ಈ ಕೆಲಸಕ್ಕೆ ದಿನ ಸಂಭಾವನೆಯೇ ರೂ.36,000; ಆದರೆ ಈ ಕೆಲಸ ಮಾಡಲು ಜನ ಒಪ್ಪುತ್ತಿಲ್ಲ!
coast of Aberdeen: ದೇಶದಲ್ಲಿ ಅದೆಷ್ಟೋ ಜನ ನಿರುದ್ಯೋಗಿಗಳಿದ್ದಾರೆ. ಕೆಲಸವಿಲ್ಲದೆ ಅಲೆದಾಡುತ್ತಿದ್ದಾರೆ. ಹಲವು ಸಂಸ್ಥೆಗಳು ಹುದ್ದೆಗೆ (job) ಅರ್ಜಿ ಆಹ್ವಾನಿಸಿದರೂ ಕೆಲವು ಜನರಿಗೆ ತಿಳಿದಿರೋದಿಲ್ಲ. ವಿಪರ್ಯಾಸವೋ ಏನೋ ತಿಳಿಯದು, ಇಲ್ಲೊಂದು ಸಂಸ್ಥೆ ದಿನಕ್ಕೆ 36 ಸಾವಿರ ರೂಪಾಯಿ ಸಂಬಳದ ಆಫರ್ ನೀಡಿದರೂ, ಆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವರೇ ಇಲ್ಲವಾಗಿದ್ದಾರೆ.
ಹೌದು, ಸ್ಕಾಟ್‌ಲೆಂಡ್‌ನ ಸಂಸ್ಥೆಯೊಂದು ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿತ್ತು. ಆದರೆ ಈ ಹುದ್ದೆಗೆ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಕೈತುಂಬಾ ಸಂಬಳ ಸಿಗುತ್ತದೆ. ಆದರೂ ಯಾಕೆ ಯಾರೂ ಅರ್ಜಿ ಸಲ್ಲಿಸಿಲ್ಲ? ಅಚ್ಚರಿ ಮೂಡಿಸುತ್ತದೆ ಅಲ್ವಾ? ಅಷ್ಟಕ್ಕೂ ಹುದ್ದೆ ಯಾವುದು ಗೊತ್ತಾ?
ಸ್ಕಾಟ್‌ಲೆಂಡ್‌ನ ಸಂಸ್ಥೆ ಅರ್ಜಿ ಆಹ್ವಾನಿಸಿರುವ ಹುದ್ದೆಯ ಹೆಸರು ಆಪ್‌ಶೋರ್ ರಿಗ್ಗರ್ ಎಂದಾಗಿದೆ. ಸ್ಕಾಟ್ಲೆಂಡ್‌ನ ( Scotland) ಅಬರ್ಡೀನ್ ಕರಾವಳಿಯ (coast of Aberdeen) ಉತ್ತರ ಸಮುದ್ರದಲ್ಲಿ ನೆಲೆಗೊಂಡಿರುವ ಕಡಲಾಚೆಯ ರಿಗ್ಗರ್ ಕೆಲಸದ ಹುದ್ದೆಗಾಗಿ ಜಾಹೀರಾತು ನೀಡಲಾಗಿದ್ದು, ಕಡಲಾಚೆಯ ರಿಗ್ ಎಂದರೆ, ಅದು ನೀರಿನಲ್ಲಿ ಅಥವಾ ಬಾವಿಗಳನ್ನು ಕೊರೆಯಲು, ತೈಲ ಮತ್ತು ಅನಿಲವನ್ನು ಹೊರತೆಗೆಯಲು ಹಾಗೂ ಸಂಸ್ಕರಿಸಲು ಅದನ್ನು ಭೂ ಪ್ರದೇಶಕ್ಕೆ ಸಾಗಿಸುವವರೆಗೆ ಸಂಗ್ರಹಿಸಲು ಬಳಸುವ ಒಂದು ದೊಡ್ಡ ರಚನೆ. ಇದರಲ್ಲಿ ಕೆಲಸ ಮಾಡಲು ಸಂಸ್ಥೆ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗೆ ಆಯ್ಕೆ ಆದವರನ್ನು ಒಮ್ಮೆಲೆ ಒಂದರಿಂದ ಆರು ತಿಂಗಳ ಅವಧಿಯವರೆಗೆ ಸಮುದ್ರದಲ್ಲಿರುವ ರಿಗ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು. ಈ ಉದ್ಯೋಗಕ್ಕೆ ದಿನಕ್ಕೆ ರೂ 36,000 ವೇತನ ನೀಡಲಾಗುತ್ತದೆ ಎಂದು ನೇಮಕಾತಿ ಸಂಸ್ಥೆ ಎಂಡಿಇ ಕನ್ಸಲ್ಟೆಂಟ್ಸ್ ಹೇಳಿದೆ.
