Dr.Rajkumar : ಸ್ಯಾಂಡಲ್‌ವುಡ್‌ ಪ್ರವೇಶ ಪಡೆದ ಅಣ್ಣಾವ್ರ ಕುಟುಂಬದ ಮೊಮ್ಮಕ್ಕಳು ಇವರು!

Dr. Rajkumar : ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಪ್ರಖ್ಯಾತಿ ಪಡೆದ ಕನ್ನಡದ ರತ್ನ ಡಾ. ರಾಜಕುಮಾರ್(Dr. RajKumar) ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮನಾಗಿ ಮಿಂಚಿದವರು. ಇವರ ಕುಟುಂಬದ ಮೂರು ತಲೆಮಾರು ಕೂಡ ಬಣ್ಣದ ಲೋಕದಲ್ಲಿ(Film Industry) ಗುರುತಿಸಿಕೊಂಡಿದೆ.

ದೊಡ್ಮನೆ ಕುಟುಂಬದ ಶಿವರಾಜ್‌ಕುಮಾರ್ ‘ಸೆಂಚುರಿ ಸ್ಟಾರ್ ಆಗಿ ಕನ್ನಡಿಗರ ಪ್ರೀತಿ ಪಡೆದುಕೊಂಡರೆ, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್( Puneeth Raj Kumar)ಕುಮಾರ್ ಪಡೆದ ಖ್ಯಾತಿ ವರ್ಣಿಸಲು ಪದಗಳೇ ಇಲ್ಲ. ನಗುಮುಖದ ಒಡೆಯ ತನ್ನ ಸಹಜ ನಟನೆಯ ಮೂಲಕ ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನರ ಮನದಲ್ಲಿ ಅಜಾರಮರರಾಗಿದ್ದಾರೆ. ರಾಜ್ ಫ್ಯಾಮಿಲಿಯ ಸಾಲು ಸಾಲು ಪ್ರತಿಭೆಗಳು ಬಣ್ಣದ ಲೋಕದಲ್ಲಿ ಮಿಂಚಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಾಜ್ ಕುಟುಂಬದ ಮೂರು ತಲೆಮಾರಿನ ಕುಡಿಗಳು ಸಿನಿಮಾ ಲೋಕದ ಜೊತೆಗೆ ನಂಟು ಬೆಸೆದುಕೊಂಡಿದ್ದಾರೆ.

ಸಿನಿ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧತೆ ನಡೆಸಿರುವ ದೊಡ್ಮನೆ ಕುಡಿಗಳು ಯಾರು ಅಂತೀರಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ವಿನಯ್ ರಾಜ್ ಕುಮಾರ್( Vinay Raj Kumar)
ಬಣ್ಣದ ಲೋಕದಲ್ಲಿ ಮಿಂಚಲು ಅಣಿಯಾದ ದೊಡ್ಮನೆ ಕುಡಿಯಲ್ಲಿ ವಿನಯ್ ಮೊದಲಿಗರು. ರಾಘವೆಂದ್ರ ರಾಜ್ ಕುಮಾರ್ ಅವರ ಹಿರಿಯ ಮಗ ವಿನಯ್ ರಾಜ್ ಕುಮಾರ್ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಪ್ಪು ರೀತಿಯೇ ಬಾಲ ನಟನಾಗಿ ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ತೆರೆ ಮೇಲೆ ಮಿನುಗಿದ್ದಾರೆ. 2015ರಲ್ಲಿ ‘ಸಿದ್ದಾರ್ಥ್’ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ವಿನಯ್ ಅವರು ಸಿದ್ದಾರ್ಥ್, ರನ್ ಆಂಟನಿ, ಆರ್ ದಿ ಕಿಂಗ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಣ್ಣನ ಹಾದಿಯಲ್ಲೇ ತಮ್ಮ ಕೂಡ ಬಣ್ಣ ಹಚ್ಚಲು ರೆಡಿಯಾಗಿ ತನ್ನ ನಟನಾ ಸಾಮರ್ಥ್ಯ ಪರೀಕ್ಷೆಗೆ ಅಣಿಯಾಗಿದ್ದಾರೆ.

