Karkala Election | ಕಾರ್ಕಳದ ಸುನಿಲ್ ಕುಮಾರ್’ಗೆ ಶಾಪವಾಗಿ ಕಾಡಲಿದೆ ಈ 4 ಸಂಗತಿಗಳು !- ಮುತಾಲಿಕ್ ಎಂಟ್ರಿ ಬರೀ ಲೆಕ್ಕಕ್ಕೆ ಮಾತ್ರ ಅಲ್ಲ !!!

Karkala election: ಮುತಾಲಿಕ್ ರ ಜತೆ ಆಟ ಹೇಳಿದಷ್ಟು, ಅಂದುಕೊಂಡಷ್ಟು ಸುಲಭವಿಲ್ಲ ಸುನೀಲ್ ಜೀ । ಸುನಿಲ್ ಕುಮಾರ್ ಗೆ ಶಾಪವಾಗಿ ಕಾಡಲಿವೆ ಈ ನಾಲ್ಕು ಸಂಗತಿಗಳು !

 

ರಾಜ್ಯ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವರು ಪ್ರತಿನಿಧಿಸುವ ಐತಿಹಾಸಿಕ ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಭಿನ್ನ ಮಹತ್ವ ಪಡೆದಿದೆ.
ಜನರ ಅಭಿಪ್ರಾಯ ಹಾಲಿ ಶಾಸಕರ ಪರ ಇದ್ದರೂ ಲೋಕಸಭೆ ಉಪ ಚುನಾವಣೆ ಮತ್ತು 2008 ರ ಚುನಾವಣೆಯಲ್ಲಿ ಸೋಲಿನ ರುಚಿ ,ಮತ್ತು ಪಾಠವನ್ನು ತೋರಿಸಿದ ಕಾರ್ಕಳದ ಮತದಾರರ ಒಲವು ಯಾರ ಕಡೆ‌ ಇದೆ ಎಂಬುದು ಇನ್ನೂ ಸ್ಪಷ್ಟ ವಾಗಿಲ್ಲ. ಏಕೆಂದರೆ ಇಲ್ಲಿ ಎದುರಾಳಿಯಾಗಿ ಪ್ರವೇಶಿಸಿದವರು ಹಿಂದೂ ಫೈರ್ ಚೆಂಡು ಪ್ರಮೋದ್ ಮುತಾಲಿಕ್ !

ಹಿಂದುತ್ವದ ಭದ್ರಕೋಟೆ ಎನಿಸಿರುವ ಉಡುಪಿ ಮತ್ತು ದ.ಕ‌ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿನಿಧಿಸುವವರಿಗೆ ಹಿಂದುತ್ವವೇ ಪ್ರಧಾನ ಅಸ್ತ್ರ. ಹಾಲಿ ಶಾಸಕ ಸುನಿಲ್ ಕುಮಾರ್ ಒಂದು ಕಾಲದಲ್ಲಿ ಭಜರ೦ಗದಳದ ಸ೦ಚಾಲಕರಾಗಿ ಚುನಾವಣೆ ಎದುರಿಸಿ ನಂತರ ಶಾಸಕರಾದವರು. ಈ ಮಹತ್ವಾಕಾಂಕ್ಷಿ ನಾಯಕನಿಗೆ ಈಗ ರಾಜಕೀಯದ ಪಟ್ಟುಗಳೆಲ್ಲ ಪರಿಚಿತವಾಗಿದೆ. ನಿಧಾನಕ್ಕೆ ಕಟ್ಟರ್ ಹಿಂದುತ್ವದಿಂದ ಚುನಾವಣಾ ಹಿಂದುತ್ವದ ಕಡೆಗೆ ಅವರ ಮನಸ್ಸು ಜಾರಿದೆ.

