Richest female cricketers : ವಿಶ್ವದ ಶ್ರೀಮಂತ ಮಹಿಳಾ ಕ್ರಿಕೆಟರ್ಸ್ ಯಾರು ಗೊತ್ತಾ?
richest female cricketers : ಮಹಿಳೆಯರು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗದೆ, ಎಲ್ಲಾ ಕ್ಷೇತ್ರಗಳನ್ನು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಕ್ರಿಕೆಟ್ ನಲ್ಲೂ ತಮ್ಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕ್ರಿಕೆಟ್ ಪ್ರಿಯರನನ್ನು ಹುಚ್ಚೆದ್ದು ಕುಣಿಸುವಂತಹ, ಕ್ರಿಕೆಟರ್ಸ್ ಗಳ ಬಗ್ಗೆ ಮಾಹಿತಿ ಇಲ್ಲಿದೆ. ನಿಮಗೆ ವಿಶ್ವದ ಶ್ರೀಮಂತ ಮಹಿಳಾ ಕ್ರಿಕೆಟರ್ಸ್(world’s richest female cricketers) ಯಾರು ಗೊತ್ತಾ? ಇಲ್ಲಿದೆ ನೋಡಿ ಟಾಪ್ 10 ಶ್ರೀಮಂತ ಮಹಿಳಾ ಕ್ರಿಕೆಟರ್ಸ್ಗಳ (richest female cricketers) ವಿವರ.
• ಎಲೀಸ್ ಪೆರಿ (Ellyse Perry) :
ಎಲೀಸ್ ಪೆರಿ ಆಸ್ಟ್ರೇಲಿಯಾದವರಾಗಿದ್ದು, ಇವರು ಮಹಿಳಾ ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಆಟಗಾರ್ತಿ (world’s richest female). ಎಲೀಸ್ ಅವರ ಆಸ್ತಿ ಎಷ್ಟಿದೆ ಗೊತ್ತಾ? ಒಟ್ಟು 115 ಕೋಟಿ ರೂ.ಗಳಷ್ಟಿದೆ. ಇವರು ಅಡಿಡಾಸ್, ಕಾಮನ್‌ವೆಲ್ತ್ ಬ್ಯಾಂಕ್ ನಂತರ ಹಲವು ಬ್ರಾಂಡ್‌ಗಳ ಒಡಂಬಡಿಕೆ ಹೊಂದಿದ್ದಾರೆ.
• ಮೆಗ್ ಲ್ಯಾನಿಂಗ್ (Meg Lanning):
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಮೆಡ್ ಲ್ಯಾನಿಂಗ್.
ಇವರು ಪೂರ್ಣ ಹೆಸರು ಮೇಘನ್ ಮೊಯಿರಾ ಲ್ಯಾನಿಂಗ್ ಎಂದಾಗಿದೆ. ಇವರು ಎರಡು ಮಹಿಳಾ ಟ್ವೆಂಟಿ20 ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ. ಆಸೀಸ್ ತಂಡವನ್ನು ಹಲವು ವಿಶ್ವಕಪ್ ಟೂರ್ನಿಗಳಲ್ಲಿ ಮುನ್ನಡೆಸಿದ್ದಾರೆ. ಇವರ ನಿವ್ವಳ ಆಸ್ತಿ ಮೌಲ್ಯ 74.5 ಕೋಟಿ ರೂ.ಗಳಷ್ಟಿದೆ. ಹಾಗೇ ಇವರು ಮಹಿಳಾ ಐಪಿಎಲ್‌ನಲ್ಲಿ ಡೆಲ್ಲಿ ತಂಡದಿಂದ 1.1 ಕೋಟಿ ರೂ. ಸ್ವೀಕರಿಸಿದ್ದಾರೆ.
• ಮಿಥಾಲಿ ರಾಜ್ (Mithali Raj):
ಇವರು ಭಾರತ ತಂಡದ ಮಾಜಿ ನಾಯಕಿ. ಮಿಥಾಲಿ ರಾಜ್ 6 ಬಾರಿ ವಿಶ್ವಕಪ್‌ನಲ್ಲಿ ಆಡಿದ ಪ್ರಪ್ರಥಮ ಮಹಿಳಾ ಕ್ರಿಕೆಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಿಥಾಲಿ ರಾಜ್ ಅವರನ್ನು ಭಾರತೀಯ ಮಹಿಳಾ ಕ್ರಿಕೆಟಿನ ತೆಂಡೂಲ್ಕರ್ ಎಂದೇ ಕರೆಯುತ್ತಾರೆ. ಸದ್ಯ ಇವರ ಒಟ್ಟು ನಿವ್ವಳ ಆಸ್ತಿ ಮೌಲ್ಯವು 37.5 ಕೋಟಿ ರೂಗಳಷ್ಟಿದೆ.
• ಸ್ಮೃತಿ ಮಂಧಾನಾ (smriti mandhana):
ಮಂಧಾನಾ ಏಕದಿನ ಆಟದಲ್ಲಿ ದ್ವಿಶತಕವನ್ನು ಸಾಧಿಸಿದ ಮೊದಲ ಭಾರತೀಯ ಮಹಿಳೆ. ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ 3.4 ಕೋಟಿ ರೂ.ಗಳ ದಾಖಲೆ ಬೆಲೆ ಪಡೆದಿದ್ದಾರೆ. ಇತ್ತೀಚೆಗೆ ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿ ಸೇರ್ಪಡೆಯಾಗಿದ್ದಾರೆ. ಸದ್ಯ ಮಂಧಾನಾ ಅವರ ನಿವ್ವಳ ಆಸ್ತಿ 32.7 ಕೋಟಿ ರೂ ಇದೆ.
