ಬಂಗಾರದ ಬೆಲೆ ಕಂಡ ವೀಳ್ಯದೆಲೆ ! ಗ್ರಾಹಕರ ಕೈ ಸುಡುತ್ತಿದೆ ಈ ಎಲೆ!!!
Betel Leaf: ವೀಳ್ಯದೆಲೆ (betel leaf)ಹಾಗೂ ಅಡಿಕೆಗೆ ಪೂಜೆ ಪುನಸ್ಕಾರಗಳಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಸಾಮಾನ್ಯವಾಗಿ ಊಟ ಆದ ಬಳಿಕ ವೀಳ್ಯದೆಲೆ (Betel)-ಅಡಿಕೆ (Arecanut) ತಿನ್ನುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಊಟ (Lunch)ಮಧ್ಯಾಹ್ನ ಊಟ ಆದ ಬಳಿಕ ಎಲ್ಲರೂ ಕುಳಿತುಕೊಂಡು ಅಡಿಕೆ ಮತ್ತು ಎಲೆಗೆ ಕೊಂಚ ಸುಣ್ಣ (Lime) ಬೆರೆಸಿ ಸೇವಿಸುವುದುಂಟು. ಇದೀಗ, ನವಾಬರ ಕಾಲದಿಂದ ಪ್ರಖ್ಯಾತಿ ಪಡೆದ ಸವಣೂರಿನ ವೀಳ್ಯದೆಲೆ ಬೆಲೆ ಕೇಳಿದರೆ ಅಚ್ಚರಿಯಾಗೋದು ಗ್ಯಾರಂಟಿ.
ಇಂದು ಪ್ರತಿ ವಸ್ತುಗಳ ಬೆಲೆ ಗಗಕ್ಕೇರುತ್ತಿದೆ. ಈ ನಡುವೆ ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿ ಹೋಗಿದ್ದು, ಸದ್ಯ ಸವಣೂರಿನ ವೀಳ್ಯದೆಲೆ ಬೆಲೆ ಏರಿಕೆ ಗಗನ ಕುಸುಮದಂತಾಗಿದೆ. ಬಾಯಿ ರುಚಿ ಹೆಚ್ಚಿಸುತ್ತಿದ್ದ ವೀಳ್ಯದೆಲೆ ಈಗ ತಲುಬಿನವರ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಔಷಧಿ ಗುಣವುಳ್ಳ ವೀಳ್ಯದೆಲೆ 70ರಿಂದ . 80 ರೂಪಾಯಿ ಇದ್ದ ಒಂದು ಕಟ್ಟು (100) ವೀಳ್ಯದೆಲೆ ಬೆಲೆ ಈಗ 180ರಿಂದ 200 ಗಳಿಗೆ ತಲುಪಿದ ಹಿನ್ನೆಲೆ ಗ್ರಾಹಕರು ವೀಳ್ಯದೆಲೆ ಬೆಲೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಎಲೆಯೊಂದಿಗೆ ತಂಬಾಕು, ಅಡಕೆ ಹಾಕಿ ದಿನವಿಡಿ ಮೆಲ್ಲುವ ಮಂದಿಗೆ ಬೆಲೆ ಏರಿಕೆ ಕೈ ಸುಡುವಂತೆ ಮಾಡಿದೆ ಎಂದರು ತಪ್ಪಾಗದು.
ಕಡಿಮೆ ಖಾರ ಇರುವ ಸವಣೂರು ವೀಳ್ಯದೆಲೆಗೆ ಎಲ್ಲೆಡೆ ಬೇಡಿಕೆ ಬಂದಿರುವುದರಿಂದ ವಿವಿಧೆಡೆ ಪೂರೈಕೆಯಾಗುತ್ತದೆ. ಸಾಮಾನ್ಯವಾಗಿ ಒಂದು ಕಟ್ಟು (100 ಎಲೆ) ವೀಳ್ಯದೆಲೆಗೆ ಮಾರುಕಟ್ಟೆಯಲ್ಲಿ 60ರಿಂದ . 70ಗೆ ಮಾರಾಟವಾಗುತ್ತದೆ. ಬೇಸಿಗೆಯಲ್ಲಿ ಪೂರೈಕೆಗಿಂತ ಹೆಚ್ಚು ವೀಳ್ಯದೆಲೆಗೆ ಬೇಡಿಕೆ ಇರುವ ಹಿನ್ನೆಲೆ ವೀಳ್ಯದೆಲೆ ದರ ಹೆಚ್ಚಳವಾಗುತ್ತದೆ. ಬೇಸಿಗೆ ಸೀಸನ್ನಲ್ಲಿ ಕೂಡ ಗರಿಷ್ಠ ಎಂದರೂ . 70ರಿಂದ . 80ರೊಳಗೆ ಒಂದು ಕಟ್ಟು ಎಲೆ ಲಭ್ಯವಾಗುತ್ತಿತ್ತು. ಆದರೆ, ಕಳೆದ 15 ದಿನಗಳಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ವೀಳ್ಯೆದೆಲೆಯ ಬೆಲೆಯು ಬರೋಬ್ಬರಿ ಮೂರುಪಟ್ಟು ಹೆಚ್ಚಳ ಕಂಡಿದೆ ಎನ್ನಲಾಗಿದೆ.
ವೀಳ್ಯೆದೆಲೆ (Betel Leaf)ತೋಟ ಅರೆಮಲೆನಾಡು ಪ್ರದೇಶವಾದ ಜಿಲ್ಲೆಯ ಸವಣೂರು ತಾಲೂಕು, ಹಾವೇರಿ ತಾಲೂಕಿನ ಗುತ್ತಲ, ನೆಗಳೂರು, ಹಾವನೂರ, ಕನವಳ್ಳಿ ಗ್ರಾಮ ಹಾಗೂ ಹಾನಗಲ್ಲ ಹಾಗೂ ಶಿಗ್ಗಾಂವಿ ತಾಲೂಕಿನ ವಿವಿಧ ಕಡೆಗಳಲ್ಲಿ ವಿಸ್ತರಣೆ ಕಂಡಿದೆ. ಇದಲ್ಲದೆ, ಕಳೆದ ವರ್ಷ ಸುರಿದ ಭಾರಿ ಮಳೆಗೆ ಎಲೆಬಳ್ಳಿ ತೋಟಗಳು ಸಂಪೂರ್ಣವಾಗಿ ನಾಶವಾಗಿದೆ. ಮತ್ತೆ ಕೆಲವೆಡೆ ಎಲೆಬಳ್ಳಿ ಕೊಳೆತು ಹೋಗಿದ್ದ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ವೀಳ್ಯೆದೆಲೆ ಮಾರುಕಟ್ಟೆಗೆ ಬರದ ಹಿನ್ನೆಲೆ ವೀಳ್ಯದೆಲೆ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ ಎನ್ನಲಾಗಿದೆ.