ಕರ್ನಾಟಕ ಸರಕಾರಿ ಹುದ್ದೆಗಳ ಪರೀಕ್ಷಾ ಪಟ್ಟಿ, ಇವೆಲ್ಲ ಪಾಸ್ ಮಾಡೋದು ಅತ್ಯಂತ ಸುಲಭ!
Government Jobs: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆಂದ ಮಾತ್ರಕ್ಕೆ ಉದ್ಯೋಗದ (employment) ವಿಷಯದಲ್ಲಿ ಅನೇಕ ಅವಕಾಶದ ಬಾಗಿಲುಗಳು ತೆರೆದಿದ್ದು ಇವುಗಳ ಕುರಿತಂತೆ ಮಾಹಿತಿ ಎಷ್ಟೋ ಮಂದಿಗೆ ತಿಳಿದಿಲ್ಲ.
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ (Government Jobs)ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರಕಾರಿ ನೌಕರಿ ಗಳಿಸಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವವರಿಗೆ ಬಹುಮುಖ್ಯ ಮಾಹಿತಿ ಇಲ್ಲಿದೆ. ಯಾವುದೇ ಹುದ್ದೆಗೆ ಅರ್ಹತೆ ಪಡೆಯಬೇಕೆಂದು ಕೊಂಡರು ಕೂಡ ಅದಕ್ಕೆ ಸಂಬಂಧಿಸಿದ ಪೂರ್ವ ತಯಾರಿ ನಡೆಸೋದು ಅವಶ್ಯಕ. ಹಾಗಿದ್ರೆ, ಸರಳ ಕ್ರಮ ಅನುಸರಿಸಿ ಉತ್ತಮ ಹುದ್ದೆಗಳನ್ನು ಬಯಸುವವರು ಈ ಮಾಹಿತಿ ಅರಿತುಕೊಂಡರೆ ಒಳ್ಳೆಯದು. ಹಾಗಿದ್ರೆ, ಸುಲಭವಾಗಿ ಪೂರ್ವ ತಯಾರಿ ನಡೆಸಿ ಪಡೆಯಬಹುದಾದ ಹುದ್ದೆಗಳು ಯಾವುವು?? ಅದಕ್ಕೆ ಏನೆಲ್ಲಾ ತಯಾರಿ ಮಾಡಬೇಕಾಗುತ್ತದೆ ಎಂಬ ಮಾಹಿತಿ ನಿಮಗಾಗಿ.
ಎಸ್‌ಐ ಪರೀಕ್ಷೆ
ಈ ಹುದ್ದೆಗೆ ಅರ್ಹತೆ ಪಡೆಯಲು ಪದವಿ ಮುಗಿಸಿರಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗಮನಿಸಬೇಕಾದ ಸಂಗತಿ ಎಂದರೆ, ಇಟಿ, ಪಿಎಸ್‌ಟಿ ಪರೀಕ್ಷೆಯ ಜೊತೆಗೆ ಲಿಖಿತ ಪರೀಕ್ಷೆಗಳು ಇರುತ್ತವೆ. 200 ಅಂಕಗಳಿಗೆ ಎರಡು ಲಿಖಿತರೂಪದ ಪರೀಕ್ಷೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆ-1: 50 ಅಂಕಗಳಿಗೆ ಪರೀಕ್ಷೆ ನಡೆದರೆ ಪ್ರಶ್ನೆ ಪತ್ರಿಕೆ-2: 150 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಹೀಗಾಗಿ, ಆಸಕ್ತ ಅಭ್ಯರ್ಥಿಗಳು ಪೂರ್ವ ತಯಾರಿ ನಡೆಸಿ ಪರೀಕ್ಷೆ ಎದುರಿಸಿದರೆ ನಿಮ್ಮ ಕನಸಿನ ಹುದ್ದೆಯ ಕನಸು ನನಸು ಆಗುವುದರಲ್ಲಿ ಸಂಶಯವಿಲ್ಲ.
ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ( SDA Competitive Exam)
ಉದ್ಯೋಗಕಾಂಕ್ಷಿಗಳಿಗೆ ಅನೇಕ ಉದ್ಯೋಗ ಅವಕಾಶಗಳು(employment Opportunities) ತೆರೆದಿದ್ದು, ಇವುಗಳ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿಂದ ಎಷ್ಟೋ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿ ಉಳಿದುಕೊಂಡಿದ್ದಾರೆ. ಎಷ್ಟೋ ಬಾರಿ ನಮ್ಮ ಆಸಕ್ತ ವಿಷಯ ಬೇರೆಯಾಗಿದ್ದು, ನಮಗೆ ದೊರೆಯುವ ನೌಕರಿ ವಿಭಿನ್ನವಾಗಿರುವ ಸಾಧ್ಯತೆ ಕೂಡ ಇದೆ. SDA,FDA ಹುದ್ದೆಗಳಿಗೆ ಸಂಬಂಧಿಸಿದಂತೆ ಅನೇಕ ಖಾಲಿ ಹುದ್ದೆಗಳು ಇದ್ದು, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಡಿಗ್ರಿ ಪದವಿ ಪಡೆದಿರಬೇಕು.
ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಅನುಸಾರ ಎರಡು ಮುಖ್ಯ ಪರೀಕ್ಷೆ ನಡೆಯಲಿದೆ.ಒಂದು ಪತ್ರಿಕೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು(General Knowledge Questions) ಒಳಗೊಂಡಿರುತ್ತದೆ. ಈ ಪರೀಕ್ಷೆಯಲ್ಲಿ ಮೊದಲ ಪತ್ರಿಕೆ 200 ಅಂಕಗಳಿಗೆ ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಮತ್ತೊಂದು ಪ್ರಶ್ನೆ ಪತ್ರಿಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿದಂತೆ 200 ಅಂಕಗಳಿಗೆ 100 ಪ್ರಶ್ನೆಗಳನ್ನು ಒಳಗೊಂಡ ಪರೀಕ್ಷೆ ನಡೆಯಲಿದೆ. ಇಂದಿನ ಯುಗದಲ್ಲಿ ಅನೇಕ ತರಬೇತಿ ಕೇಂದ್ರಗಳು ಈ ಹುದ್ದೆಗಳಿಗೆ ತರಬೇತಿ ನೀಡುತ್ತವೆ. ಅಷ್ಟೆ ಅಲ್ಲದೇ ಮಾರುಕಟ್ಟೆಯಲ್ಲಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ಲಭ್ಯವಿದ್ದು, ಇವುಗಳ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬಹುದು.
ಕಾನ್ಸ್‌ಟೇಬಲ್ ಪರೀಕ್ಷೆ
ಹೆಚ್ಚಿನವರಿಗೆ ಪೋಲಿಸ್ ರಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂಬ ಅಭಿಲಾಷೆ ಇರುವುದು ಸಹಜ. ನೀವು ಕೂಡ ಈ ಹುದ್ದೆಗೆ ಆಯ್ಕೆಯಾಗಬೇಕು ಎಂದಾದರೆ, ಲಿಖಿತ ಪರೀಕ್ಷೆಗಳಿಗೆ ತಯಾರಿ ನಡೆಸಿ ತೇರ್ಗಡೆ ಹೊಂದಬಹುದು. ಇಂದಿನ ಯುಗದಲ್ಲಿ ಎಲ್ಲ ಕ್ಷೇತ್ರದಲ್ಲಿ ಹುದ್ದೆಗಳಿಗೆ ಪೈಪೋಟಿ ಇರುವ ಹಿನ್ನೆಲೆ ನಿಮ್ಮ ಪೂರ್ವ ತಯಾರಿ ಹೇಗಿದೆ ಎಂಬುದು ಕೂಡ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಪಿಯುಸಿ ಕಲಾ ವಿಭಾಗದಲ್ಲಿ ಓದಿದ್ದರೆ ಕೊಂಚ ಮಟ್ಟಿಗೆ ನಿಮಗೆ ಪರೀಕ್ಷೆಗಳು ಸರಳವೆನಿಸಬಹುದು. ಈ ಹುದ್ದೆಗೆ 100 ಅಂಕಗಳಿಗೆ ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೆಲವೊಮ್ಮೆ ಪರೀಕ್ಷೆ ಸುಲಭ ಎಂದೆನಿಸಿದರೂ ಕೂಡ ನೆಗಟಿವ್ ಅಂಕ (Negative Mark’s) ಇರುವ ಹಿನ್ನೆಲೆ ಉತ್ತರ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.ಮೇಲೆ ತಿಳಿಸಿದ ಹುದ್ದೆಗಳಿಗೆ ಯುದ್ದ ಕಾಲೇ ಶಸ್ತ್ರಾಭ್ಯಾಸ ಅನ್ನೋ ಪಾಲಿಸಿ ಅನುಸರಿಸದೆ ಮೊದಲೇ ಪೂರ್ವ ತಯಾರಿ ನಡೆಸಿ ಹೆಚ್ಚಿನ ಅಂಕ ಗಳಿಸಿ ನಿಮ್ಮ ಕನಸಿನ ಹುದ್ದೆಯನ್ನು ಅಲಂಕರಿಸಿ.