ಯುವ ರಾಜಕುಮಾರ್ (yuva Raj Kumar)
ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಯುವ ರಾಜಕುಮಾರ್ ಸಂತೋಷ್ ಆನಂದ್ ರಾಮ್ ನಿರ್ದೇಶನದ ಮತ್ತು ಹೊಂಬಾಳೆ ಫಿಲ್ಮ್ಸ್ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಕಥೆಯೊಂದನ್ನು ಪುನೀತ್ ರಾಜಕುಮಾರ್ ಅವರಿಗಾಗಿ ತಯಾರಿ ನಡೆಸಿದ್ದರು. ಆದರೆ, ಅಪ್ಪು ಕಾಲದ ಕರೆಗೆ ಓಗೊಟ್ಟು ವಿಧಿವಶರಾದ ಹಿನ್ನೆಲೆ ಅಪ್ಪು ನಟಿಸಬೇಕಿದ್ದ ಈ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ನಟಿಸುತ್ತಿದ್ದಾರೆ.

ಧೀರೇನ್ ರಾಮ್ ಕುಮಾರ್(Dheeren Ramkumar)
ಡಾ.ರಾಜ್‌ಕುಮಾರ್ ಅವರ ಮುದ್ದಿನ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ದಂಪತಿ ಸುಪುತ್ರ ಧೀರೇನ್ ರಾಮ್‌ಕುಮಾರ್ (Dheeren Ramkumar)ಕೂಡ ಸಿನಿಲೋಕದಲ್ಲಿ ಪಯಣ ಆರಂಭಿಸಿದ್ದಾರೆ. ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಚೊಚ್ಚಲ ಚಿತ್ರ ‘ಶಿವ 143’ ಸಿನಿಮಾದ ಸಾಹಸ , ಆಕ್ಷನ್ ರೋಮ್ಯಾಂಟಿಕ್ ಹಾಗೂ ಡ್ರಾಮಾ ಎಲ್ಲವನ್ನೂ ಒಳಗೊಂಡ ಚಿತ್ರವನ್ನು ಒಳಗೊಂಡ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.ಈ ನಡುವೆ ಇವರ ಮಗಳು ಕೂಡ ಧನ್ಯಾ ಕೂಡ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಷಣ್ಮುಖ ಗೋವಿಂದರಾಜ್(Shanmukha Govindaraj)
ಡಾ.ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಅವರ ಸುಪುತ್ರ ಷಣ್ಮುಖ ಗೋವಿಂದರಾಜ್(Shanmukha Govindaraj) ಅವರ ಮೊದಲ ಸಿನಿಮಾ ಪರದೆ ಮೇಲೆ ಮೋಡಿ ಮಾಡಲು ರೆಡಿಯಾಗಿದೆ. ಷಣ್ಮುಖ ಗೋವಿಂದರಾಜ್ ಸಿನಿಮಾಗೆ ‘ನಿಂಬಿಯಾ ಬನಾದ ಮ್ಯಾಗ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಶೂಟಿಂಗ್ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.

ಧನ್ಯಾ ರಾಮಕುಮಾರ್(Dhanya Ramkumar)
ಡಾ.ರಾಜ್‌ಕುಮಾರ್ ಅವರ ಪುತ್ರಿ ಪೂರ್ಣಿಮಾ ಹಾಗೂ ರಾಮ್‌ಕುಮಾರ್ ದಂಪತಿಗಳ ಸುಪುತ್ರಿ ದೊಡ್ಮನೆ ಕುಡಿ ಧನ್ಯಾ ರಾಮಕುಮಾರ್ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸಿನಿರಂಗಕ್ಕೆ 2021ರಲ್ಲಿ ಬಿಡುಗಡೆಯಾಗಿದ್ದು ಯಶಸ್ಸನ್ನು ಗಳಿಸಿದೆ. ಸದ್ಯ ಕಾಲಾ ಪತ್ಥರ್ ಸಿನಿಮಾದಲ್ಲಿ ಧನ್ಯಾ ನಟಿಸುತ್ತಿದ್ದಾರೆ. ದೊಡ್ಮನೆ ಕುಟುಂಬದ ಮೂರು ತಲೆಮಾರಿನ ಕೊಂಡಿಗಳು ಸಿನಿ ಲೋಕದಲ್ಲಿ ಮಿಂಚಲು ಸಕಲ ಸಿದ್ಧತೆ ನಡೆಸಿದ್ದು, ಅದೃಷ್ಟ ಪರೀಕ್ಷೆಗೆ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.