Dreams : ಕನಸಿನಲ್ಲಿ ಪಕ್ಷಿ ಕಂಡರೆ ಏನರ್ಥ?

Birds in dream : ನಿದ್ದೆಯಲ್ಲಿ ಕನಸು (dream)ಬೀಳದ ಮನುಷ್ಯ ಇಲ್ಲ. ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ. ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ, ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ. ಒಂದು ಕನಸ್ಸಿನ ಅವಧಿ ಇಷ್ಟೇ ಎಂದು ಊಹಿಸಲು ಕೂಡ ಸಾಧ್ಯವಿಲ್ಲ. ಅದರಲ್ಲೂ ಕೆಲವರಿಗೆ ಸಾಮಾನ್ಯವಾಗಿ ಒಂದಲ್ಲ ಒಂದು ವಿಧದಲ್ಲಿ ಪ್ರಾಣಿಗಳ ಅಥವಾ ಪಕ್ಷಿಗಳ ಕನಸು ಬೀಳುತ್ತವೆ (Birds in dream), ಇದು ಸಾಮಾನ್ಯ. ಆದರೆ ಅಪರೂಪವಾಗಿ ಹಮ್ಮಿಂಗ್ ಬರ್ಡ್ಸ್(Humming Birds) ಗಳ ಕನಸು ಬೀಳುವುದು ವಿಶಿಷ್ಟ ಅರ್ಥವನ್ನು ನೀಡುತ್ತೆ.

ಈ ಹಕ್ಕಿ ಉಷ್ಣವಲಯದ ಅಮೇರಿಕನ್ ಹಕ್ಕಿ, ಇದು ವರ್ಣರಂಜಿತ ವರ್ಣವೈವಿಧ್ಯದ ಪುಕ್ಕಗಳನ್ನು ಹೊಂದಿರುತ್ತದೆ. ಸದ್ಯ ಕನಸುಗಳಲ್ಲಿ ಹಮ್ಮಿಂಗ್ ಬರ್ಡ್ಸ್ ಸಕಾರಾತ್ಮಕ ಅರ್ಥಗಳೊಂದಿಗೆ ಬರುತ್ತವೆ ಮತ್ತು ಅದೃಷ್ಟ ತರುತ್ತೆ ಎಂಬ ನಂಬಿಕೆ ಇದೆ.

ಸಾಮಾನ್ಯವಾಗಿ, ಪಕ್ಷಿಗಳು(Dreams) ನಿಮ್ಮ ಗುರಿ, ಆಕಾಂಕ್ಷೆ ಮತ್ತು ಭರವಸೆಗಳನ್ನು ಸಂಕೇತಿಸುತ್ತವೆ ಹೇಗೆಂದು ಇಲ್ಲಿ ಸಂಪೂರ್ಣ ಮಾಹಿತಿ ತಿಳಿಯಿರಿ.

• ಕನಸಿನಲ್ಲಿ ಪಕ್ಷಿಗಳನ್ನು ನೋಡುವುದರ ಅರ್ಥವೆಂದರೆ ನೀವು ಮಾಡಿದ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ಬೈಬಲಿನ ಪ್ರಕಾರ, ಕನಸುಗಳಲ್ಲಿ ಪಕ್ಷಿಗಳು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ಅರ್ಥೈಸುತ್ತವೆ. ಹಮ್ಮಿಂಗ್ ಬರ್ಡ್ಸ್ ಬೈಬಲಿನಲ್ಲಿ ಒಂದು ಅದ್ಭುತವೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಹಕ್ಕಿಯನ್ನು ನೋಡೋದು ಸಕಾರಾತ್ಮಕವಾಗಿರುತ್ತೆ.

• ಕನಸಿನಲ್ಲಿ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದರೆ ಅಥವಾ ಹಾಡುತ್ತಿದ್ದರೆ ಅಥವಾ ಪಕ್ಷಿಗಳು ಮುಕ್ತವಾಗಿ ಹಾರುತ್ತಿದ್ದರೆ, ಅದು ಸಂತೋಷ, ಸಾಮರಸ್ಯ, ಸಮತೋಲನ ಮತ್ತು ಪ್ರೀತಿಯನ್ನು ಪ್ರತಿನಿಧಿಸುತ್ತೆ. ಇದರರ್ಥ ನೀವು ಆಧ್ಯಾತ್ಮಿಕ ಸ್ವಾತಂತ್ರ್ಯ (Sprtitual Independence) ಮತ್ತು ವಿಮೋಚನೆಯನ್ನು ಅನುಭವಿಸುತ್ತೀರಿ ಎಂಬುದಾಗಿದೆ.

• ಪಕ್ಷಿ ಮರಿಗಳು ತಮ್ಮ ಮೊಟ್ಟೆಗಳಿಂದ ಹೊರಬರೋದನ್ನು ನೀವು ನೋಡಿದರೆ, ಅದು ಯಶಸ್ಸಿನ ವಿಳಂಬವನ್ನು ಅರ್ಥೈಸುತ್ತೆ, ಆದರೆ ಪಕ್ಷಿಯ ಗೂಡನ್ನು ನೋಡುವುದು ಸ್ವಾತಂತ್ರ್ಯ, ಆಶ್ರಯ ಮತ್ತು ಸುರಕ್ಷತೆಯನ್ನು ಸೂಚಿಸುತ್ತೆ ಅಥವಾ ನೀವು ಹೊಸ ಪ್ರಯತ್ನ, ಹೊಸ ಅವಕಾಶಗಳು ಮತ್ತು ಸಕಾರಾತ್ಮಕ ಅದೃಷ್ಟವನ್ನು(Luck) ಪಡೆಯುತ್ತೀರಿ ಎಂದರ್ಥ.