ಈಗ ಕಾರ್ಕಳದ ಅಭಿವೃದ್ಧಿ (Karkala election) ಕೆಲಸಗಳ ಸುನಿಲ್‌ ಕುಮಾರ್ ರವರ ಪಾತ್ರ ದೊಡ್ಡ ಮಟ್ಟದಲ್ಲಿದ್ದರೂ ಸ್ವ ಪಕ್ಷದ ತಳ ಮಟ್ಟದ ಕಾರ್ಯಕರ್ತದಲ್ಲಿ ಕೊಂಚ‌ ಮಟ್ಟಿನ ಅಸಮಧಾನ ಇರುವುದು ಸ್ಪಷ್ಟ. ಕಳೆದ ಗ್ರಾಮ ಪಂಚಾಯತಿ ಚುನಾವಣೆ ವೇಳೆ ಬಿಜೆಪಿ ಆಕಾ೦ಕ್ಷಿಗಳನ್ನು ಮೂಲೆ ಗುಂಪು ಮಾಡಲಾಗಿತ್ತು. ನಂತರ ಆ ಅಭ್ಯರ್ಥಿಗಳು ಬಂಡಾಯ ನಿಂತು ಕೆಲವು ಗ್ರಾಮ‌‌ ಪಂಚಾಯಿತಿಗಳಲ್ಲಿ ಅವರು ಜಯಗಳಿಸಿದ್ದು ಈಗ ಲೋಕಲ್ ಇತಿಹಾಸ. ಏಕೆಂದರೆ ಶಾಸಕರ ವರ್ಚಸ್ಸು ಇದ್ದರೂ ಬಿಜೆಪಿ ಅಭ್ಯರ್ಥಿಗಳು ಸೋತ‌ ನಿದರ್ಶನಗಳಿವೆ. ಮುಖ್ಯವಾಗಿ ಸಹನಾ ಕು೦ದರ್ ರಂತಹ ಹಿಂದೂ ಫೈರ್ ಬ್ರಾಂಡ್ ಗಳನ್ನೇ ಮೂಲೆಗು೦ಪಾಗಿಸುವ ಶಾಸಕರ ಪ್ರಯತ್ನಕ್ಕೆ ಸ್ಥಳೀಯ ನಾಗರೀಕರು ಅಭೂತಪೂರ್ವವಾಗಿ ಬಂಡಾಯ ಅಭ್ಯರ್ಥಿ ಸಹನಾರನ್ನು ಗೆಲ್ಲಿಸಿದ್ದರು. ಪ್ರಸ್ತುತ ಆಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಪಡೆದಿದ್ದು ಶಾಸಕರಿಗೆ ಇದರಿಂದ ದೊಡ್ಡ ಮಟ್ಟದ ಮುಖಭ೦ಗ ಆಗಿದ್ದು ನಿಜ

ಕಾರ್ಕಳ ಉತ್ಸವ, ಪರಷುರಾಮ ಥೀಮ್ ಪಾರ್ಕ್ ಉದ್ಘಾಟನೆಗೆ ಮಿತಿ‌ ಮೀರಿದ ಖರ್ಚು ಮಾಡಿದ್ದು ಕೆಲವರಲ್ಲಿ ಅಸಮಧಾನ ಉಂಟುಮಾಡಿದ್ದು ಸುಳ್ಳಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾವು ಮತ್ತು ಇನ್ನೂ ಕೋವಿಡ್ ನ ಆರ್ಥಿಕ ಪರಿಣಾಮಗಳಿಂದ ಹೊರ ಬರದ ಸಾಮಾನ್ಯ ಜನತೆ ಚುನಾವಣೆ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ. ” ಬದಲಾವಣೆ ಇಪ್ಪೊಡು ” ಎಂಬ ಅಭಿಪ್ರಾಯ ಹಲವರದ್ದು. ಆದರೂ, ಮುತಾಲಿಕ್ ಅವರು ಇಲಿ ಸ್ಪರ್ಧೆ ಮಾಡುವ ಮೊದಲಿನ ಸನ್ನಿವೇಶದಲ್ಲಿ ಕನಿಷ್ಠ 50,000 ಓಟುಗಳ ಬೃಹತ್ ಮುನ್ನಡೆಯಲ್ಲಿ ಸುನಿಲ್ ಕುಮಾರ್ ಅವರು ಗೆಲ್ಲುತ್ತಿದ್ದರು. ಈಗಿನ ಪರಿಸ್ಥಿತಿ ಸ್ವಲ್ಪ ಭಿನ್ನ.

