SBI, ICICI ಗಿಂಲೂ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳ ಲಿಸ್ಟ್ ಇಲ್ಲಿದೆ !
Fixed Deposit: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಬೆರಳ ತುದಿಯಲ್ಲೇ ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಅಷ್ಟೆ ಅಲ್ಲದೇ, ಬ್ಯಾಂಕ್ಗಳು ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಇದೀಗ, ಹಿರಿಯ ನಾಗರಿಕರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಹೆಚ್ಚಿನ ಬ್ಯಾಂಕುಗಳು ನಿಶ್ಚಿತ ಠೇವಣಿ (Fixed Deposit) ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದ್ದು, ಬ್ಯಾಂಕುಗಳು ವಿಶೇಷವಾಗಿ ಹಿರಿಯ ನಾಗರೀಕರಿಗೆ ಹೆಚ್ಚಿನ ಪ್ರಯೋಜನ ನೀಡಲು ಮುಂದಾಗಿವೆ. ರಿಸರ್ವ್ ಬ್ಯಾಂಕ್ (RBI)ಫೆಬ್ರವರಿ ತಿಂಗಳ ಆರಂಭದಲ್ಲಿ ರೆಪೋ ದರವನ್ನೂ ( Repo Rate) ಶೇ. 6.5 ಹೆಚ್ಚಿಸಿದ ಬಳಿಕ ಇನ್ನುಳಿದ ಬ್ಯಾಂಕುಗಳು ಬಡ್ಡಿದರದಲ್ಲಿ ಗಮನಾರ್ಹ ಪರಿಷ್ಕರಣೆಯನ್ನು ಮಾಡಿವೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ( State Bank of India) (SBI) ಎಚ್ ಡಿಎಫ್ ಸಿ( HDFC), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ,ಕೋಟಕ್ ಮಹೀಂದ್ರ ಬ್ಯಾಂಕ್, ಏಕ್ಸಿಸ್ ಬ್ಯಾಂಕ್( Axis Bank)ಸೇರಿದಂತೆ ಪ್ರಮುಖ ಬ್ಯಾಂಕುಗಳು ಬಡ್ಡಿದರದಲ್ಲಿ ಬದಲಾವಣೆ ಮಾಡಿದೆ.
2023ರ ಕೇಂದ್ರ ಆಯವ್ಯಯದಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಹಿರಿಯ ನಾಗರೀಕರಿಗೆ ಆಕರ್ಷಕ ಬಡ್ಡಿದರ ಹಾಗೂ ಯೋಜನೆಗಳನ್ನು ಘೋಷಿಸಿದ ಬಳಿಕ ದೇಶದ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ತಮ್ಮ ಯೋಜನೆಗಳಲ್ಲಿ ಬದಲಾವಣೆ ಮಾಡಿದೆ.
ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ (ನಿಶ್ಚಿತ ಠೇವಣಿಯ ಮೇಲೆ)(Fixed Deposit)ರಾಷ್ಟ್ರೀಕೃತ ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ ಹೆಚ್ಚು ಬಡ್ಡಿ ದರ ನೀಡುವ ಐದು ಫೈನಾನ್ಸ್ ಬ್ಯಾಂಕ್ಗಳು ಹೀಗಿವೆ:
ಐಡಿಬಿಐ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 7.5 ಬಡ್ಡಿ ದರ ನೀಡಲಿದ್ದು, ಒಂದು ವರ್ಷ,2ವರ್ಷಕ್ಕೆ, 444 & 700 ದಿನಕ್ಕೆ ಹೊರತಾಗಿ) ಹೆಚ್ಚಿನ ಪ್ರಯೋಜನ ನೀಡುತ್ತದೆ.
ಬಂಧನ್ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 8.50 (600 ದಿನ)
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 8.51 (730 -999 ದಿನ)
ಸ್ಕೀಂ : 999 ದಿನಕ್ಕೆ ಶೇ. 8.76
ಜನ ಸ್ಮಾಲ್ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 8.80 (730 -999 ದಿನ)
ಸ್ಕೀಂ : 2-3 ವರ್ಷಕ್ಕಾದರೆ ಶೇ. 0.7 ಹೆಚ್ಚುವರಿ ಬಡ್ಡಿ
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 9.5
ಸ್ಕೀಂ : 1,001 ದಿನ
ಸ್ಕೀಂ: 181-201 ದಿನ ಮತ್ತು 501 ದಿನಕ್ಕೆ
ಬಡ್ಡಿ: ಶೇ. 9.25
ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ಎಂಬತ್ತು ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ ಸಿಟಿಜನ್ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಠೇವಣಿ (Deposit) ಮೇಲಿನ ಬಡ್ಡಿಗೆ ತೆರಿಗೆ ಪಾವತಿಸ ಬೇಕಾಗಿರುವುದರಿಂದ ಟ್ಯಾಕ್ಸ್ ರಿಬೇಟ್( Tax Rebate)ಪಡೆದುಕೊಳ್ಳಲು ನೆರವಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ನಿಶ್ಚಿತ ಠೇವಣಿಯ ಮೇಲೆ ಶೇ. 7.5 – 8ರಷ್ಟು ಬಡ್ಡಿದರವನ್ನು ನೀಡುತ್ತವೆ. ಅದೇ ರೀತಿ, ಸಣ್ಣ ಫೈನಾನ್ಸ್ ಬ್ಯಾಂಕುಗಳು ಶೇ. 9.5ರಷ್ಟು ಬಡ್ಡಿ ನೀಡುವ ಕುರಿತು ಮಾಹಿತಿ ನೀಡಿದ್ದು , ಬಹುತೇಕ ಎಲ್ಲಾ ಬ್ಯಾಂಕ್ಗಳು ಹಿರಿಯ ನಾಗರೀಕರಿಗೆ ಠೇವಣಿಯ ಮೇಲೆ ಶೇ. 0.5ಹೆಚ್ಚುವರಿ ಬಡ್ಡಿ ನೀಡುವುದಾಗಿ ಘೋಷಿಸಿದೆ.