HAL ನಲ್ಲಿ ಉದ್ಯೋಗವಕಾಶ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

HAL Recruitment 2023 : ಬೆಂಗಳೂರಿನ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ​(Hindustan Aeronautics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಆಫ್​​ಲೈನ್​ (Offline)​ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಹುದ್ದೆಯ (HAL Recruitment 2023) ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಯ ವಿವರ :
ವಿಸಿಟಿಂಗ್ ಕನ್ಸಲ್ಟೆಂಟ್ (ಆರ್ಥೋಸ್ಕೋಪಿ)-1
ವಿಸಿಟಿಂಗ್ ಕನ್ಸಲ್ಟೆಂಟ್ (ಮೆಡಿಕಲ್ ಆನ್ಕಾಲಜಿ)-1

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 08/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/2/ 2023

ವಿದ್ಯಾರ್ಹತೆ : ಎಂಬಿಬಿಎಸ್/ ಎಂಎಸ್/ ಡಿಎನ್​ಬಿ, ಡಿಎಂ
ವಯೋಮಿತಿ: ಗರಿಷ್ಠ 65 ವರ್ಷ
ವೇತನ: ಪ್ರತಿ ಭೇಟಿಗೆ 5,000

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಚೀಫ್​ ಮ್ಯಾನೇಜರ್ (HR)
ಇಂಡಸ್ಟ್ರಿಯಲ್ ಹೆಲ್ತ್​​ ಸೆಂಟರ್
ಹಿಂದೂಸ್ತಾನ ಏರೋನಾಟಿಕ್ಸ್​ ಲಿಮಿಟೆಡ್ (ಬೆಂಗಳೂರು ಕಾಂಪ್ಲೆಕ್ಸ್​)
ಸುರಂಜನ್​ದಾಸ್ ರಸ್ತೆ (ಹಳೇ ವಿಮಾನ ನಿಲ್ದಾಣ)
ಬೆಂಗಳೂರು-560017

ಅಭ್ಯರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲ್ಲಿನ ವೆಬ್ ಸೈಟ್ hal-india.co.in ಗೆ ಭೇಟಿ ನೀಡಿ, ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

Leave A Reply

Your email address will not be published.