ಇಂಧನ ಸಚಿವರಾಗಿ ತಮ್ಮ ಕ್ಷೇತ್ರದ ಯುವಕರಿಗೆ ಉದ್ಯೋಗ ದೊರಕಿಸುವಲ್ಲಿ ವಿಫಲರಾಗಿದ್ದು ಎದ್ದು ಕಾಣುತ್ತದೆ..ಘೋಷಿಸಿದ ಸಬ್ ಸ್ಟೇಷನ್ ಗಳಿಗೆ ಇನ್ನೂ ಶಿಲಾನ್ಯಾಸವಾಗದೇ ಈ ಬಾರಿ ಕೆಲಸವ೦ತೂ ಪ್ರಾರಂಭವಾಗುವುದು ಸಂಶಯ. ಕರಾವಳಿ ಭಾಗದ ಲೋ ಓಲ್ಟೇಜ್ ಸಮಸ್ಯೆಗೆ ಇನ್ನೂ ಮುಕ್ತಿ ಸಿಗದೇ ಇರುವುದು ಶಾಸಕರ ವಿಫಲತೆಯನ್ನು ತೋರಿಸುತ್ತದೆ.

ಹಿಂದುತ್ವಕ್ಕಾಗಿಯೇ‌ ಜೀವನ ಮುಡಿಪಾಗಿಟ್ಟು ಆಯುಷ್ಯವನ್ನು ಧಾರೆ ಎರೆದು ಬದುಕಿರುವ ಮುತಾಲಿಕ್ ರನ್ನು, ಕಳೆದ ಚುನಾವಣೆ ವೇಳೆ ಪಕ್ಷಕ್ಕೆ ಸೇರಿಸಿ ನಂತರ ಅದೇ ದಿನ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ನೋವಿಗೆ ಪ್ರತಿಕಾರಕ್ಕಾಗಿ ಹಿಂದೂ ಸಂಘಟನೆಗಳು ಈ ಚುನಾವಣೆಯನ್ನೇ ಅಸ್ತ್ರವನ್ನಾಗಿಸಿ ಧುಮುಕಲು‌‌ ಸಿದ್ದತೆ ಮಾಡಿಕೊಂಡಿದ್ದು ಮುತಾಲಿಕ್ ಅವರು ಎಲ್ಲಾ ಹಳ್ಳಿ ಹಳ್ಳಿಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾತ್ರಿ ಹಗಲು ಎನ್ನದೆ ಭಾಗವಹಿಸುತ್ತಿದ್ದು ಹಾಲಿ ಶಾಸಕರಿಗೆ ತಲೆನೋವು ಉಂಟು ಮಾಡಿದೆ. ಜೊತೆಗೆ ಮುತಾಲಿಕ್ ರಿಗೆ ರಾಜ್ಯ ಬಿಜೆಪಿ ಹಿಂಬದಿಯಿ೦ದ ಬೆಂಬಲಿಸುತ್ತಿದ್ದು ದೇಶ ವಿದೇಶಗಳಿಂದ ಈ ಚುನಾವಣೆಗೆ ಭಾರಿ ಫ೦ಡ್ ಬರುವ ನಿರೀಕ್ಷೆ ಇದೆ. ಇಲ್ಲಿ ಕಾ೦ಗ್ರೇಸ್ ಆಟಕ್ಕೂಇಲ್ಲ ಲೆಕ್ಕಕ್ಕೂ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಇದೆ.

