UPI : ದುಡ್ಡು ಕಳೆದುಕೊಳ್ಳುವ ಚಿಂತೆ ಬೇಡ, ಇಲ್ಲಿದೆ ಆನ್‌ಲೈನ್‌ ಪಾವತಿ ಸೇಫ್‌ ಆಗಿಡಲು 5 ಟಿಪ್ಸ್‌!

UPI: ಇತ್ತೀಚೆಗೆ ಆನ್ಲೈನ್(online) ಮೂಲಕ ಮೋಸ ಮಾಡಿ, ಹಣ ದೋಚುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಆನ್‌ಲೈನ್ ಪಾವತಿಯಿಂದ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರಿದ್ದಾರೆ. ಸದ್ಯ ಈ ಆನ್‌ಲೈನ್ ಪಾವತಿ (UPI) ಸುರಕ್ಷಿತವಾಗಿಸಲು ಸಲಹೆ ಇಲ್ಲಿದೆ. ಹೀಗೆ ಮಾಡಿದರೆ ನೀವು ಹಣ ಕಳೆದುಕೊಳ್ಳುವ ಸಂಭವ ಬರೋದಿಲ್ಲ.

ಸ್ಕ್ರೀನ್ ಲಾಕ್(screen lock): ಮುಖ್ಯವಾಗಿ ನೀವು ಸ್ಕ್ರೀನ್ ಲಾಕ್ ಹಾಕಬೇಕು. ನೀವು ಹಾಕಿದ ಪಾಸ್ವರ್ಡ್(password) ಅಥವಾ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾಕೆಂದರೆ, ಇದನ್ನು ಬಳಸಿಕೊಂಡು ಹ್ಯಾಕರ್‌(hacker) ಗಳು ನಿಮಗೆ ವಂಚನೆ ಮಾಡಬಹುದು. ಹಾಗೆಯೇ ನೀವು ಲಾಕ್ ಹಾಕುವಾಗ ಕಠಿಣವಾದ ಲಾಕ್ ಹಾಕಿ.

ಪಿನ್ ಹಂಚಬೇಡಿ: ನಿಮ್ಮ ಯುಪಿಐ ಪಿನ್(UPI pin) ಅನ್ನು ಯಾರಿಗೂ ಕೊಡಬೇಡಿ. ನಿಮ್ಮ ಯುಪಿಐ ಪಿನ್ ಬೇರೆಯವರಿಗೆ ತಿಳಿದರೆ, ಆ ವ್ಯಕ್ತಿ ನಿಮ್ಮ ಮೊಬೈಲ್‌ನಲ್ಲಿ ಯುಪಿಐ ಆಪ್‌(UPI app) ಗಳನ್ನು ತೆರೆಯಲು ಸಾಧ್ಯವಾಗುತ್ತದೆ. ಅಲ್ಲದೆ, ನಿಮಗೆ ತಿಳಿಯದೆಯೇ ನಿಮ್ಮ ಪಿನ್ ಬಳಸಿ ಯುಪಿಐ ಪಾವತಿ ಮಾಡಬಹುದು. ಹಾಗಾಗಿ ಈಗಾಗಲೇ ಯಾರಿಗಾದರೂ ನಿಮ್ಮ ಯುಪಿಐ ಪಿನ್ ತಿಳಿದಿದ್ದರೆ, ಕೂಡಲೇ ಪಿನ್ ಅನ್ನು ಬದಲಾಯಿಸಿ.

ಯುಪಿಐ ಆಪ್‌ ಅಪ್‌ಡೇಟ್: ನೂತನ ವರ್ಜನ್‌ನ ಯುಪಿಐ ಆಪ್‌ ಅನ್ನು ಬಳಸಿ. ನೂತನ ವರ್ಜನ್ ಸುರಕ್ಷಿತ ಫೀಚರ್ ಅನ್ನು ಹೊಂದಿದ್ದು, ಆನ್‌ಲೈನ್ ಹ್ಯಾಕರ್‌ನಿಂದ ಸುರಕ್ಷಿತವಾಗಿರಿಸಲಿದೆ. ಹಾಗೂ ಮೊಬೈಲ್‌ನಲ್ಲಿ ಹಲವಾರು ಯುಪಿಐ ಆಪ್‌ಗಳನ್ನು ಬಳಸಬೇಡಿ. 1-2 ಯುಪಿಐ ಆಪ್‌ಗಳು ಅತೀ ಮುಖ್ಯವಾಗುತ್ತದೆ. ಇನ್ನು ಮೊಬೈಲ್‌(mobile) ಅಪ್ಲಿಕೇಷನ್ ಅನ್ನು ಇನ್‌ಸ್ಟಾಲ್ ಮಾಡುವಾಗ ಆಪ್ ಅಧಿಕೃತವೇ ಎಂದು ಕೂಡಾ ಪರಿಶೀಲನೆ ಮಾಡಿಕೊಳ್ಳಿ.

ಎಸ್‌ಎಂಎಸ್‌ ಲಿಂಕ್ ಕ್ಲಿಕ್ ಮಾಡಬೇಡಿ: ಯಾವುದೇ ಅನಧಿಕೃತ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಒಂದು ವೇಳೆ ಕ್ಲಿಕ್ ಮಾಡಿದರೆ, ಕ್ಷಣದಲ್ಲಿ ನಿಮ್ಮ ಖಾತೆಯ ಹಣ ಖಾಲಿಯಾಗಿರುತ್ತದೆ. ಹಾಗಾಗಿ ಜಾಗರೂಕತೆಯಿಂದಿರಿ. ವಂಚಕರು ವಾಟ್ಸಾಪ್(whatsapp), ಎಸ್‌ಎಂಎಸ್‌(sms), ಇಮೇಲ್(email) ಮೂಲಕ ಲಿಂಕ್ ಕಳುಹಿಸಬಹುದು. ಅಲ್ಲದೆ, ಬ್ಯಾಂಕ್‌(bank) ನ ಪ್ರತಿನಿಧಿಗಳಂತೆ ನಿಮಗೆ ಕರೆ, ಮೆಸೇಜ್ ಮಾಡಿ ಲಿಂಕ್ ಕ್ಲಿಕ್ ಮಾಡಲು ಹೇಳಬಹುದು. ನಿಮ್ಮ ಆಧಾರ್(aadhaar), ಪ್ಯಾನ್(pan) ಮಾಹಿತಿ ಕೇಳಬಹುದು. ಇವೆಲ್ಲಾವನ್ನು ಯಾರಿಗೂ ನೀಡಬೇಡಿ. ಈ ಎಲ್ಲಾ ಮಾಹಿತಿಯನ್ನು ಸರಿಯಾಗಿ ಪಾಲಿಸಿದರೆ, ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳಬಹುದು.

Leave A Reply

Your email address will not be published.