Play School : ನಿಮ್ಮ ಮಕ್ಕಳನ್ನು ಪ್ಲೇ ಸ್ಕೂಲ್‌ಗೆ ಸೇರಿಸುವ ಯೋಚನೆಯೇ? ಈ ವಿಷಯವನ್ನು ಗಮನಿಸಿ
Play school : ಪ್ರಾಥಮಿಕ ಶಾಲೆಯಲ್ಲಿ (primary schools) ಕಡ್ಡಾಯ ಶಿಕ್ಷಣವನ್ನು ಪ್ರಾರಂಭಿಸುವ ಮೊದಲು ಮಕ್ಕಳಿಗೆ ಬಾಲ್ಯದ ಶಿಕ್ಷಣವನ್ನು (education )ನೀಡುವ ಶೈಕ್ಷಣಿಕ ಕಲಿಕೆಯ ಸಂಸ್ಥೆಯನ್ನು ಪ್ಲೇ ಸ್ಕೂಲ್(play school)ಎನ್ನುತ್ತಾರೆ. ಇದು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಕಾರ್ಯನಿರ್ವಹಿಸಬಹುದು ಮತ್ತು ಸಾರ್ವಜನಿಕ ನಿಧಿಯಿಂದ ಸಹಾಯಧನ ನೀಡಬಹುದಾಗಿದೆ.
ಸದ್ಯ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಅನೇಕ ಪೋಷಕರು ಅವರನ್ನು ಪ್ಲೇ ಸ್ಕೂಲ್‌ಗೆ ಸೇರಿಸಲು ಬಯಸುತ್ತಾರೆ. ಅಂದರೆ ಪ್ರಿಸ್ಕೂಲ್ , ನರ್ಸರಿ ಶಾಲೆ , ಪೂರ್ವ ಪ್ರಾಥಮಿಕ ಶಾಲೆ , ಅಥವಾ ಪ್ಲೇ ಸ್ಕೂಲ್ ಅಥವಾ ಕ್ರೆಚ್ ಎಂದೂ ಸಹ ಈ ಸಂಸ್ಥೆಯು ಕರೆಯಲ್ಪಡುತ್ತದೆ.
ಮುಖ್ಯವಾಗಿ ಮಕ್ಕಳು (children )ಆಡುವಾಗ ಅನೇಕ ಹೊಸ ವಿಷಯಗಳನ್ನು ಕಲಿಯುತ್ತಾರೆ. ಈ ಸಮಯದಲ್ಲಿ ಮಕ್ಕಳ ಮೆದುಳು ಚುರುಕುಗೊಳ್ಳಲು ನಿಮ್ಮ ಮಕ್ಕಳನ್ನು ಪ್ಲೇ ಸ್ಕೂಲ್ ಗೆ ಕಳುಹಿಸಲು ನೀವು ಬಯಸಿದರೆ, ಶಾಲೆಯನ್ನು ಆಯ್ಕೆಮಾಡುವ ಮೊದಲು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವ ಅವಶ್ಯಕತೆ ಇದೆ.
ಯಾಕೆಂದರೆ ಪ್ಲೇ ಸ್ಕೂಲ್ ಪ್ರವೇಶ ಪಡೆದ ನಂತರ, ಮಕ್ಕಳು ಮೊದಲ ಬಾರಿಗೆ ತಮ್ಮ ಪೋಷಕರಿಂದ ದೂರ ಹೋಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಪೋಷಕರು ಮಗುವಿನ ಸುರಕ್ಷತೆ ಮತ್ತು ಆಹಾರದ ಬಗ್ಗೆ ಮುಖ್ಯವಾಗಿ ಗಮನ ಹರಿಸಬೇಕು . ಹಾಗಾಗಿ ಸುರಕ್ಷಿತವಾದ ಹಾಗೂ ಸರಿಯಾದ ಪ್ಲೇ ಸ್ಕೂಲ್ ಆಯ್ಕೆ (selection )ಮಾಡಬೇಕಾಗುತ್ತದೆ.
