5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ ಪಠ್ಯಕ್ರಮ ಮಾಹಿತಿ ಪ್ರಕಟ

5th and 8th Class Public Exam : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2022-23ನೇ ಸಾಲಿನ 5 ಮತ್ತು 8ನೇ ತರಗತಿ ಮೌಲ್ಯಂಕನ ಪರೀಕ್ಷೆಗೆ (5th and 8th Class Public Exam) ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಯಾವ ಪಠ್ಯದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕಲಿಕಾ ಚೇತರಿಕೆಯ ಕಲಿಕಾ ಫಲಗಳು ಮತ್ತು ಪಠ್ಯಪುಸ್ತಕದ ಘಟಕಗಳ ಮಾಹಿತಿಯನ್ನು ನೀಡಿದೆ.

5 ಮತ್ತು 8ನೇ ತರಗತಿ ಪಠ್ಯಪುಸ್ತಕ ಘಟಕಗಳ ಮಾಹಿತಿ ಇಲ್ಲಿ ನೀಡಲಾಗಿದೆ.

5ನೇ ತರಗತಿ ಪಠ್ಯಪುಸ್ತಕ ಘಟಕಗಳು :

ಗಣಿತ ವಿಷಯ –
ಗುಣಕಾರ, ಭಾಗಾಕಾರ, ಮಾಸಿಕ ಗಣಿತ, ದಶಮಾಂಶ ಭಿನ್ನರಾಶಿಗಳು, ಹಣ, ತೂಕ ಮತ್ತು ಗಾತ್ರ, ಕಾಲ, ಸಮಮಿತಿ ಆಕೃತಿಗಳು, ಮೂರು ಆಯಾಮದ ಆಕೃತಿಗಳು, ವಿನ್ಯಾಸಗಳು, ಭಿನ್ನರಾಶಿಗಳು, ಕೋನಗಳು, ಉದ್ದ ಮತ್ತು ಅಂಕಿ ಅಂಶಗಳು ಒಳಗೊಂಡಿವೆ.

ಪರಿಸರ ಅಧ್ಯಯನ –
ನೈಸರ್ಗಿಕ ಸಂಪನ್ಮೂಲಗಳು, ಕೃಷಿ, ಆಹಾರ-ಜೀವದ ಜೀವಾಳ, ಜನವಸತಿಗಳು, ವಸ್ತು ಸ್ವರೂಪ, ಧಾತು, ಸಂಯುಕ್ತ ಮತ್ತು ಮಿಶ್ರಣಗಳು, ವಿಸ್ಮಯ ಶಕ್ತಿ, ಬಾನಂಗಳ, ನಮ್ಮ ಭಾರತ-ಪ್ರಾಕೃತಿಕ ವೈವಿಧ್ಯ, ನಮ್ಮ ಭಾರತ-ರಾಜಕೀಯ ಮತ್ತು ಸಾಂಸ್ಕೃತಿಕ.

8ನೇ ತರಗತಿ ಪಠ್ಯಪುಸ್ತಕ ಘಟಕಗಳು :

ಸಮಾಜ ವಿಜ್ಞಾನ –
• ಇತಿಹಾಸ
ಮೌರ್ಯರು ಮತ್ತು ಕುಶಾನರು, ಗುಪ್ತರು ಮತ್ತು ವರ್ಧನರುಲ ದಕ್ಷಿಣ ಭಾರತದ ರಾಜವಂಶಗಳು-ಶಾತವಾಹನರು,ಕದಂಬರು, ಗಂಗರು, ಬಾದಾಮಿಯ ಚಾಲುಕ್ಯರು, ಮಾನ್ಯಖೇಟದ, ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು, ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು.

• ರಾಜ್ಯ ಶಾಸ್ತ್ರ
ಸ್ಥಳೀಯ ಸ್ವಯಂ ಸರ್ಕಾರಗಳು

• ಭೂಗೋಳ ಶಾಸ್ತ್ರ
ಜಲಗೋಳ
ಜೀವಗೋಳ

ವಿಜ್ಞಾನ –
ದಹನ ಮತ್ತು ಜ್ವಾಲ, ಜೀವಕೋಶ-ರಚನೆ ಮತ್ತು ಕಾರ್ಯಗಳು, ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ, ಹದಿಹರಯಕ್ಕೆ ಪ್ರವೇಶ, ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು, ಕೆಲವು ನೈಸರ್ಗಿಕ ವಿದ್ಯಮಾನಗಳು, ಬೆಳಕು, ನಕ್ಷತ್ರಗಳು ಮತ್ತು ಸೌರಮಂಡಲ ಹಾಗೂ
ವಾಯುಮಾಲಿನ್ಯ ಮತ್ತು ಜಲಮಾಲಿನ್ಯ.

ಗಣಿತ –
ಘನಗಳು ಮತ್ತು ಘನಮೂಲಗಳು, ಘಾತಾಂಕಗಳು ಮತ್ತು ಘಾತಸೂಚಿಗಳು, ದತ್ತಾಂಶಗಳ ನಿರ್ವಹಣೆ, ನೇರ ಮತ್ತು ವಿಲೋಮ ಅನುಪಾತಗಳು, ನಕ್ಷೆಗಳ ಪರಿಚಯ, ಅಪವರ್ತಿಸುವಿಕೆ, ಘನಾಕೃತಿಗಳ ದೃಗ್ಗೋಚರನ, ಪರಿಮಾಣಗಳ ಹೋಲಿಕೆ ಮತ್ತು ಕ್ಷೇತ್ರಗಣಿತ.

5 ಮತ್ತು 8ನೇ ತರಗತಿ ಮೌಲ್ಯಂಕನ ಪರೀಕ್ಷೆಯ ಕಲಿಕಾ ಚೇತರಿಕೆಯ ಕಲಿಕಾ ಫಲಗಳು ಮತ್ತು ಪಠ್ಯಪುಸ್ತಕದ ಘಟಕಗಳ ಹೆಚ್ಚಿನ, ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆಯ ಪಠ್ಯಕ್ರಮ ಮಾಹಿತಿ

Leave A Reply

Your email address will not be published.