Kabab 238, Viral Recipe: 1784 ಇಸವಿಯ, ಬಂಗಾಳದ ಮೊದಲ ಗವರ್ನರ್ ಕಾಲದ 238 ವರ್ಷ ಹಳೆಯ ಕಬಾಬ್ ರೆಸಿಪಿ ವೈರಲ್ !
Kabab 238, Viral Recipe: ಬಂಗಾಳದ ಮೊದಲ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್. ಇದು ನಾನು ಇತಿಹಾಸದಲ್ಲಿ ಓದಿರುವ ವಿಷ್ಯ. ವಾರೆನ್ ಹೇಸ್ಟಿಂಗ್ಸ್ (warren hastings) ಅವರ ಖಾಸಗಿ ಡೈರಿಯಿಂದ ಕಬಾಬ್ (Kabab) ರಿಸಿಪಿ ಒಂದು ಹೊರಬಂದು ಕುತೂಹಲ ಮೂಡಿಸಿದೆ. ಈ ಪಾಕವಿಧಾನ ಹಳೆಯ ಫೋಟೋವನ್ನು ಇತ್ತೀಚೆಗೆ ಬರಹಗಾರರ ಇರಾ ಮುಖೋಟಿ ಎನ್ನುವವರು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಸುದ್ದಿ ವೈರಲ್ ಆಗಿದ್ದು ಕಬಾಬ್ ನಷ್ಟೇ ಫೇಮಸ್ (Kabab 238, Viral Recipe)ಆಗಿ ಬಿಕರಿಯಾಗುತ್ತಿದೆ.
ಕ್ರಿಸ್ತಶಕ 1772 – 1784 ಸುಮಾರಿಗೆ ಬಂಗಾಳದ ಮೊದಲ ಗವರ್ನರ್ ಆದವರು ಜನರಲ್ ವಾರೆನ್ ಹೇಸ್ಟಿಂಗ್ಸ್. ಅವರ 1784 ಖಾಸಗಿ ಡೈರಿಯಿಂದ ಕಬಾಬ್ ಪಾಕವಿಧಾನ (Kebab Recipe) ದ ಹಳೆಯ ಫೋಟೋವನ್ನು ಇತ್ತೀಚೆಗೆ, ಬರಹಗಾರದ ಇರಾ ಮುಖೋಟಿ (Ira Mukhoty) ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂದಿನ ಕಾಲದಿಂದಲೂ ಭಾರತೀಯ ಪಾಕ ಪದ್ದತಿಯಲ್ಲಿ ಕಬಾಬ್ಗೆ ಹಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಇದರಿಂದ ತಿಳಿದುಬರುತ್ತದೆ. ಇರಾ ಮುಖೋಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ. ಅಂದರೆ ಇದು 238 ವರ್ಷಗಳ ಹಿಂದಿನ ವಿಶೇಷ ರಿಸಿಪಿ.
ಈ ಫೋಟೋದಲ್ಲಿ ಕಾಣಿಸುವಂತೆ ಇಲ್ಲಿ ಮಾಂಸ, ಬೆಳ್ಳುಳ್ಳಿ, ಮೆಣಸಿನಕಾಯಿ, ಮೊಟ್ಟೆಯ ಹಳದಿ, ಮುಂತಾದ ಹಲವು ಪದಾರ್ಥಗಳನ್ನು ಬರೆದಿರುವುದನ್ನು ಕಾಣಬಹುದು. ಜೊತೆಗೆ, ಅದರ ಕೆಳಗೆ ಕಬಾಬು ಮಾಡುವ ಪಾಕವಿಧಾನವನ್ನು ಕೂಡ ಬರೆಯಲಾಗಿದೆ. ಮೇಲೆ ನೀಡಿರುವ ಎಲ್ಲಾ ಪದಾರ್ಥಗಳನ್ನು 5 ಅಥವಾ 6 ಗ್ಲಾಸಿನಷ್ಟು ನೀರಿನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಇದನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲ ವಸ್ತುಗಳನ್ನು ಕಲ್ಲಿನ ಮೇಲೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಬೆಣ್ಣೆಯಲ್ಲಿ ಫ್ರೈ ಮಾಡಿ. ಜತೆಗೆ ಕಾಯಿಸುವಾಗ ಅವು ಬಾಣಲೆಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ ಎಂದು ಬರೆಯಲಾಗಿದೆ.
Warren Hasting’s kebab recipe
Even as charges for corruption were about to be framed against him, Hastings was enjoying Nawab Asaf’s company at Lucknow in July 1784, learning how to make kebabs
British library, Hastings’ private diary pic.twitter.com/fqCtch2x1L
— Ira Mukhoty (@mukhoty) February 23, 2023
ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ, 213 ರಿ- ಟ್ವೀಟ್, 1,57,000 ವೀಕ್ಷಣೆಗಳನ್ನು ಮತ್ತು 1375 ಲೈಕ್ಸ್ ಸ್ವೀಕರಿಸಿದೆ. ಕಬಾಬ್ ರೆಸಿಪಿಯ ಈ ಹಳೆಯ ಟಿರಿಸಿಪಿ ನೋಡಿದ ಇಂಟರ್ನೆಟ್ ಬಳಕೆದಾರರು ಮತ್ತು ಅಡುಗೆ ಪರಿಣಿತರು ಪುಳಕಿತರಾಗಿದ್ದರೆ. ಹಾಗಾಗಿ ಸಾಕಷ್ಟು ಆಸಕ್ತಿ ಹೊಂದಿ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಹೇಳಿದ ಪಾಕವಿಧಾನ ನಾವೀಗ ಕಾಯಿಸುವ ಕಬಾಬುವಿಗಿಂತ ವಿಭಿನ್ನವಾಗಿದೆ. ಆದುದರಿಂದ ಅದು ಎಲ್ಲರ ಗಮನ ಸೆಳೆದಿದೆ. ಹೊಸರುಚಿಯ ಹುಡುಕಾಟದಲ್ಲಿರುವ ಪಾಕ ಪ್ರವೀಣ ಪ್ರವೀಣೆಯರು ಅಡುಗೆ ಮನೆ ಸೇರಿದ್ದು ಕಬಾಬ್ -238 ಎಂಬ ಚಿಕನ್ – 65 ಯಷ್ಟೇ ರುಚಿಕರ ಖಾದ್ಯ ತಯಾರಿಕೆಗೆ ತೊಡಗಿದ್ದಾರೆ. ಯಾರಿಗೆ ಗೊತ್ತು, ಹಳೆಯ ಈ ಪಾಕವಿಧಾನ ಹೊಸ ರುಚಿಯನ್ನು ಹುಟ್ಟು ಹಾಕಿದರೂ ಹಾಕೀತು.