ಪ್ಲೇ ಸ್ಕೂಲ್ ಬಗ್ಗೆ ಹೆತ್ತವರು ಗಮನಹರಿಸಬೇಕಾದ ಪ್ರಮುಖ ಅಂಶಗಳು :
• ಮಕ್ಕಳಿಗಾಗಿ ಕೆಲವು ಹತ್ತಿರದ ಪ್ಲೇಗ್ರೂಪ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿ. ಇದರ ನಂತರ ನೀವೇ ನೇರವಾಗಿ ಆ ಜಾಗಗಳಿಗೆ ಭೇಟಿ ನೀಡಿ.
• ನಿಮ್ಮ ಮಗುವಿಗೆ ಪ್ಲೇ ಸ್ಕೂಲ್‌ಗೆ ಅಡ್ಮಿಷನ್ ಮಾಡಿಸುವಾಗ ಇತರ ಪೋಷಕರನ್ನು ಕೇಳಿ ನಿಮ್ಮ ಮಗುವಿಗೆ ಇದರಿಂದ ಸಹಾಯ ಆಗಿದೆಯಾ ಎಂದು ಕೇಳಿ. ಅವರ ಅಭಿಪ್ರಾಯದ ಮೇರೆಗೆ ನಿಮ್ಮ ಮಕ್ಕಳನ್ನು ಸೇರಿಸಿ.
• ಮಕ್ಕಳನ್ನು ಸೇರಿಸುವ ಮುನ್ನ ನೀವು ಮೊದಲೊಮ್ಮೆ ಹೋಗಿ ನೋಡಿ ಅಲ್ಲಿ ಇತರ ಮಕ್ಕಳು ಹೇಗೆ ಆಡುತ್ತಾರೆ. ಖುಷಿಯಿಂದ ಇದ್ದಾರಾ? ಇಲ್ಲವಾ? ಎಂಬುದನ್ನು ಗಮನಿಸಿ.
• ಕೆಲವು ಜನಪ್ರಿಯ ಪ್ಲೇಗ್ರೂಪ್‌ಗಳಲ್ಲಿ ನೋಂದಣಿ ಆರಂಭವಾದ ತಕ್ಷಣ ಹಲವಾರು ಜನರು ಅಪ್ಲೈ ಮಾಡಿಬಿಡುತ್ತಾರೆ. ಹಾಗಾದಾಗ ನಿಮಗೆ ಆ ಶಾಲೆಗೆ ಮಕ್ಕಳನ್ನು ಸೇರಿಸುವ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ.
• ಮಗುವಿಗೆ ಪ್ಲೇಗ್ರೂಪ್ ಅನ್ನು ಆಯ್ಕೆಮಾಡುವಾಗ ನೀವು ಶಾಲೆಗೆ ಭೇಟಿ ನೀಡಬಹುದು. ಇದರೊಂದಿಗೆ ನೀವು ಶಾಲೆಯ ಪರಿಸರ, ಅಧ್ಯಯನದ ಬಗ್ಗೆ ಮಾಹಿತಿ ಪಡೆಯುತ್ತೀರಿ. ಅದೇ ಸಮಯದಲ್ಲಿ, ಶಾಲೆಯ ನಿಯಮಗಳು ಮತ್ತು ನಿಬಂಧನೆಗಳನ್ನು ತಿಳಿದುಕೊಳ್ಳುವ ಮೂಲಕ ನೀವು ಮಕ್ಕಳ ಸುರಕ್ಷತೆಯ ಬಗ್ಗೆ ಗಮನಹರಿಸಬಹುದು.
ಈ ರೀತಿಯಾಗಿ ಹೆತ್ತವರು ತಮ್ಮ ಮಗುವಿನ ಪ್ಲೇ ಸ್ಕೂಲ್ ಬಗ್ಗೆ ಗಮನಹರಿಸಿದಲ್ಲಿ ನಿಮ್ಮ ಮಕ್ಕಳು ಉತ್ತಮ ವಾತಾವರಣದಲ್ಲಿ ಸುರಕ್ಷಿತ ಆಹಾರ ಜೊತೆಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್