RBI Restrictions : ಕರ್ನಾಟಕದ ಈ ಬ್ಯಾಂಕ್‌ ಇಂದಿನಿಂದ ಇಲ್ಲ, ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದ ಆರ್‌ಬಿಐ!

RBI restrictions : ಶುಕ್ರವಾರದಂದು ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾ (RBI) ಐದು ಸಹಕಾರಿ ಬ್ಯಾಂಕ್‌ಗಳ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಿ, ಆದೇಶ ಹೊರಡಿಸಿದೆ. ಬ್ಯಾಂಕ್​​ನ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆ ಆರ್​ಬಿಐ ಈ ಆದೇಶವನ್ನು ಹೊರಡಿಸಿದೆ. ಆರ್​ಬಿಐ ನಿರ್ಬಂಧಗಳ (RBI Restrictions) ಹಿನ್ನೆಲೆಯಲ್ಲಿ, ಐದು ಬ್ಯಾಂಕ್(bank) ಗಳು ಮುಂದಿನ 6 ತಿಂಗಳ ಕಾಲ ಯಾವುದೇ ಸಾಲವನ್ನು ನೀಡುವಂತಿಲ್ಲ ಎಂದು ಹೇಳಲಾಗಿದೆ. ಇನ್ನು ಆರ್​ಬಿಐ ನಿರ್ಬಂಧಗಳಿಗೆ ಒಳಪಟ್ಟ ಐದು ಬ್ಯಾಂಕ್​ಗಳು ಯಾವುದು? ಎಂಬ ಮಾಹಿತಿ ಇಲ್ಲಿದೆ.

ಆರ್​ಬಿಐ ನಿರ್ಬಂಧದಿಂದ (RBI Restrictions), ಬ್ಯಾಂಕ್‌ಗಳು ಆರ್‌ಬಿಐನ ಪೂರ್ವಾನುಮತಿ ಇಲ್ಲದೆ, ಸಾಲಗಳನ್ನು ನೀಡಲು ಸಾಧ್ಯವಿಲ್ಲ. ಹಾಗೇ ಯಾವುದೇ ಹೂಡಿಕೆ ಮಾಡಲು ಮತ್ತು ಯಾವುದೇ ಜವಾಬ್ದಾರಿಯನ್ನು ಹೊಂದಲು, ಅದರ ಯಾವುದೇ ಆಸ್ತಿಯನ್ನು ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಸಾಧ್ಯವಾಗುವುದಿಲ್ಲ. ಸದ್ಯ ಆರ್​ಬಿಐನ ಈ ನಿರ್ಬಂಧಗಳು ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ.

ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಶಿಂಷಾ ಸಹಕಾರ ಬ್ಯಾಂಕ್​ ಮೇಲೆ ಆರ್​ಬಿಐ ನಿರ್ಬಂಧ ವಿಧಿಸಿದೆ. ಈ ಬ್ಯಾಂಕ್​ನಲ್ಲಿ ಹಣ ಹೂಡಿಕೆ ಮಾಡಿರುವ, ಇಟ್ಟಿರುವ ಗ್ರಾಹಕರು ಮುಂದಿನ ಆರು ತಿಂಗಳವರೆಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆರ್ ಬಿಐ ತಿಳಿಸಿದೆ.

ಹಾಗೆಯೇ ಆಂಧ್ರ ಪ್ರದೇಶದ ಅನಂತಪುರದ ಜಿಲ್ಲೆಯ ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್(co-operative town bank) ಹಾಗೂ ಮಹಾರಾಷ್ಟ್ರದ ಅಕ್ಲುಜ್​ನಲ್ಲಿರುವ ಶಂಕರರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಈ ಬ್ಯಾಂಕ್ ನ ಗ್ರಾಹಕರಿಗೆ ಸಿಹಿಸುದ್ದಿ ಏನಂದ್ರೆ, ಗ್ರಾಹಕರು ಗರಿಷ್ಠ 5,000 ರೂಪಾಯಿಗಳನ್ನು ವಿತ್​​ಡ್ರಾ ಮಾಡಬಹುದು ಎನ್ನಲಾಗಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿನ HCBL ಸಹಕಾರ ಬ್ಯಾಂಕ್ ಮೇಲೆ ಕೂಡ ನಿರ್ಬಂಧ ವಿಧಿಸಿದ್ದು, ಅಲ್ಲದೆ, ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿರುವ ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್ ಮೇಲೂ ನಿರ್ಬಂಧಗಳನ್ನು ವಿಧಿಸಿ, ಆದೇಶ ಹೊರಡಿಸಲಾಗಿದೆ.

ಇದಿಷ್ಟೇ ಅಲ್ಲ, ಈ ಎಲ್ಲಾ ಐದು ಸಹಕಾರಿ ಬ್ಯಾಂಕ್‌ಗಳ ಅರ್ಹ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್​​ನಿಂದ ತಮ್ಮ ಠೇವಣಿ ವಿಮೆ ಕ್ಲೈಮ್​ ಮೊತ್ತದಲ್ಲಿ 5 ಲಕ್ಷ ರೂಪಾಯಿವರೆಗಿನ ಮೊತ್ತವನ್ನು ಪಡೆಯಬಹುದು ಎಂದು ಆರ್​ಬಿಐ(RBI) ತಿಳಿಸಿದೆ.

Leave A Reply

Your email address will not be published.