ಈ ಉದ್ಯೋಗ ಮಾಡಲು ಬಯಸುವ ವ್ಯಕ್ತಿ, 2 ವರ್ಷಗಳ ಕಾಲ ಅಲ್ಲಿಯೇ ಇದ್ದು, 6 ತಿಂಗಳ 2 ಶಿಫ್ಟ್‌ಗಳನ್ನು ಪೂರ್ಣಗೊಳಿಸಬೇಕು. ನಂತರ ಕೆಲಸಗಾರನ ಸಂಬಳ £95,420 ಅಂದ್ರೆ, ಸುಮಾರು 1 ಕೋಟಿ ರೂ. ಆಗುತ್ತದೆ. ಅಲ್ಲದೇ ಸಂಸ್ಥೆ ರಜಾ ದಿನಕ್ಕೂ 3,877 ರೂಪಾಯಿ ನೀಡುತ್ತದೆ. ಕೆಲಸಗಾರ ಅನಾರೋಗ್ಯಕ್ಕೆ ತುತ್ತಾದರೆ, ಅದಕ್ಕೂ ಆರೋಗ್ಯ ರಕ್ಷಣಾ ಸೌಲಭ್ಯವಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಹುದ್ದೆಗೆ ವಿದ್ಯಾರ್ಹತೆ ಬೇಕಿದ್ದು, BOSIET(Basic Offshore Safety Induction and Emergency Training), ಮುಂದು ಕಡಲಾಚೆಯ ತುರ್ತು ತರಬೇತಿ ( FOET), ಸಂಕುಚಿತ ವಾಯು ತುರ್ತು ಉಸಿರಾಟದ ವ್ಯವಸ್ಥೆ( CA-EBS) ಹಾಗೂ ವೈದ್ಯಕೀಯ ತರಬೇತಿ ಸೇರಿದಂತೆ ತಾಂತ್ರಿಕ ಮತ್ತು ಸುರಕ್ಷತಾ ತರಬೇತಿಯನ್ನು ಪಡೆದಿರಬೇಕು. ಆದರೆ, 24 ದಿನಗಳ ಹಿಂದೆಯೇ ಅರ್ಜಿ ಸಲ್ಲಿಸುವ ದಿನಾಂಕ ಮೀರಿದೆ. ಆದರೂ ಒಂದು ಅವಕಾಶವಿದೆ, ಇದರಲ್ಲಿ ಐದು ಹುದ್ದೆಗಳು ಇನ್ನು ಖಾಲಿ ಉಳಿದಿವೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಆನ್ಲೈನ್ ಫ್ರಾಡ್ ಹೆಚ್ಚಾಗಿದೆ. ಅದರಲ್ಲೂ ಉದ್ಯೋಗದ ವಿಚಾರದಲ್ಲಿ ಹೆಚ್ಚೇ ಇದೆ. ಜಾಹಿರಾತು ಮೂಲಕ ವಂಚನೆ ಮಾಡುವ ಸಾಕಷ್ಟು ಜಾಲಗಳು ಇವೆ. ಇದೀಗ ಮಂಗಳೂರಿನ ಯುವಕನೊಬ್ಬ ಅಂತಹದೇ ಜಾಲಕ್ಕೆ ಸಿಲುಕಿ, ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಬಹುಶಃ ಇದು ಹುಸಿ ಜಾಹಿರಾತು ಎನಿಸಿರಬೇಕು ಅಥವಾ ಉದ್ಯೋಗ ಬೇಡವೆನಿಸಿತೋ ಏನೋ. ಒಟ್ಟಾರೆ ಕೈತುಂಬಾ ಸಂಬಳ ಬರುವ ಈ ಉದ್ಯೋಗಕ್ಕೆ ಯಾರೂ ಅರ್ಜಿ ಸಲ್ಲಿಸಿಲ್ಲ.