EPFO : ಇಪಿಎಫ್ಓ ನಿಂದ ಹೊಸ ಮಾರ್ಗಸೂಚಿ ಪ್ರಕಟ : ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಿ!
EPFO EPS Guidelines : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ನೌಕರರ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಈ ಬಗ್ಗೆ ಇಪಿಎಫ್ಒ 20 ಫೆಬ್ರವರಿ 2023ರಂದು ಮಾರ್ಗಸೂಚಿಗಳನ್ನು ( EPFO EPS Guidelines) ಪ್ರಕಟಿಸಿದೆ.
ಇಪಿಎಫ್ಓ ನಿಂದ ಪ್ರಕಟವಾದ ಹೊಸ ಮಾರ್ಗಸೂಚಿ ಪ್ರಕಾರ, ಈ ಯೋಜನೆಯಡಿ ಹೆಚ್ಚಿನ ಪಿಂಚಣಿ ಪಡೆಯಲು ಅರ್ಹತೆ ಇದ್ದು, ಅರ್ಜಿ ಸಲ್ಲಿಸದ ನೌಕರರು ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಸುಪ್ರೀಂ ಇತ್ತಿಚೆಗೆ ತೀರ್ಪು ನೀಡಿದ್ದು, ಮಾರ್ಚ್ 3, 2023 ರವರೆಗೆ ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.
ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು ಎಂದು ಇಪಿಎಫ್ಒ ತಿಳಿಸಿದೆ. ಆಗಸ್ಟ್ 22, 2014ರ ಇಪಿಎಸ್ ಪರಿಷ್ಕರಣೆಯು ಪಿಂಚಣಿ ವೇತನದ ಮಿತಿಯನ್ನು ಹೆಚ್ಚಿಸಿದ್ದು, ತಿಂಗಳಿಗೆ ರೂ 6,500 ರಿಂದ 15,000ಕ್ಕೆ ಹೆಚ್ಚಿಸಿತ್ತು. ಹಾಗೆಯೇ ಉದ್ಯೋಗಿಗಳು ಮತ್ತು ಉದ್ಯೋಗದಾತರು ತಮ್ಮ ಸಂಬಳದ ಶೇಕಡಾ 8.33 ಅನ್ನು ನೌಕರರ ಪಿಂಚಣಿ ಯೋಜನೆ (EPS)ಗೆ ಕೊಡುಗೆ ನೀಡಲು ಅನುಮತಿ ನೀಡಲಾಗಿದೆ.
ಇಪಿಎಫ್ಒ ಕಚೇರಿಯ ಆದೇಶದಲ್ಲಿ ತನ್ನ ಕ್ಷೇತ್ರ ಕಚೇರಿಗಳಿಂದ ಜಂಟಿ ಆಯ್ಕೆ ನಮೂನೆಯನ್ನು ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದ್ದು, ಯುನಿಕ್ ರಿಸೋರ್ಸ್ ಲೊಕೇಶನ್(URL) ಅನ್ನು
ತಿಳಿಸಲಿದ್ದೇವೆ ಎಂದು ಇಪಿಎಫ್ಒ ಹೇಳಿದೆ. ಈ ಬಗ್ಗೆ ಬ್ಯಾನರ್ ಗಳು ಮೂಲಕ ಮಾಹಿತಿ ತಿಳಿಸಲಾಗುವುದು. ಆದೇಶದ ಪ್ರಕಾರ, ಪ್ರತಿ ಅರ್ಜಿಯನ್ನು ನೋಂದಾಯಿಸಿ, ಡಿಜಿಟಲ್ ಲಾಗ್ ಇನ್ ಮಾಡಿ ಮತ್ತು ಅರ್ಜಿದಾರರಿಗೆ ರಶೀದಿ ಸಂಖ್ಯೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ.
ಬಳಿಕ ಅರ್ಜಿದಾರರಿಗೆ ಇ-ಮೇಲ್/ಪೋಸ್ಟ್ ಮೂಲಕ ಮತ್ತು SMS ಮೂಲಕ ನಿರ್ಧಾರದ ಬಗ್ಗೆ ತಿಳಿಸಲಾಗುತ್ತದೆ. ಈ ಹಿಂದೆ, ಇಪಿಎಫ್ಒ ಡಿಸೆಂಬರ್ 29 ರಂದು ಈ ಸುತ್ತೋಲೆಯನ್ನು ಪ್ರಕಟ ಮಾಡಿದ್ದು, ಈ ಸುತ್ತೋಲೆಯಲ್ಲಿ ಯಾವ ನೌಕರರು ಹೆಚ್ಚಿನ ಪಿಂಚಣಿ ಪಡೆಯಲಿದ್ದಾರೆ ಮತ್ತು ಆನ್ಲೈನ್ನಲ್ಲಿ ಅರ್ಜಿ ಹೇಗೆ ಸಲ್ಲಿಸುವುದು ಎಂಬುದರ ಮಾಹಿತಿ ನೀಡಲಾಗಿದೆ.
ಸುತ್ತೋಲೆ ಪ್ರಕಾರ, ಇಪಿಎಫ್ ಯೋಜನೆಯಡಿ ಕಡ್ಡಾಯವಾಗಿ ಹೆಚ್ಚಿನ ವೇತನವನ್ನು ನೀಡಿದ ಮತ್ತು ನಿವೃತ್ತಿಯ ಮೊದಲು ಹೆಚ್ಚಿನ ಪಿಂಚಣಿಯನ್ನು ಆರಿಸಿಕೊಂಡ ನೌಕರರು ಮಾತ್ರ ಅರ್ಹರಾಗಿರುತ್ತಾರೆ. ಅಲ್ಲದೆ, ಯಾವುದೇ ಆಯ್ಕೆಯನ್ನು ಚಲಾಯಿಸದೆ ಸೆಪ್ಟೆಂಬರ್ 1, 2014 ರ ಮೊದಲು ನಿವೃತ್ತರಾದ ನೌಕರರು ಕೂಡ ಅದರ ಸದಸ್ಯತ್ವದಿಂದ ಹೊರಗಿದ್ದಾರೆ. ಇನ್ನು 2014 ರ ತಿದ್ದುಪಡಿಯ ಪ್ರಕಾರ, ಆಯ್ಕೆಯನ್ನು ಚಲಾಯಿಸುವ ನೌಕರರಿಗೆ ಮಾತ್ರ ಈ ಪ್ರಯೋಜನವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.