FD ಮೇಲಿನ ಬಡ್ಡಿದರ ಹೆಚ್ಚಿಸಿದೆ ಈ ಬ್ಯಾಂಕ್, ಗ್ರಾಹಕರಿಗೆ ಖುಷಿಯೋ ಖುಷಿ!!!
FD Interest Hike: ಸದ್ಯ ಆರ್‌ಬಿಐ(RBI) ರೆಪೊ ದರವನ್ನು ಹೆಚ್ಚಿಸಿದ ಕಾರಣ ಬ್ಯಾಂಕ್‌ಗಳು ಬಡ್ಡಿದರ ಮತ್ತು ಸಾಲದ ದರಗಳನ್ನು ಹೆಚ್ಚಿಸಿವೆ. ಕೆಲವು ಬ್ಯಾಂಕ್‌ಗಳು (bank)ಉಳಿತಾಯ(savings)ಖಾತೆಗಳ (account)ಮೇಲಿನ ಬಡ್ಡಿದರವನ್ನೂ ಹೆಚ್ಚಿಸಿವೆ. ಅದಲ್ಲದೆ ಹಲವಾರು ಬ್ಯಾಂಕ್ ಗಳು ಈಗಾಗಲೇ ಬ್ಯಾಂಕ್‌ಗಳು ಎಫ್‌ಡಿಗಳ ಮೇಲೆ ನೀಡುವ ಬಡ್ಡಿದರಗಳನ್ನು ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೇ ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ತನ್ನ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿತ್ತು. ಇದೀಗ ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ FDಗಳ ಮೇಲಿನ ಬಡ್ಡಿದರವನ್ನು (FD Interest Hike) ಹೆಚ್ಚಿಸಿದೆ.
ಸದ್ಯ ICICI ಬ್ಯಾಂಕ್ 4.75% ರಿಂದ 7.15% ವರೆಗಿನ ಬಡ್ಡಿಯನ್ನು ನೀಡುತ್ತಿದೆ. ಐಸಿಐಸಿಐ ಬ್ಯಾಂಕ್ ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ಬಡ್ಡಿಯನ್ನು ನೀಡುತ್ತಿದ್ದು , ಗ್ರಾಹಕರು ಈಗ ಈ ಹೆಚ್ಚಿದ ಬಡ್ಡಿದರದ ಲಾಭವನ್ನು ಪಡೆಯಬಹುದು.
ICICI ಬ್ಯಾಂಕ್ ಬಡ್ಡಿದರ ಹೆಚ್ಚಳ :
ICICI ಬ್ಯಾಂಕ್ ಈಗ ನೀಡುತ್ತಿರುವ ಬಡ್ಡಿ ದರ ಈ ಕೆಳಗಿನಂತಿದೆ. ಈ ಬಡ್ಡಿ ದರವು ಸಾಮಾನ್ಯ ಜನರಿಗೆ ಕನಿಷ್ಠ 2 ಕೋಟಿ ರೂ ಮತ್ತು ಗರಿಷ್ಠ 5 ಕೋಟಿಗಳ ಸಿಂಗಲ್ ಡೆಪಾಸಿಟ್ ಎಫ್‌ಡಿ ಮೇಲೆ ನೀಡುವ ದರವಾಗಿದೆ. ಈ ಬಡ್ಡಿ ದರಗಳು 23 ಫೆಬ್ರವರಿ 2023 ರಿಂದ ಅನ್ವಯಿಸುತ್ತವೆ.
ಹೊಸ ಬಡ್ಡಿದರಗಳು ಹೀಗಿವೆ :
• 7 ದಿನಗಳಿಂದ 14 ದಿನಗಳು – 4.75%
• 15 ದಿನಗಳಿಂದ 29 ದಿನಗಳು – 4.75%
• 30 ದಿನಗಳಿಂದ 45 ದಿನಗಳು – 5.50%
• 46 ದಿನಗಳಿಂದ 60 ದಿನಗಳು – 5.75%
• 61 ದಿನಗಳಿಂದ 90 ದಿನಗಳು – 6.00%
• 91 ದಿನಗಳಿಂದ 120 ದಿನಗಳು – 6.50 %
• 150 ದಿನಗಳಿಂದ 150 ದಿನಗಳು – 6.50%
• 151 ದಿನಗಳಿಂದ 184 ದಿನಗಳು – 6.50%
• 185 ದಿನಗಳಿಂದ 210 ದಿನಗಳು – 6.65%
• 211 ದಿನಗಳಿಂದ 270 ದಿನಗಳು – 6.65%
• 271 ದಿನಗಳಿಂದ 289 ದಿನಗಳು – 6.75%
• 290ದಿನಗಳಿಂದ ಒಂದು ವರ್ಷ-6.75%
• ಒಂದು ವರ್ಷದಿಂದ 389 ದಿನಗಳವರೆಗೆ – 7.15%
• 390 ದಿನಗಳಿಂದ < 15 ತಿಂಗಳುಗಳು – 7.15%
• 15 ತಿಂಗಳಿಂದ < 18 ತಿಂಗಳುಗಳು – 7.15%
• 18 ತಿಂಗಳುಗಳಿಂದ 2 ವರ್ಷಗಳು – 7.15%
• 2 ವರ್ಷಗಳು 1 ದಿನದಿಂದ 3 ವರ್ಷಗಳು – 7.00%
• 3 ವರ್ಷಗಳು 1 ದಿನದಿಂದ 5 ರವರೆಗೆ ವರ್ಷದವರೆಗೆ – 6.75%
• 5 ವರ್ಷಗಳು 1 ದಿನದಿಂದ 10 ವರ್ಷಗಳು – 6.75%.
ಈ ಮೇಲಿನಂತೆ ICICI ಬ್ಯಾಂಕ್ FDಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.