KPSC ಯಿಂದ ಭರ್ಜರಿ ಸಿಹಿ ಸುದ್ದಿ: 12ಕ್ಕೂ ಹೆಚ್ಚು ಇಲಾಖೆಗಳ 35 ವಿವಿಧ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ!!!
KPSC : ಸರ್ಕಾರಿ ಆದೇಶಗಳ ಬೇಡಿಕೆಗಳಿಗೆ ಅನುಸಾರವಾಗಿ 2018, 2019, 2020ನೇ ಸಾಲಿನಲ್ಲಿ ಅಧಿಸೂಚಿಸಿದ್ದ ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ ಕೆಪಿಎಸ್‌ಸಿ (KPSC) ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ.
ಕರ್ನಾಟಕ ಲೋಕಸೇವಾ ಆಯೋಗವು ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಾಲೇಜುಗಳು, ಆಯುಷ್ ಇಲಾಖೆಯ ವಿವಿಗಳ ಬೋಧಕ ಹುದ್ದೆಗಳು, ಎಫ್‌ಡಿಎ ಹುದ್ದೆಗಳನ್ನೊಳಗೊಂಡ ಒಟ್ಟು 12ಕ್ಕೂ ಹೆಚ್ಚು ಇಲಾಖೆಗಳ 35 ವಿವಿಧ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ.
ಕೆಪಿಎಸ್‌ಸಿ ಹೆಚ್ಚುವರಿ ಆಯ್ಕೆಪಟ್ಟಿ ಚೆಕ್ ಮಾಡುವ ವಿಧಾನ ಹೀಗಿದೆ:
ಆಯೋಗದ ವೆಬ್‌ಸೈಟ್ ಗೆ ಭೇಟಿ ನೀಡಬೇಕು.https://www.kpsc.kar.nic.in/ ಇದನ್ನು ತೆರೆದ ಬಳಿಕ ಪೇಜ್‌ನಲ್ಲಿ ‘ಪಟ್ಟಿಗಳು >> ಆಯ್ಕೆಪಟ್ಟಿ >> ಹೆಚ್ಚುವರಿ ಆಯ್ಕೆಪಟ್ಟಿ’ ಸೆಲೆಕ್ಟ್ ಮಾಡಬೇಕು. ಆನಂತರ ವೆಬ್ ಪುಟ ತೆರೆದುಕೊಳ್ಳುತ್ತದೆ. ನಿಮಗೆ ಇತ್ತೀಚೆಗೆ ಕೆಪಿಎಸ್‌ಸಿ ಬಿಡುಗಡೆ ಮಾಡಿರುವ ಎಲ್ಲ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಲಿಂಕ್ ಲಭ್ಯವಾಗುತ್ತದೆ. ನೀವು ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿ.
ಹೆಚ್ಚುವರಿ ಆಯ್ಕೆ ಪಟ್ಟಿ ಹೀಗಿದೆ:
* ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರು.
* ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಹಾಯಕ ಜಿಲ್ಲಾ ವ್ಯವಸ್ಥಾಪಕರು.
* ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ರಸಾಯಶಾಸ್ತ್ರ ಉಪನ್ಯಾಸಕರು.
* ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಭೌತಶಾಸ್ತ್ರ ಉಪನ್ಯಾಸಕರು.
* ಆಯುಷ್ ಇಲಾಖೆಯಲ್ಲಿನ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ (ರಚನಾ ಶರೀರ)ಆಯುರ್ವೇದ ಸಹಾಯಕ ಪ್ರಾಧ್ಯಾಪಕರು
* ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಗಣಿತಶಾಸ್ತ್ರ ಉಪನ್ಯಾಸಕರು.
* ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಇತಿಹಾಸ ಉಪನ್ಯಾಸಕರು.
* ಆಯುಷ್ ಇಲಾಖೆಯಲ್ಲಿನ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಆರ್ಯುರ್ವೇದ ಸಹ ಪ್ರಾಧ್ಯಾಪಕರು (ಕಾಯಾ ಚಿಕಿತ್ಸಾ).
* ಆಯುಷ್ ಇಲಾಖೆಯಲ್ಲಿನ ಸರ್ಕಾರಿ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳು (ಪ್ರಕೃತಿ ಚಿಕಿತ್ಸೆ ಮತ್ತು ಯೋಗ).
* ಆಯುಷ್ ಇಲಾಖೆಯಲ್ಲಿನ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಆಯುರ್ವೇದ ಸಹಾಯಕ ಪ್ರಾಧ್ಯಾಪಕರು (ಕೌಮಾರಭೃತ್ಯ / ಬಾಲರೋಗ).
* ಆಯುಷ್ ಇಲಾಖೆಯಲ್ಲಿನ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ರಸಶಾಸ್ತ್ರ ಮತ್ತು ಭೈಷಜ್ಯಕಲ್ಪನಾ ಹಾಗೂ ಕ್ರಿಯಾ ಶರೀರ ವಿಷಯದ ಪ್ರಾಧ್ಯಾಪಕರು.
* ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ತಾಲ್ಲೂಕು ಅಭಿವೃದ್ಧಿ ಅಧಿಕಾರಿ.
* ಆಯುಷ್ ಇಲಾಖೆಯಲ್ಲಿನ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಆಯುರ್ವೇದ ಸಹಾಯಕ ಪ್ರಾಧ್ಯಾಪಕರು ( ಸ್ವಸ್ಥವೃತ ).
* ಅಲ್ಪಸಂಖ್ಯಾತರ ನಿರ್ದೇಶನಾಲಯದ ಮಾದರಿ ವಸತಿ ಶಾಲೆ (ನವೋದಯ)ಗಳಲ್ಲಿನ ಸ್ನಾತಕೋತ್ತರ ಗಣಿತ ಶಾಸ್ತ್ರ ಶಿಕ್ಷಕರು, ದೈಹಿಕ ಶಿಕ್ಷಕರು ಮತ್ತು ಕನ್ನಡ ಭಾಷಾ ಶಿಕ್ಷಕರು.
* 2019 ಸಾಲಿನ ಹೆಚ್‌ಕೆ ವೃಂದದ ಪ್ರಥಮ ದರ್ಜೆ ಸಹಾಯಕರು.
* ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪರಿಸರ ಅಭಿಯಂತರರು
ಮೇಲೆ ತಿಳಿಸಿದ ಹುದ್ದೆಗಳಿಗೆ ಕೆಪಿಎಸ್ಸಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಮಾಡಿದೆ.