Tata Punch: ಟಾಟಾ ಪಂಚ್ ಸುರಕ್ಷಿತ ಕಾರು ! ವೈಶಿಷ್ಟ್ಯ ಮತ್ತು ಬೆಲೆಯ ಸಂಪೂರ್ಣ ಮಾಹಿತಿ ನಿಮಗಾಗಿ!
Tata Punch: ಕಾರುಗಳು ನೋಡೋದಿಕ್ಕೆ ಆಕರ್ಷಣೀಯವಾಗಿ ಇರಬೇಕು ನಿಜ. ಆದರೆ ಅಷ್ಟೇ ಸುರಕ್ಷಿತ ಕಾರು ಕೂಡ ಆಗಿರಬೇಕು. ರಕ್ಷಣಾ ಫೀಚರ್ ಗಳನ್ನು ಹೊಂದಿರಬೇಕು. ಅಪಾಯ ಎದುರಾದಾಗ ಬಳಕೆಗೆ ಸಿಗುವಂತಹ ಸುರಕ್ಷಾ ಫೀಚರ್ಸ್ ಕಾರಿನಲ್ಲಿ ಇರಬೇಕು. ಇಂದು ಜನರು ಉತ್ತಮ ಫೀಚರ್, ಬಣ್ಣ ಮತ್ತು ಅತ್ಯಂತ ಸುರಕ್ಷಿತ ಕಾರನ್ನು ಕೊಳ್ಳುತ್ತಾರೆ. ಸದ್ಯ ಟಾಟಾ ಪಂಚ್ (Tata Punch) ಅತ್ಯಂತ ಸುರಕ್ಷಿತ ಕಾರಿನ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. ಇದರ ಫೀಚರ್, ಬೆಲೆ ಕೇಳಿದ್ರೆ ಅಬ್ಬಬ್ಬಾ, ಅಂತೀರಾ!!
ಟಾಟಾ 5-ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿರುವ ಕಾರನ್ನು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಈ ವಾಹನವನ್ನು ‘Solid Iron’ ಎಂದೂ ಕರೆಯುತ್ತಾರೆ. ಮುಂಬರುವ ತಿಂಗಳಲ್ಲಿ ಟಾಟಾ ತನ್ನ ಪಂಚ್‌ನ ಸಿಎನ್‌ಜಿ (CNG) ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು, ಈ ಕಾರು ಡ್ಯುಯಲ್ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನವನ್ನು ಪಡೆದ ಮೊದಲ ಕಾರಾಗಿದ್ದು, ವರ್ಷಾಂತ್ಯದಲ್ಲಿ ಲಾಂಚ್ ಆಗಲಿದೆ ಎಂದು ಕಂಪನಿ ತಿಳಿಸಿದೆ.
ಟಾಟಾ ಮೋಟಾರ್ಸ್‌ನ(Tata motors) ಅಗ್ಗದ ಸಬ್ ಕಾಂಪ್ಯಾಕ್ಟ್ SUV ಟಾಟಾ ಪಂಚ್ ಆಗಿದ್ದು, ಇದು ದೇಶದಲ್ಲಿನ ಅತ್ಯಂತ ಕಡಿಮೆ ಬೆಲೆಯ ಕಾರಾಗಿದೆ. ಈ ಕಾರು ಅತ್ಯಂತ ಸುರಕ್ಷಿತ ಕಾರು ಎನಿಸಿಕೊಂಡಿದೆ. ಇದರ ಬೆಲೆ 5.99 ಲಕ್ಷ ರೂ. ಆಗಿದೆ. ಟಾಟಾದ ಈ ಕಾರಿನ ವೈಶಿಷ್ಟ್ಯದ ಬಗ್ಗೆ ಹೇಳಬೇಕಾದರೆ, ಇದು 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಹವಾನಿಯಂತ್ರಣ, ಸ್ವಯಂಚಾಲಿತ ಹೆಡ್‌ಲೈಟ್‌ಗಳು, ಸಂಪರ್ಕಿತ ಕಾರ್ ತಂತ್ರಜ್ಞಾನ ಮತ್ತು ಕ್ರೂಸ್ ಕಂಟ್ರೋಲ್ ಗಳನ್ನು ಹೊಂದಿದೆ.
ಟಾಟಾ ಪಂಚ್(Tata Punch) 5 ಆಸನಗಳನ್ನು ಹೊಂದಿರುವ ಕಾರಾಗಿದ್ದು, ಇದು 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಅಲ್ಲದೆ, ಈ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 86 bhp ಪವರ್ ಮತ್ತು 113 nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಪಂಚ್ 5-ಸ್ಪೀಡ್ ಮ್ಯಾನುವಲ್ ಮತ್ತು ಐಚ್ಛಿಕ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸಂಯೋಜಿಸಲ್ಪಟ್ಟಿದೆ. ಈ ಕಾರಿನ ಮೈಲೇಜ್ ಪ್ರತಿ ಲೀಟರ್‌ಗೆ ಸುಮಾರು 19 ಕಿ.ಮೀ. ಆಗಿದೆ.
ಇದೀಗ ಟಾಟಾ ಪಂಚ್ ಶೋರೂಂನಲ್ಲಿ ಪ್ಯೂರ್ (Pure), ಅಡ್ವೆಂಚರ್ (Adventure), ಅಕಂಪ್ಲಿಶ್ಡ್ (Accomplished) ಮತ್ತು ಕ್ರಿಯೇಟಿವ್ (Creative) ಎಂಬ ಐದು ಮಾದರಿಗಳಲ್ಲಿ ಲಭ್ಯವಿದೆ. ಸದ್ಯ ಟಾಟಾ ಪಂಚ್ ಭಾರತದಲ್ಲಿ ಅತ್ಯಂತ ಸುರಕ್ಷಿತ ಕಾರಾಗಿದೆ.