Bank Account: ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ನಿಮಗೆ ಸಿಗುತ್ತೆ ಭರ್ಜರಿ 35 ಲಕ್ಷ ರೂಪಾಯಿ!
Bank Account : ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿಬಿಟ್ಟಿದೆ. ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ (Mobile)ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ನೀವು ಉಳಿತಾಯ(Savings) ಮಾಡಲು ಯಾವುದಾದರೂ ಒಂದು ಹೂಡಿಕಾ ವಿಧಾನ ಅನುಸರಿಸೋದು ಸಹಜ. ಒಂದು ವೇಳೆ ನೀವು ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಭರ್ಜರಿ ಸಿಹಿ ಸುದ್ದಿ ನಿಮಗಾಗಿ ಎದುರು ನೋಡುತ್ತಿದೆ. ಹಾಗಿದ್ರೆ, ನಿಮಗೆ ಉತ್ತಮ ಆಫರ್ ನೀಡುತ್ತಿರುವ ಬ್ಯಾಂಕ್ ಯಾವುದು ಅಂತೀರಾ?
Bank News : ಬ್ಯಾಂಕ್ ಗ್ರಾಹಕರಿಗೊಂದು ಬಂಪರ್ ಸಿಹಿ ಸುದ್ದಿ! ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಒಂದಾದ IDFC ಫಸ್ಟ್ ಬ್ಯಾಂಕ್ ನಲ್ಲಿ ನೀವು ಖಾತೆ ಹೊಂದಿದ್ದರೆ ಹೆಚ್ಚಿನ ಅನುಕೂಲಗಳು ನಿಮಗೆ ಲಭ್ಯವಾಗಲಿವೆ. ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರಿಗೆ ವಿಮಾ ಪ್ರಯೋಜನಗಳು ದೊರೆಯಲಿವೆ.ಈ ಬ್ಯಾಂಕ್ನಲ್ಲಿ ನೀವು ಖಾತೆ ಹೊಂದಿದ್ದರೆ ಉಚಿತವಾಗಿ 35 ಲಕ್ಷ ರೂಪಾಯಿ ಗಳಿಸುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ಹಾಗಿದ್ರೆ, ಈ ಬ್ಯಾಂಕ್ ನಲ್ಲಿ ಖಾತೆ ತೆರೆಯೋದು ಹೇಗೆ??
ಈ ಬ್ಯಾಂಕ್ನಲ್ಲಿ ನೀವು ಸರಳ ವಿಧಾನ ಅನುಸರಿಸಿ ಬ್ಯಾಂಕ್ ಖಾತೆಯನ್ನು(Bank Account) ತೆರೆಯಬಹುದಾಗಿದ್ದು,ಆನ್ಲೈನ್ನಲ್ಲಿ ಕಂಪನಿಯ ವೆಬ್ಸೈಟ್ಗೆ ಹೋಗಿ ಓಪನ್ ಅಕೌಂಟ್ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ, ಮೊಬೈಲ್ ಸಂಖ್ಯೆ, ಪ್ಯಾನ್ ಸಂಖ್ಯೆ, ಇ-ಮೇಲ್ ವಿಳಾಸ, (E-mail Address)ಆಧಾರ್ ಸಂಖ್ಯೆ ಮುಂತಾದ ವಿವರಗಳನ್ನು ನೀಡಬೇಕಾಗುತ್ತದೆ. ನಿಮ್ಮ ಆಯ್ಕೆಯ ಖಾತೆಯನ್ನು ಆರಿಸಿಕೊಂಡು ಕೆವೈಸಿ( KYC)ಮೂಲಕ ಖಾತೆ(Bank Account) ತೆರೆಯಬಹುದಾಗಿದೆ.
ಈ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರೆ ನೀವು ಕನಿಷ್ಠ 25 ಸಾವಿರ ರೂಪಾಯಿ ಮಾಸಿಕ ಬ್ಯಾಲೆನ್ಸ್ ಹೊಂದಿರಬೇಕಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ಹೊಂದಿಲ್ಲದೆ ಇದ್ದಲ್ಲಿ 50 ರೂಪಾಯಿಯಿಂದ 400 ರೂಪಾಯಿವರೆಗೆ ಬ್ಯಾಂಕ್ ಶುಲ್ಕ ವಿಧಿಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಮಾಸಿಕವಾಗಿ ಸರಾಸರಿ ಬ್ಯಾಲೆನ್ಸ್ ಇದ್ದರೆ ನಿಮ್ಮ ಖಾತೆಗೆ ಯಾವುದೇ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ. ಇನ್ನುಳಿದಂತೆ ಬಹುತೇಕ ಬ್ಯಾಂಕ್ ಸೇವೆಗಳು ಉಚಿತವಾಗಿ ಲಭ್ಯವಾಗುತ್ತದೆ
ಒಂದು ವೇಳೆ, ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ, ವೈಯಕ್ತಿಕ ಅಪಘಾತ ವಿಮೆಯ ಅಡಿಯಲ್ಲಿ ನೀವು 35 ಲಕ್ಷ ರೂಪಾಯಿ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಇದು ರಸ್ತೆ ಅಪಘಾತಗಳಿಗೆ ಅನ್ವಯವಾಗಲಿದ್ದು, ಅಪಘಾತದಲ್ಲಿ ಮೃತಪಟ್ಟ ಬ್ಯಾಂಕ್ ಗ್ರಾಹಕರ ಕುಟುಂಬಕ್ಕೆ 35 ಲಕ್ಷ ವಿಮಾ ಪ್ರಯೋಜನ ಲಭ್ಯವಾಗಲಿವೆ. ಇದಲ್ಲದೇ, ಬ್ಯಾಂಕ್ ಖಾತೆದಾರರು ವಿಮಾನ ಅಪಘಾತಕ್ಕೀಡಾದರೆ ವಿಮಾ ಪರಿಹಾರದ ವ್ಯಾಪ್ತಿ ಕೂಡ ಹೆಚ್ಚಲಿದೆ. ಆದರೆ, ಈ ಪ್ರಯೋಜನ ಪಡೆಯಲು ನೀವು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೂರೈಸಬೇಕು.
ನೀವು, IDFC ಫಸ್ಟ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದರೆ, ಪ್ರಸ್ತುತ ಖಾತೆಗಳ ಮೇಲೆ 6.75 ಪ್ರತಿಶತದವರೆಗೆ ಬಡ್ಡಿಯನ್ನು ಪಡೆಯಬಹುದು. ಬೇರೆ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ ಬಡ್ಡಿದರ ಕೊಂಚ ಹೆಚ್ಚು ಎಂದು ಪರಿಗಣಿಸಬಹುದು. ಹೀಗಾಗಿ, ನೀವು ಕೂಡ ಈ ಬ್ಯಾಂಕ್ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಪ್ರಯೋಜನ ನಿಮ್ಮದಾಗಿಸಿಕೊಳ್ಳಬಹುದು.