PT Teacher : ಪಿಟಿ ಟೀಚರ್ ಆಗಲು ಬಯಸುವಿರಾ? ಈ ವೃತ್ತಿಯ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

PT Teacher : ಇಂದಿನ ಕಾಲದಲ್ಲಿ ಶಿಕ್ಷಣ(education) ಅತ್ಯಗತ್ಯವಾಗಿದ್ದು,ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಭವಿಷ್ಯದ ಏಳಿಗೆಗೆ ಪೂರಕವಾಗಿ ವಿದ್ಯಾರ್ಹತೆ ಮಕ್ಕಳ ಏಳಿಗೆಗೆ ಮಹತ್ತರ ಪಾತ್ರ ವಹಿಸುತ್ತದೆ. ಓದಿನ ಜೊತೆ ಜೊತೆಗೆ ಆಟ ಗಳು ಕೂಡ ಮಕ್ಕಳ ಏಕಾಗ್ರತೆ ಹೆಚ್ಚಿಸುವುದಲ್ಲದೆ ಬೆಳವಣಿಗೆಗೆ ಸಹಕಾರಿ. ಬಾಲ್ಯದಲ್ಲಿ ಎಲ್ಲರು ಖುಷಿಯಿಂದ ಕಾಯುತ್ತಿದ್ದ ಸಮಯವೆಂದರೆ ಅದು ಪಿಟಿ ಪೀರಿಯಡ್ ಅಥವಾ ಆಟದ ಸಮಯ. ಒಂದು ಗಳಿಗೆಯಾದರು ಮೈದಾನಕ್ಕೆ ಕಾಲಿಟ್ಟರೆ ಎಲ್ಲಿಲ್ಲದ ಹುರುಪು ಸಂತೋಷ ಭುಗಿಲೇಳುತ್ತಿದ್ದ ದಿನಗಳೇ ಮಧುರ. ಆದರೆ, ಈ ಪಿಟಿ ಟೀಚರ್(PT Teacher) ಆಗುವುದಕ್ಕೆ ಏನೆಲ್ಲಾ ಅರ್ಹತೆಯಿರಬೇಕು? ಅವರ ಜವಾಬ್ದಾರಿಗಳೇನು ಎಂಬ ಮಾಹಿತಿ ನಿಮಗಾಗಿ.

ದೈಹಿಕ ಶಿಕ್ಷಣ ಶಿಕ್ಷಕರನ್ನು ಪಿಇಟಿ (ಪಿಟಿ) ಶಿಕ್ಷಕ ಎಂದು ಕರೆಯೋದು ಸಹಜವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಸಹಜವಾಗಿ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಉಳಿದವರಿಗೆ ತರಬೇತಿ ನೀಡಬಲ್ಲ ಅಭಿಲಾಷೆ ಇರುವವರು ಈ ಹುದ್ದೆಗೆ ಪ್ರಯತ್ನಿಸಿಬಹುದು. ಪಿಟಿ ಶಿಕ್ಷಕರ ಮುಖ್ಯ ಕೆಲಸ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಕ್ರೀಡೆಗಳ ತರಬೇತಿ, ಸ್ಪರ್ಧೆಗಳಿಗೆ ತಯಾರಿ ನಡೆಸಬೇಕಾಗುತ್ತದೆ. ಮಕ್ಕಳಿಗೆ ಕ್ರೀಡೆ, ಆರೋಗ್ಯ, ದೈಹಿಕ ಬೆಳವಣಿಗೆ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಅರ್ಥೈಸುವುದು ಪಿಇಟಿ ಶಿಕ್ಷಕರ ಕರ್ತವ್ಯವಾಗಿರುತ್ತದೆ. ಇದರ ಜೊತೆಗೆ, ಪಿಇಟಿ ಶಿಕ್ಷಕರು ಎಲ್ಲಾ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಕೂಡ ಕಡ್ಡಾಯವಾಗಿರಬೇಕು ಎಂಬ ನಿಯಮವಿದೆ.

ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದ ಬಳಿಕ ಅಭ್ಯರ್ಥಿಗಳು ರಾಜ್ಯ ಮಟ್ಟದ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ನೀಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ನೇರ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಶಿಕ್ಷಕರ ಕೋರ್ಸ್ ಪೂರ್ಣಗೊಳಿಸಲು ವಯೋಮಿತಿ ಎಷ್ಟು ಎಂದು ಗಮನಿಸಿದರೆ, B.P.ED ಕೋರ್ಸ್ ಮಾಡಲು ಕನಿಷ್ಟ 19 ವರ್ಷ ಆಗಿರಬೇಕಾಗಿದ್ದು, ಡಿಪಿಇಡಿ ಕೋರ್ಸ್ ಗೆ ಅಭ್ಯರ್ಥಿಯು ಕನಿಷ್ಠ 16 ವರ್ಷ ವಯಸ್ಸಿನವರಾಗಿರಬೇಕಾಗುತ್ತದೆ. ಪ್ರೈಮರಿ ಶಾಲೆಯಲ್ಲಿ ಪಿಟಿ ಶಿಕ್ಷಕರಾಗಬೇಕಾದರೆ ಡಿಪ್ಲೊಮಾ ಆಧಾರದ ಅನುಸಾರ ಅರ್ಹತೆ ಪಡೆಯಬಹುದು. ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ ಅಭ್ಯರ್ಥಿಗಳು ಪ್ರಾಥಮಿಕ ಶಾಲೆಯಲ್ಲಿ ನೇಮಕಾತಿ ಪಡೆಯಲು ಹಾಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.

B.P.ED (ಬ್ಯಾಚುಲರ್ ಇನ್ ಫಿಸಿಕಲ್ ಎಜುಕೇಶನ್) ಮಾಡಿದ ಅಭ್ಯರ್ಥಿಗಳು ದೇಶದ ಯಾವುದೇ ಶಾಲೆ ಮತ್ತು ಕಾಲೇಜಿನಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದು.ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡ ಬಳಿಕ ವ್ಯಾಯಾಮ ಆಧಾರಿತ ಕಲಿಕೆಯ ಜೊತೆಗೆ ಕ್ರೀಡೆ ಮತ್ತು ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾಗುತ್ತದೆ. ಕ್ರೀಡಾ ತರಬೇತುದಾರಾಗಿದ್ದರೆ ಪ್ರತಿ ವಿದ್ಯಾರ್ಥಿ ಇಲ್ಲವೇ ಇಡೀ ತಂಡಕ್ಕೆ ಕ್ರೀಡಾ ತರಬೇತಿ ನೀಡಬೇಕಾಗಿದ್ದು, ದೈಹಿಕ ಬೋಧಕ, ಕ್ರಿಕೆಟ್ ಕೋಚ್, ಆರೋಗ್ಯ ತರಬೇತುದಾರ ಹುದ್ದೆಗಳಿಗೂ ನೇಮಕಾತಿ ಪಡೆದುಕೊಳ್ಳಬಹುದು. M.P.ED (ಮಾಸ್ಟರ್ ಇನ್ ಫಿಸಿಕಲ್ ಎಜುಕೇಶನ್) ಮಾಡಿದ ಅಭ್ಯರ್ಥಿಗಳು ಉನ್ನತ ಮಟ್ಟದ ಹುದ್ದೆಗಳಿಗೆಅಂದರೆ ಸರ್ಕಾರಿ ಇಲಾಖೆಯ ರೀತಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಜೊತೆಗೆ HOD ಹುದ್ದೆಗಳಿಗೂ ಕೂಡ ಅರ್ಹರಾಗಿರುತ್ತಾರೆ.

ಇದನ್ನೂ ಓದಿ : Vidyanidhi Yojana: ಕೃಷಿ ಕಾರ್ಮಿಕ ಮಕ್ಕಳಿಗೆ ಗುಡ್ ನ್ಯೂಸ್!

Leave A Reply

Your email address will not be published.