ಬಲ್ಲ ಮೂಲಗಳ ಪ್ರಕಾರ ಪ್ರವೀಣ್ ಭಾಯ್ ತೋಗಾಡಿಯಾರಂತಹ ಘಟಾನುಘಟಿ ನಾಯಕರು ಇಲ್ಲಿಗೆ ಆಗಮಿಸಲಿದ್ದಾರೆ. ಹಾಗೂ ದೇಶವಿದೇಶಗಳಿಂದ ಸಾಧು ಸಂತರ ದ೦ಡೇ ಇಲ್ಲಿಗೆ ಧಾಂಗುಡಿ ಇಡಲಿದೆ. ಎಲ್ಲರೂ ಬಂದು ಇಲ್ಲಿ ಮೊಕ್ಕಾ ಹೂಡಲಿದ್ದಾರೆ. ಈ ಸಲ ಕಾರ್ಕಳ ಕಳೆಗಟ್ಟಲಿದೆ. ಧರ್ಮ ಮತ್ತು ಬಿಜೆಪಿ ಎನ್ನುವುದೇ ಇಲ್ಲಿನ ಪ್ರಮುಖ ಚುನಾವಣಾ ಅಸ್ತ್ರವಾಗಲಿದೆ. ಡಿಸಿಎಂ ರೇಸಿನಲ್ಲಿ ಮುಂಚೂಣಿಯಲ್ಲಿ ಇರುವ ಸುನಿಲ್ ಕುಮಾರ್ ಅನ್ನು ಅವರ ಕ್ಷೇತ್ರದಲ್ಲಿಯೇ ಕಟ್ಟಿ ಹಾಕಿ, ಕಾರ್ಕಳದಿಂದ ಅವರು ಅತ್ತಿತ್ತ ಮಿಸುಕದಂತೆ ಮಾಡುವುದು ಉತ್ತರ ಕರ್ನಾಟಕದ ಮತ್ತು ರಾಜ್ಯ ಬಿಜೆಪಿಯಲ್ಲಿನ ಸುನಿಲ್ ಕುಮಾರ್ ವಿರುದ್ಧ ಬಣದ ಪ್ಲಾನ್. ಅದರ ಭಾಗವಾಗಿಯೇ ಮುತಾಲಿಕ್ ಕಾರ್ಕಳದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಜೊತೆಗೆ, ಕನ್ನಡ ಸಂಸ್ಕೃತಿ ಸಚಿವರಾಗಿ ತುಳು ಭಾಷೆಗೆ ಸಾ೦ವಿಧಾನಿಕ ಮಾನ್ಯತೆ ನೀಡುವಲ್ಲಿ ವಿಫಲರಾಗಿದ್ದು ತುಳುವರ ಅಂತರ್ ಪ್ರಜ್ಞೆಯನ್ನು ಕೆಣಕಿದೆ. ಮಾತೃ ಭಾಷೆಗಾಗಿ ಏನು ಬೇಕಾದರೂ ಮಾಡಲು ಸಿದ್ದ ಇರುವ ತುಳು ಜನತೆ ಚುನಾವಣೆಯಲ್ಲಿ ಪಾಠ ಕಲಿಸಲು ಸಜ್ಜಾಗಿದ್ದಾರೆ. ಏನೇ ಇರಲಿ, ಈ ಬಾರಿ ಕಾರ್ಕಳ ವಿಧಾನಸಭೆಯ ನಿರ್ಣಯ ತೀವ್ರ ಕುತೂಹಲ ನೀಡುವುದ೦ತೂ ಸ್ಪಷ್ಟ. ಅಭಿವೃದ್ಧಿ, ತಮ್ಮವರ ಅಸಡ್ಡೆ- ಅಸಮಾಧಾನ, ಧರ್ಮ, ಬಿಜೆಪಿ, ಮೋದಿ ಮತ್ತು ತುಳು ಭಾಷೆ – ಎಲ್ಲವೂ ಚುನಾವಣೆಯಲ್ಲಿ ಪ್ರಮುಖ ವಿಷಯಗಳಾಗಿ ಪರಿಣಮಿಸಲಿವೆ.

Leave A Reply

Your email address will not be published.