• ಹರ್ಮನ್‌ಪ್ರೀತ್ ಕೌರ್ (Harmanpreet Kaur):
ಇವರು ನವೆಂಬರ್ 2018 ರಲ್ಲಿ, ಮಹಿಳಾ ಟ್ವೆಂಟಿ 20 ಇಂಟರ್ನ್ಯಾಷನಲ್ (WT20I) ಪಂದ್ಯದಲ್ಲಿ ಶತಕ ಗಳಿಸಿದ ಭಾರತದ ಮೊದಲ ಮಹಿಳೆಯಾಗಿದ್ದಾರೆ. ಟೀಮ್ ಇಂಡಿಯಾದ ಹಾಲಿ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ವಾರ್ಷಿಕ ವೇತನ 2 ಕೋಟಿ ರೂ.ಗಳಿಗೂ ಅಧಿಕವಿದ್ದು, ಹರ್ಮನ್ 24.8 ಕೋಟಿ ರೂ. ನಿವ್ವಳ ಆಸ್ತಿ ಹೊಂದಿದ್ದಾರೆ.
• ಸಾರಾ ಟೇಲರ್ (Sarah Taylor):
ಟೇಲರ್ 2006 ರಲ್ಲಿ ಭಾರತದ ವಿರುದ್ಧ ಒಂಬತ್ತು ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ತಮ್ಮ ಮೊದಲ ಕ್ಯಾಪ್ ಗಳಿಸಿದ ಮಹಿಳಾ ವೇಗದ ಕ್ರಿಕೆಟಿಗರಾಗಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್ ಸಾರಾ ಟೇಲರ್, ವಾರ್ಷಿಕ 50 ಲಕ್ಷ ರೂ. ವೇತನ ಹೊಂದಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 16 .3 ಕೋಟಿ ರೂ. ಆಗಿದೆ.
• ಹಾಲಿ ಫ್ರೀಲಿಂಗ್:
ಇವರು ಆಸ್ಟ್ರೇಲಿಯಾದ ಆಲ್‌ರೌಂಡರ್. 27 ವರ್ಷದ ಹಾಲಿ ಫ್ರೀಲಿಂಗ್, ಇದೀಗ ಆಸೀಸ್‌ನ ಕ್ರಿಕೆಟ್ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ನಿವ್ವಳ ಆಸ್ತಿ ಮೌಲ್ಯವು 12.5 ಕೋಟಿ ರೂ.ಗಳಷ್ಟಿದೆ.
• ಇಸಾ ಗುಹಾ (Isa Guha):
ಬಲಗೈ ವೇಗದ-ಮಧ್ಯಮ ಬೌಲರ್ ಇಸಾ. ಇವರು ಇಂಗ್ಲೆಂಡ್‌ಗಾಗಿ ಆಡುವ ಭಾರತೀಯ ಪರಂಪರೆಯ ಮೊದಲ ಮಹಿಳೆ. ಭಾರತೀಯ ಸಂಜಾತ ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ ಹಾಗೂ ಜನಪ್ರಿಯ ಕಾಮೆಂಟೇಟರ್ ಕೂಡ ಆಗಿರುವ ಇಸಾ ಗುಹಾ, 2009ರಲ್ಲಿ ವಿಶ್ವಕಪ್ ಗದ್ದ ಇಂಗ್ಲೆಂಡ್ ತಂಡದ ಪರ ಆಡಿದ್ದರು. ಇವರು ನಿವ್ವಳ ಆಸ್ತಿ 12.2 ಕೋಟಿ ರೂ. ಇದೆ.
• ಸನಾ ಮಿರ್ (Sana Mir):
ಇವರು ಪಾಕಿಸ್ತಾನಿ ಕ್ರಿಕೆಟ್ ವಿಮರ್ಶಕ ಮತ್ತು ಮಾಜಿ ಕ್ರಿಕೆಟರ್. ODIಗಳು ಮತ್ತು T20I ಗಳಲ್ಲಿ ಪಾಕಿಸ್ತಾನ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. 2018ರಲ್ಲಿ ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಅವರು ನಂ.1 ಬೌಲರ್ ಆಗಿದ್ದರು. ಸನಾ ಮಿರ್ ಒಟ್ಟು 10.7 ಕೋಟಿ ರೂ. ನಿವ್ವಳ ಆಸ್ತಿ ಹೊಂದಿದ್ದಾರೆ.
• ಡೇನ್ ವ್ಯಾನ್ ಕೆರ್ಕ್:
ಇವರು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕಿ. ಆಲ್ ರೌಂಡರ್ ಡೇನ್ ವ್ಯಾನ್ ನೀಕರ್ಸ್ ಅವರು ವಾರ್ಷಿಕ 46 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 6.5 ಕೋಟಿ ರೂ. ಅಷ್ಟಿದೆ.