Business Tips : ಈ ಹುಲ್ಲು ಬೆಳೆಸಿ ಲಕ್ಷಾಧೀಶ್ವರರಾಗಿ, ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ!
Business Tips: ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ನೌಕರರನ್ನು ವಜಾ ಮಾಡುತ್ತಿರುವುದು ಗೊತ್ತಿರುವ ವಿಚಾರ. ಈ ನಡುವೆ ಒಳ್ಳೆಯ ಆದಾಯ ಇದ್ದರೂ ಕೂಡ ಉದ್ಯೋಗದಲ್ಲಿರುವ ಅದೆಷ್ಟೋ ಮಂದಿ ಕೆಲಸದೊತ್ತಡದಿಂದ ಕೆಲ್ಸಕ್ಕೆ ಗುಡ್ ಬೈ ಹೇಳಿ, ಕೃಷಿಯತ್ತ ಮುಖ ಮಾಡಿದ ಉದಾಹರಣೆಗಳು ಕೂಡ ನಮಗೆ ನೋಡ ಸಿಗುತ್ತವೆ. ನೀವು ಕೂಡ ಉತ್ತಮ ಆದಾಯ ಬರುವ ಮಾರ್ಗಗಳಲ್ಲಿ ತೊಡಗಿಸಿಕೊಳ್ಳಲು ಯೋಜನೆ ಹಾಕಿದ್ದರೆ ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.
ಪಶು ಪಾಲಕರಿಗೆ ಜಾನುವಾರುಗಳ ನಿರ್ವಹಣೆ ವೇಳೆ ಆಹಾರದ ವೆಚ್ಚ ಪಶು ಆಹಾರದಲ್ಲಿ ದಾನಿ ಮಿಶ್ರಣ, ಒಣ ಹುಲ್ಲು ಮತ್ತು ಹಸಿರು ಹುಲ್ಲನ್ನು ಒಳಗೊಂಡಿರುತ್ತದೆ. ಹಸಿರು ಹುಲ್ಲನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವುದರಿಂದ ಒಣ ಹುಲ್ಲು ಮತ್ತು ಪಶು ಆಹಾರದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು. ಹಸಿ ಹುಲ್ಲನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದಕ್ಕಾಗಿ ಬಹಳಷ್ಟು ಮೇವಿನ ಪ್ರಭೇದಗಳಿವೆ. ಅವುಗಳಲ್ಲಿ ನೇಪಿಯರ್ ಗ್ರಾಸ್ ಕೂಡ ಒಂದಾಗಿದ್ದು, ಇವುಗಳನ್ನು ಬೆಳೆಯುವ (BusinessTips) ಮೂಲಕ ಹೆಚ್ಚಿನ ಆದಾಯ ಗಳಿಸಬಹುದು.
ಪಶುಸಂಗೋಪನೆಯಲ್ಲಿ ಹುಲ್ಲುಗಳು ಅಗತ್ಯವಾಗಿದ್ದು(NAPIER GRASS) ನೇಪಿಯರ್ ಗ್ರಾಸ್ ಎಂಬ ಹುಲ್ಲು ಪ್ರಾಣಿಗಳಿಗೆ ಆರೋಗ್ಯಕರ ಹಾಗೂ ಪೌಷ್ಟಿಕಾಂಶಯುಕ್ತವಾಗಿದ್ದು ಪ್ರಾಣಿಗಳಿಗೆ ಉತ್ತಮ ಮೇವಾಗಿದೆ. ಈ ಹುಲ್ಲಿನ ಬಳಕೆಯಿಂದ ಪ್ರಾಣಿಗಳಲ್ಲಿ ಹಾಲಿನ ಉತ್ಪಾದನೆ ಕೂಡ ಹೆಚ್ಚುತ್ತದೆ. ಈ ಹುಲ್ಲಿನ ವ್ಯವಹಾರ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು.
ನೇಪಿಯರ್ ಗ್ರಾಸ್ ನಲ್ಲಿ ಅನೇಕ ಪ್ರಭೇದಗಳಿದ್ದು, ಇತ್ತೀಚಿನ ದಿನಗಳಲ್ಲಿ ಸೂಪರ್ ನೇಪಿಯರ್ ಹುಲ್ಲು ಬಹಳ ಜನಪ್ರಿಯತೆ ಗಳಿಸುತ್ತಿದ್ದು, ಸಾಮಾನ್ಯ ಪ್ರಚಲಿತ ಹೈಬ್ರಿಡ ನೇಪಿಯರ್ ಹಲವು ತಿಂಗಳುಗಳಲ್ಲಿ 3 ಮೀಟರ್ ಎತ್ತರಕ್ಕೆ ಬೆಳೆದರೆ ಈ ಹುಲ್ಲು ಕೇವಲ ಒಂದೇ ತಿಂಗಳಲ್ಲೇ 1-2 ಮೀಟರ್ ನಷ್ಟು ಬೆಳೆಯುತ್ತದೆ. ಮತ್ತು 45 ದಿನಗಳಿಗೊಮ್ಮೆ ಕಟಾವು ಮಾಡಬಹುದಾಗಿದೆ.
ನೇಪಿಯರ್ ಹುಲ್ಲು(NapierGrass) ಕೃಷಿಗೆ (Agriculture)ಆಳವಾದ ಉಳುಮೆ ಮಾಡಬೇಕಾಗುತ್ತದೆ. ಇದರ ಕೃಷಿಗೆ 20 ಸಾವಿರ ಬೀಜ ಬೇಕಾಗುತ್ತದೆ. ಇದರ ನಡುವೆ ಕಳೆ ಕೀಳಬೇಕಾಗಿದ್ದು, ಕೃಷಿಗೆ ಬಲವಾದ ಸೂರ್ಯನ ಬೆಳಕು ಮತ್ತು ಮಳೆ ಬೇಕಾಗುತ್ತದೆ. ಜೂನ್ ಮತ್ತು ಜುಲೈನಲ್ಲಿ ಬಿತ್ತನೆ ಮಾಡಿದರೆ ಒಳ್ಳೆಯ ಫಸಲು ಬರಲಿದೆ. 5 ವರ್ಷಗಳವರೆಗೆ ಬೆಳೆ ನೀಡುವ ಹಿನ್ನೆಲೆ ನೀವು 5 ವರ್ಷಕ್ಕೆ ಒಮ್ಮೆ ಕೃಷಿ ಮಾಡಿದರೆ ಸಾಕಾಗುತ್ತದೆ. ನೇಪಿಯರ್ ಹುಲ್ಲಿನ ಒಂದು ಗಿಡವು 20 ಕೆಜಿ ಹುಲ್ಲು ನೀಡಲಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ (Business tips) ಇರುವ ಹಿನ್ನೆಲೆ ನೀವು ಮಾರುಕಟ್ಟೆಯಲ್ಲಿ 10 ಗಿಡಗಳನ್ನು ಮಾರಾಟ ಮಾಡಿದ್ದಲ್ಲಿ ನೀವು 2 ಲಕ್ಷದವರೆಗೆ ಗಳಿಕೆ ಮಾಡಬಹುದು. ಹಾಗಿದ್ರೆ ನೀವು ಕೂಡ ಉತ್ತಮ ಆದಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದರೆ ಈ ಪ್ರಯೋಗ ನಡೆಸಿ ಪ್ರಯೋಜನ ಕಂಡುಕೊಳ್ಳಿ.