Datta Peeta : ಸಿ ಟಿ ರವಿಗೆ ಶಾಕ್‌ ನೀಡಿದ ಮುಸ್ಲಿಂ ಸಮುದಾಯ!

Datta peeta Urus: ಮುಸ್ಲಿಂ ಸಮುದಾಯ (Muslim Community) ಚಿಕ್ಕಮಗಳೂರು ದತ್ತಪೀಠದಲ್ಲಿನ ಉರುಸ್ (Datta peeta Urus) ವಿಚಾರದ ಕುರಿತಂತೆ ಜಿಲ್ಲಾಡಳಿತದ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿದೆ.

ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಇದೇ ಮಾರ್ಚ್ 8 ರಿಂದ ಮೂರು ದಿನಗಳ ಕಾಲ ಜಿಲ್ಲಾಡಳಿತದಿಂದ ಉರುಸ್ ನಡೆಯಲಿದೆ. ಇದು ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿ ಪಡೆದಿದ್ದು, ಸದ್ಯ ದತ್ತಜಯಂತಿ ಹಾಗೂ ಉರುಸ್ ವಿವಾದ ಭುಗಿಲೆದ್ದಿದೆ. ಇಲ್ಲಿಯವರೆಗೆ ಶಾಂತಿಯುತವಾಗಿ ನಡೆಯುತ್ತಿದ್ದ ದತ್ತಜಯಂತಿ-ಉರುಸ್ ಸರ್ಕಾರ ದತ್ತಪೀಠದ ಆಡಳಿತಕ್ಕೆ ಸಮನ್ವಯ ಸಮಿತಿ ರಚಿಸಿದ ನಂತರ ದತ್ತಜಯಂತಿಯೂ ಬದಲಾಗಿದ್ದು, ಆಚರಣೆಗಳ ಬಗ್ಗೆ ಮುಸ್ಲಿಂ ಸಮುದಾಯದವರಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಶಾಸಕ ಸಿ.ಟಿ.ರವಿ ಅವರು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಉರುಸ್ ಮಾಡಲು ಅಣಿಯಾಗಿದ್ದ ಸಚಿವರಿಗೆ ಸಂಕಷ್ಟ ಎದುರಾಗಿದೆ. ಉರುಸ್ ಇದೇ ಮಾರ್ಚ್ 8, 9, 10 ರಂದು ನಡೆಯಬೇಕಾಗಿದ್ದು, ಆದರೆ ಜಿಲ್ಲಾಡಳಿತ ನೇತೃತ್ವದ ಉರುಸ್​​​ಗೆ(Datta peeta Urus) ಮುಸ್ಲಿಂ ಸಮುದಾಯ ವಿರೋಧ ವ್ಯಕ್ತ ಪಡಿಸಿದೆ. ಉರುಸ್ ನಡೆಸೋದು ಮುಸ್ಲಿಂ ಸಮುದಾಯವಾಗಿದ್ದು, ಇದರಲ್ಲಿ ಜಿಲ್ಲಾಡಳಿತ ಹಸ್ತಕ್ಷೇಪ ಮಾಡೋದು ಸರಿಯಲ್ಲ ಎಂದು ಇಸ್ಲಾಂ ಧರ್ಮದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ನಾವು ದತ್ತಜಯಂತಿಗೆ (Datta Jayanti) ಯಾವುದೇ ದಿಗ್ಬಂಧ ಹೇರಿಲ್ಲ ಅದೇ ರೀತಿಯಲ್ಲಿ ನಮ್ಮ ಉರುಸ್ಗೂ ಜಿಲ್ಲಾಡಳಿತ ಯಾವುದೇ ನಿರ್ಬಂಧ ಹೇರಬಾರದು ಎಂದು ಸೂಚಿಸಿದೆ.

