೇಶನವನ್ನು ಮಾಡಬಹುದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ಈ ಮಾಹಿತಿ ಅರಿತಿರುವುದು ಒಳ್ಳೆಯದು.
ಇಪಿಎಫ್ ಈ ಹಿಂದೆ ಅಧಿಕ ಪಿಂಚಣಿ( Higher Pension) ಯನ್ನು ಆಯ್ಕೆ ಮಾಡಲು ಮಾರ್ಚ್ 3 ಕೊನೆಯವರೆಗೆ ಗಡುವು ನೀಡಿತ್ತು. ಇತ್ತೀಚೆಗಷ್ಟೆ ಸಕ್ರಿಯ ಮಾಡಲಾಗಿದ್ದ ಇಪಿಎಫ್ಒ ಏಕೀಕೃತ ಸದಸ್ಯರ ಪೋರ್ಟಲ್ನಲ್ಲಿನ ಯುಆರ್ಎಲ್ ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಪಡೆಯಲು ನಿಗದಿ ಮಾಡಿದ್ದ ಗಡುವನ್ನು ಇಪಿಎಫ್ಒ(EPFO) ಮೇ 3ರ ತನಕ ವಿಸ್ತರಣೆ ಮಾಡಿದೆ. ಹೀಗಾಗಿ, ಈ ಗಡುವಿನ ಅವಧಿಯನ್ನು 60 ದಿನ ವಿಸ್ತರಣೆ ಮಾಡಿದಂತಾಗಿದೆ.
ಇತ್ತೀಚೆಗೆ ಇಪಿಎಫ್ಒ ಚಂದಾದಾರರು ಮತ್ತು ಅವರ ಉದ್ಯೋಗದಾತರು ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಜಂಟಿಯಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.ಅಧಿಕ ಪಿಂಚಣಿ ಆಯ್ಕೆಗೆ ನಾಲ್ಕು ತಿಂಗಳ ಅವಧಿಯು ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಮಾರ್ಚ್ 3 ಕ್ಕೇ ಮುಗಿಯಬೇಕಾಗಿತ್ತು. ಇದರಿಂದಾಗಿ ಮಾರ್ಚ್ 3 2023 ರಲ್ಲಿ ಗಡುವು ಕೊನೆಗೊಳ್ಳುವ ಆತಂಕ ಸದಸ್ಯರಲ್ಲಿ ಮನೆ ಮಾಡಿತ್ತು. ಆದರೆ, ಇದೀಗ, EPFO ಪಿಂಚಣಿ ಆಯ್ಕೆಯ ಅವಧಿ ವಿಸ್ತರಣೆ ಮಾಡಿ ಸದಸ್ಯರಿಗೆ ಕೊಂಚ ಮಟ್ಟಿಗೆ ನೆಮ್ಮದಿ ನೀಡಿದೆ.
ಈ ಹಿಂದೆ, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಎಲ್ಲ ಅರ್ಹ ಸದಸ್ಯರಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು 4 ತಿಂಗಳ ಕಾಲಾವಕಾಶವನ್ನು ಒದಗಿಸುವಂತೆ 2022ರ ನವೆಂಬರ್ 4 ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿತ್ತು. ಹೀಗಾಗಿ, ಇಪಿಎಫ್ಒ( EPFO)ಏಕೀಕೃತ ಸದಸ್ಯರ ಪೋರ್ಟಲ್ನಲ್ಲಿನ ಯುಆರ್ಎಲ್ ಹೆಚ್ಚಿನ ಪಿಂಚಣಿ ಆಯ್ಕೆಯ ನಿಮಿತ್ತ ಮೇ 3 ಕೊನೆಯ ದಿನಾಂಕವೆಂದು ಸ್ಪಷ್ಟನೆ ನೀಡಿದೆ.
ಸುಪ್ರೀಂ ಕೋರ್ಟ್ ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆ 2014 ಅನ್ನು ಕಳೆದ ವರ್ಷ ನವೆಂಬರ್ನಲ್ಲಿ ಎತ್ತಿ ಹಿಡಿದಿದೆ. 2014ರ ಆಗಸ್ಟ್ 22ರ ಇಪಿಎಸ್ ತಿದ್ದುಪಡಿಯ ಅನುಸಾರ ಪಿಂಚಣಿ ವೇತನದ ಮಿತಿಯನ್ನು ತಿಂಗಳಿಗೆ 6,500 ರೂಪಾಯಿಯಿಂದ 15,000 ರೂಪಾಯಿಗೆ ಏರಿಕೆ ಮಾಡಿ ಇಪಿಎಸ್ಗೆ ಅವರ ನಿಜವಾದ ಸಂಬಳದ (ಅದು ಮಿತಿಯನ್ನು ಮೀರಿದ್ದರೆ) ಶೇಕಡ 8.33 ಕೊಡುಗೆ ನೀಡುವುದಕ್ಕೆ ಉದ್ಯೋಗದಾತರ ಜೊತೆಗೆ ಸದಸ್ಯರಿಗೆ ಕೂಡ ಅವಕಾಶ ಕಲ್ಪಿಸಿದೆ.