• ನಿಮ್ಮ ಕನಸಿನಲ್ಲಿ ಪಕ್ಷಿಗಳ ಮೇಲೆ ದಾಳಿ ನಡೆಯುತ್ತಿದ್ದರೆ, ನೀವು ವಿಭಿನ್ನ ದಿಕ್ಕುಗಳಲ್ಲಿ ಎಳೆಯಲ್ಪಡುತ್ತಿದ್ದೀರಿ ಎಂದರ್ಥ, ಆಧ್ಯಾತ್ಮಿಕತೆಯೊಂದಿಗೆ ನೀವು ಸಂಘರ್ಷವನ್ನು ಅನುಭವಿಸುತ್ತೀರಿ ಎಂದರ್ಥ.

• ಪಕ್ಷಿಗಳು ನಿಮ್ಮ ಮನೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದರೆ, ನೀವು ಜೀವನದಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸುತ್ತಿಲ್ಲ ಅಥವಾ ಇತರ ಜನರು ನಿಮ್ಮ ದಾರಿಗೆ ಬರುತ್ತಿದ್ದಾರೆ ಎಂದು ಅರ್ಥ.

• ಸತ್ತ ಅಥವಾ ಸಾಯುತ್ತಿರುವ ಪಕ್ಷಿಗಳ(Dieing birds) ಕನಸು ನಿಮ್ಮ ಮನಸ್ಸಿನಲ್ಲಿ ಸಮಸ್ಯೆಗಳ ನಿರಂತರ ಹತಾಶೆ ಅಥವಾ ಆತಂಕವನ್ನು ಸಂಕೇತಿಸುತ್ತೆ.

• ನೀವು ಹಕ್ಕಿಯ ಮರಿ ಬಗ್ಗೆ ಕನಸು ಕಂಡಾಗ ಅದು ನೀವು ನಿಮ್ಮ ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ನಿಮ್ಮ ಜೀವನದಲ್ಲಿ ಯಾವುದರ ಬಗ್ಗೆಯೂ ತಪ್ಪುಗಳನ್ನು ಮಾಡುವ ಅಂಚಿನಲ್ಲಿದ್ದೀರಿ ಎಂದು ಸೂಚಿಸುತ್ತೆ. ಹಾಗಾಗಿ ನಿಮ್ಮ ಸ್ನೇಹಿತರು(Friends) ಮತ್ತು ಕುಟುಂಬದ ಸಲಹೆಯನ್ನು ತೆಗೆದುಕೊಳ್ಳಲು ನಿರ್ಧರಿಸಿ .

• ಇಸ್ಲಾಂ ಧರ್ಮದ ಪ್ರಕಾರ, ಹಮ್ಮಿಂಗ್ ಬರ್ಡ್ ನ ಕನಸು ಸಣ್ಣ ಆಲೋಚನೆ, ಸಾಕಷ್ಟು ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿರಬಹುದು ಎಂಬ ಅರ್ಥದೊಂದಿಗೆ ಬರುತ್ತೆ. ಈ ಕನಸು ನಿಮ್ಮ ಶಕ್ತಿಯ ಬಗ್ಗೆ ನೀವು ಅಜಾಗರೂಕರಾಗಿದ್ದೀರಿ ಅಥವಾ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿನ ಕಷ್ಟವನ್ನು ಪ್ರತಿನಿಧಿಸುತ್ತೆ.

• ಕನಸಿನಲ್ಲಿ ಪಕ್ಷಿಗಳನ್ನು ಹಿಡಿಯುವ ಕನಸು ಕಂಡಾಗ, ಅದು ದೀರ್ಘಕಾಲೀನ ಉದ್ದೇಶದ ಸಾಧನೆಯನ್ನು ತೋರಿಸುತ್ತೆ. ಈ ಕನಸು ನಿಮ್ಮ ಆಸೆಗಳು ಈಡೇರುವ ಸಂಕೇತವಾಗಿದೆ. ಮುಂಬರುವ ಸಮಯವು ನಿಮ್ಮನ್ನು ಮುಂದುವರಿಯುವಂತೆ ಮಾಡುತ್ತೆ ಎಂದು ಈ ಕನಸು ಹೇಳುತ್ತೆ. ಆದರೆ, ಈ ಕನಸು ನಿಮ್ಮ ಭೂತಕಾಲವನ್ನು ಮರೆಯಲು ನೀವು ಬಯಸೋದಿಲ್ಲ ಎಂದು ತೋರಿಸುತ್ತೆ.

ಈ ಮೇಲಿನಂತೆ ಕನಸಿನಲ್ಲಿ ಹಮ್ಮಿಂಗ್ ಬರ್ಡ್ ಕಂಡರೆ ನಿಮ್ಮ ಗುರಿ, ಆಕಾಂಕ್ಷೆ ಮತ್ತು ಭರವಸೆಗಳನ್ನು ಸಂಕೇತಿಸುತ್ತವೆ ನಾನಾ ಮೂಲಗಳ ಪ್ರಕಾರ ತಿಳಿಸಲಾಗಿದೆ.

Leave A Reply

Your email address will not be published.