PPF ಮೆಚ್ಯುರಿಟಿ ಬಳಿಕ ಖಾತೆದಾರರಿಗೆ ಮೂರು ಆಯ್ಕೆಗಳಿವೆ ! ಯಾವುದೆಲ್ಲ?

PPF Investment : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ಜನಪ್ರಿಯತೆ ಪಡೆದಿರುವಂತದ್ದಾಗಿದೆ. ಸರ್ಕಾರದ ಈ ಪಿಪಿಎಫ್ (PPF) ಯೋಜನೆಯು ಹೂಡಿಕೆ (investment) ಮಾಡಲು ಇರುವ ಸುರಕ್ಷಿತ ಯೋಜನೆಯಾಗಿದೆ. ಪಿಪಿಎಫ್ ಮೂಲಕ, ಜನರಿಗೆ ಸರ್ಕಾರವು ದೀರ್ಘಾವಧಿಯವರೆಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಯೋಜನೆಯಲ್ಲಿ ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ರೂವರೆಗೂ ಹಣ ಹೂಡಿಕೆ ಮಾಡಬಹುದಾಗಿದೆ.

 

ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯಲ್ಲಿ ಹೂಡಿಕೆದಾರರು 15 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದೆ. ಮೆಚ್ಯೂರಿಟಿ (maturity) ಬಳಿಕವೂ ಪಿಪಿಎಫ್ ಖಾತೆದಾರರಿಗೆ ಮೂರು ಅಯ್ಕೆಗಳಿವೆ. 3 ಆಯ್ಕೆಗಳು ಯಾವುವು? ಎಂಬುದರ ಮಾಹಿತಿ ಇಲ್ಲಿದೆ.

ಮೊದಲನೇ ಆಯ್ಕೆ : ಈ ಆಯ್ಕೆಯಲ್ಲಿ ಖಾತೆದಾರರು ತಮ್ಮ ಪಿಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಪೂರ್ತಿ ಹಣವನ್ನು ಮೆಚ್ಯೂರಿಟಿ ಅವಧಿಯ ಬಳಿಕ ಬ್ಯಾಂಕ್(bank) ಅಥವಾ ಅಂಚೆಕಚೇರಿ(Post office) ಯಲ್ಲಿ ಅರ್ಜಿ ಭರ್ತಿ ಮಾಡಿ, ಹಿಂಪಡೆಯಬಹುದು.

ಎರಡನೇ ಆಯ್ಕೆ: ಹೊಸ ಪಿಪಿಎಫ್ ಹೂಡಿಕೆ(PPF Investment) ಯಂತೆ ನಿಮ್ಮ ಹೂಡಿಕೆಯನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. ಖಾತೆದಾರರು ತಮ್ಮ ಹೂಡಿಕೆಯನ್ನು ವಿಸ್ತರಿಸಲು ಬಯಸಿದರೆ ಹಾಗೂ ಹೆಚ್ಚಿನ ರಿಟರ್ನ್ಸ್ ಬೇಕೆಂದರೆ, ಅದಕ್ಕೆ ಫಾರಂ ಭರ್ತಿ ಮಾಡಬೇಕು. ಈ ರೀತಿ ಮತ್ತೆ 5 ವರ್ಷಗಳವರೆಗೆ ಹೂಡಿಕೆ ವಿಸ್ತರಣೆ ಮಾಡಬಹುದು.

ಮೂರನೇ ಆಯ್ಕೆ : ಈ ಆಯ್ಕೆಯಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆಯನ್ನು ಮುಂದುವರಿಸಬಹುದು. ಹೊಸ ಹೂಡಿಕೆ ಮಾಡಲು ಬಯಸದೆ ಮತ್ತು ಖಾತೆದಾರರು ಈಗಾಗಲೇ ಅಸ್ತಿತ್ವದಲ್ಲಿರುವ ಹೂಡಿಕೆಯನ್ನು ಮುಂದುವರಿಸಲಿದ್ದರೆ, ನೀವು ಯಾವುದೇ ಹೆಚ್ಚುವರಿ ಹೂಡಿಕೆ ಮಾಡದೆ ತಮ್ಮ ಖಾತೆಯನ್ನು 5 ವರ್ಷಗಳ ವಿಸ್ತರಿಸಬಹುದು. ಜೊತೆಗೆ ಠೇವಣಿ ಮೇಲೆ ಬಡ್ಡಿ(interest) ಗಳಿಕೆ ಕೂಡ ವಿಸ್ತರಣೆ ಆಗುತ್ತದೆ. ಖಾತೆದಾರರು ಈ ಮೂರು ಮೆಚ್ಯೂರಿಟಿ ಆಯ್ಕೆಗಳ ಜೊತೆಗೆ ಮೆಚ್ಯೂರಿಟಿ ಅವಧಿ ಮುಕ್ತಾಯದ ನಂತರ ಯಾವುದೇ ತೆರಿಗೆ ಇಲ್ಲದೆ ತಮ್ಮ ಹಣ ಹಿಂಪಡೆಯಬಹುದಾಗಿದೆ

Leave A Reply

Your email address will not be published.