ಈಗ ಸರ್ಕಾರ ರಚಿಸಿರುವ ವ್ಯವಸ್ಥಾಪನ ಸಮಿತಿಯಲ್ಲಿರುವ ಎಂಟು ಜನರಲ್ಲಿ ಏಳು ಜನ ಹಿಂದುಗಳಾಗಿದ್ದು ಒಬ್ಬ ವ್ಯಕ್ತಿ ಮಾತ್ರ ಮುಸ್ಲಿಂ. ಆದರೆ ಆತ ಮುಸ್ಲಿಮನೇ ಅಲ್ಲ ಎಂದು ಇಸ್ಲಾಂ ಸಮುದಾಯ ಆರೋಪ ಮಾಡುತ್ತಿದೆ. ದರ್ಗಾ ಪಕ್ಕದಲ್ಲೇ ಮಸೀದಿ ಇದ್ದು, ನಮ್ಮ ಉರುಸ್ ನಡೆಸಲು ಅದನ್ನು ಓಪನ್ ಮಾಡಿಕೊಡಿ. ನಮಾಜ್ ಮಾಡಿ ನಾವು ಪೂಜೆಗೆ ಮಾಡಲು ಅವಕಾಶ ನೀಡಿ ಎಂದು ಇಸ್ಲಾಂ ಸಮುದಾಯ ಹೇಳಿಕೊಂಡಿದೆ. ನಮಗೆ ಈಗ ನಮಾಜ್ (Namaz), ಫಾತಿಹಾ (Fatiha) ಏನನ್ನು ಮಾಡುವುದಕ್ಕೂ ಕೂಡ ನಮ್ಮ ಮುಸ್ಲಿಂ ಸಮಾಜ ಸರ್ಕಾರದ ವ್ಯವಸ್ಥಾಪನಾ ಸಮಿತಿ ಅವಕಾಶ ನೀಡುತ್ತಿಲ್ಲ. ಸರ್ಕಾರ ಭಾವೈಕ್ಯತೆ ಅನುಸಾರ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆ ಸಮಿತಿಯಲ್ಲಿ ನಾಲ್ಕು ಹಿಂದೂ ನಾಲ್ಕು ಮುಸ್ಲಿಮರು ಇರಬೇಕು ಎಂದು ಇಸ್ಲಾಂ ಸಮುದಾಯ ದವರು ಆಗ್ರಹಿಸಿದ್ದಾರೆ. ಹೀಗಾಗಿ, ಉರುಸ್​​ನಲ್ಲಿ ವ್ಯವಸ್ಥಾಪನ ಸಮಿತಿಯ ಮಧ್ಯಸ್ಥಿಕೆಯ ಅವಶ್ಯಕತೆ ನಮಗಿಲ್ಲ. ಒಂದು ವೇಳೆ ಜಿಲ್ಲಾಡಳಿತ ಉರುಸ್ ಮಾಡಿದ್ದಲ್ಲಿ ಮುಸ್ಲಿಂ ಸಮುದಾಯದವರು ಯಾರು ಭಾಗಿಯಾಗೋದೆ ಇಲ್ಲ ಎಂದು ಸಮುದಾಯದವರು ಎಚ್ಚರಿಕೆ ನೀಡಿದ್ದಾರೆ.

ನಮ್ಮ ಸಮುದಾಯದ ನಿಯಮಗಳ ಅನುಸಾರ ಉರುಸ್ ನಡೆಯಬೇಕು ಎಂದು ಮುಸ್ಲಿಂ(Muslim) ಸಮುದಾಯ ಪಟ್ಟುಹಿಡಿದಿದ್ದು, ನಮ್ಮ ಆಚರಣೆಗಳಿಗೆ ಜಿಲ್ಲಾಡಾಳಿತ ಮೂಗು ತೂರಿಸುವ ಪ್ರಯತ್ನ ನಡೆಸೋದು ಎಷ್ಟು ಸರಿ? ಇದನ್ನು ಇಸ್ಲಾಂ ಸಮುದಾಯ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿ ಜಿಲ್ಲಾಡಳಿತದಿಂದ ಉರುಸ್ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿ ದತ್ತಪೀಠದ ಆಡಳಿತಕ್ಕೆ ಸರ್ಕಾರ ರಚಿಸಿದ ಸಮನ್ವಯ ಸಮಿತಿ ವಿರುದ್ಧ ಮುಸ್ಲಿಂ ಸಮುದಾಯ ಅಸಮಾಧಾನ ಹೊರ ಹಾಕಿದೆ. ಈ ನಡುವೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಮುಸ್ಲಿಂ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಆದೇಶ ನೀಡಿದಂತೆ ಜಾಹೀರಾತು ನೀಡುವ ಪ್ರಕ್ರಿಯೆ ಹಾಗೂ ಇನ್ನಿತರ ಕಾರ್ಯಗಳು ಮುಜರಾಯಿ ಆಯುಕ್ತರ ಸಹಕಾರದಿಂದಲೇ ನಡೆಯುತ್ತಿದ್ದು, ಈ ಕುರಿತು ಏನೇ ಅಸಮಾಧಾನ ಆಕ್ಷೇಪಗಳಿದ್ದರು ಕೂಡ ನ್ಯಾಯಾಲಯದ ಮೊರೆ ಹೋಗಬಹುದು ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.