Zomato Everyday : ಜೊಮ್ಯಾಟೋದಿಂದ ಚೀಪೆಸ್ಟ್ ರೇಟ್ ಫುಡ್ ಆರ್ಡರ್ ಮಾಡಿ; ಕೇವಲ ರೂ.89 ಗೆ!!!
Zomato everyday: ಭೋಜನ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಅದೇನು ಅಂತೀರಾ? ನಿಮಗೆ ಮನೆ ಶೈಲಿಯ ಸವಿಯ ಬಾಡೂಟ ಸೇವೆಯನ್ನು ಒದಗಿಸಲು ಜನಪ್ರಿಯ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ Zomato ಅಣಿಯಾಗಿದೆ.
ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆಗಿರುವ ಜೊಮ್ಯಾಟೊ ಬುಧವಾರ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಜೊಮ್ಯಾಟೊ ಎವ್ರಿಡೇ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಇದು ಮನೆಯಲ್ಲಿ ತಯಾರಿಸಿದ (homely-cooked) ಆಹಾರವನ್ನು ಒದಗಿಸುವ ಸೇವೆಯನ್ನು ಆರಂಭಿಸಿದೆ. ಇದರ ವಿಶೇಷತೆ ಏನಪ್ಪಾ ಅಂದರೆ ಬಜೆಟ್ ಫ್ರೆಂಡ್ಲಿ ದರದಲ್ಲಿ ಮನೆಯಲ್ಲಿ ತಯಾರಿಸಿದ ರುಚಿಕರ ಆಹಾರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಜೊಮ್ಯಾಟೊ(Zomato )ಸಂಸ್ಥೆ ಜೊಮ್ಯಾಟೊ ಎವ್ರೀಡೇ ಸೇವೆಯು ಎಂಬ ಹೊಸ ಸೇವೆಯ ಮೂಲಕ ಹೋಮ್-ಷೆಫ್‌ಗಳೊಂದಿಗೆ ಮನೆ ಊಟವನ್ನು ಅತ್ಯಂತ ಕಡಿಮೆ ಬೆಲೆಗೆ ತಲುಪಿಸಲು ಅಣಿಯಾಗಿದ್ದು, ಇದೀಗ ಗುರುಗ್ರಾಮ್‌ನಲ್ಲಿ ಆಯ್ದ ಪ್ರದೇಶಗಳಲ್ಲಿ ಮಾತ್ರ ಮೊದಲ ಬಾರಿಗೆ ಈ ಸೇವೆ ಪ್ರಾರಂಭವಾಗಲಿರುವ ಕುರಿತು ಕಂಪನಿಯ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರು ಬ್ಲಾಗ್-ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ, Zomato ಸಂಸ್ಥೆಯ ವಕ್ತಾರರು ಹತ್ತು ನಿಮಿಷಗಳ ಆಹಾರ ವಿತರಣಾ ಸೇವೆಯಾಗಿರುವ ‘Instant’ ಅನ್ನು ಮರುಬ್ರಾಂಡ್ ಮಾಡುವ ಕುರಿತು ಮಾಹಿತಿ ನೀಡಿದ್ದರು. ಮಾರುಕಟ್ಟೆ ಪರಿಸ್ಥಿತಿಗಳ ಅನುಸಾರ ಒಂದು ವರ್ಷದ ಹಿಂದೆ ಪ್ರಾರಂಭಿಸಲಾದ ಇನ್‌ಸ್ಟಂಟ್ ಸೇವೆ ಇನ್ನೂ ಕೊನೆಗೊಳ್ಳಲಿದೆ ಎನ್ನಲಾಗುತ್ತಿತ್ತು. Zomato ಸಂಸ್ಥೆಯ ವಕ್ತಾರರು ಇನ್‌ಸ್ಟಂಟ್ ಸೇವೆಯನ್ನು ನಿಲ್ಲಿಸದೆ, ಸ್ವಲ್ಪ ಬದಲಾವಣೆಗಳಾಗಬಹುದಾದ ಸಾಧ್ಯತೆ ಇದೆ ಎಂದು ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದರು.
ಇನ್ನೂ ಆರ್ಡರ್ ಮಾಡೋದು ಹೇಗೆ?
Zomato Everyday: ಫುಡ್ ಆರ್ಡರ್ ಮಾಡಲು ಜೊಮ್ಯಾಟೊ ಆಪ್ ಅನ್ನು ತೆರೆದುಕೊಂಡು, ಮೆನುವನ್ನು ನೋಡಿಕೊಂಡು Explore ಸೆಕ್ಷನ್‌ಗೆ ಹೋಗಬೇಕು. ಆ ಬಳಿಕ ಎವ್ರೀಡೇ ಟ್ಯಾಬ್ ಕೆಳಗಡೆ ಇರುವ ಆಹಾರ ಆಯ್ಕೆ ಮಾಡಿಕೊಳ್ಳಬಹುದು. ನಂತರ ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದು.
Zomato ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳ ಅನುಸಾರ, ಈ ಹೊಸ Zomato Everyday ಸೇವೆಯಿಂದ ಗ್ರಾಹಕರು ಸರಳ ಹಾಗೂ ಸುಲಭ ಪ್ರಕ್ರಿಯೆ ಅನುಸರಿಸಿದರೆ ನಿಮ್ಮ ಮನೆಯ ಊಟವನ್ನು ನೆನಪಿಸುವಂತಹ ಊಟವನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಮೆನುವಿನಲ್ಲಿ ಲಭ್ಯವಿರುವ ಊಟವನ್ನು ಕಸ್ಟಮೈಸ್ ಮಾಡಲು ಆಯ್ಕೆಗಳನ್ನು ನೀಡಲಾಗಿದೆ. Zomato Everyday ಯಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಕಚೇರಿಗೆ ಹೋಗುವವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಆಹಾರ ವಿತರಣಾ ವೇದಿಕೆಯಿಂದ ಸುಲಭವಾಗಿ ಆರ್ಡರ್ ಪಡೆಯಲು ಒಳ್ಳೆಯ ಅವಕಾಶ
ಉತ್ಕೃಷ್ಟ ಗುಣಮಟ್ಟದ ಪದಾರ್ಥಗಳನ್ನು ಬಳಸಿಕೊಂಡು ಸಿದ್ಧಪಡಿಸುವ ಈ ಆಹಾರವು ಶುಚಿ ರುಚಿಯಾಗಿರಲಿದೆ. ಹೀಗಾಗಿ, ಸರಳವಾಗಿ ಮೆನುವನ್ನು ನೋಡಿಕೊಂಡು ನೀವು ಆಹಾರವನ್ನು ಆರ್ಡರ್ ಮಾಡಿ, ಬಿಸಿ ಬಿಸಿಯಾದ, ರುಚಿಕರವಾದ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಪಡೆದುಕೊಳ್ಳಬಹುದು” ಎಂದು ಜೊಮ್ಯಾಟೊ ಬ್ಲಾಗ್‌ನ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ. ಈ ಸೇವೆಯ ಮೂಲಕ 89 ರೂಪಾಯಿಗೆ ಉತ್ತಮ ಗುಣಮಟ್ಟದ, ರುಚಿಕರ, ಮನೆಯಲ್ಲಿ ತಯಾರಿಸಿದಂತಹ ಆಹಾರವನ್ನು ಆರ್ಡರ್ ಮಾಡಬಹುದು.