SSC, MTS Job : 11,409 ಹುದ್ದೆಗಳ ಅರ್ಜಿಗೆ ಕೊನೆಯ ದಿನಾಂಕ ವಿಸ್ತರಣೆ!!! ಹೊಸ ವೇಳಾಪಟ್ಟಿ ಇಲ್ಲಿದೆ!

SSC, MTS, Havaldar Post : ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ಇತ್ತೀಚೆಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾದ ಒಟ್ಟು 11,409 ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ಹಾಗೂ ಹವಾಲ್ದಾರ್ ಹುದ್ದೆಗಳಿಗೆ ಅಧಿಸೂಚಿಸಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಮೊದಲು ಫೆಬ್ರುವರಿ 17 ರವರೆಗೆ ಅವಕಾಶ ಕಲ್ಪಿಸಲಾಗಿತ್ತು.

ಆದರೆ, ಇದೀಗ, ಸಿಬ್ಬಂದಿ ನೇಮಕಾತಿ ಆಯೋಗವು( Staff Selection Commission)11,409 ಎಂಟಿಎಸ್‌ ಪೋಸ್ಟ್‌ ( SSC, MTS, Havaldar Post) ಗಳ ಅರ್ಜಿಗೆ ಅವಧಿ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ.

ಆಸಕ್ತರು ಅರ್ಜಿ ಸಲ್ಲಿಸುವ ಮೊದಲು ಒಟ್ಟು ಖಾಲಿ ಹುದ್ದೆಗಳು ವೇತನ, ವಿದ್ಯಾರ್ಹತೆ ಬಗ್ಗೆ ಮಾಹಿತಿ ತಿಳಿದುಕೊಂಡು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಒಳ್ಳೆಯದು.

ಹುದ್ದೆಗಳ ವಿವರ:
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) : 10,880
ಹವಾಲ್ದಾರ್ ಇನ್ ಸಿಬಿಐಸಿ ಮತ್ತು ಸಿಬಿಎನ್ : 529

ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ / 10ನೇ ತರಗತಿ

ಅರ್ಜಿ ಶುಲ್ಕ : ರೂ.100.

ವೇತನ ಶ್ರೇಣಿ : Rs.5200-20200.

2023 ರ ಏಪ್ರಿಲ್ ನಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದ್ದು, ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 24-02-2023 ಕೊನೆಯ ದಿನವಾಗಿದ್ದು, ಆಸಕ್ತರು ಈ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಎಸ್‌ಎಸ್‌ಸಿ ಎಂಟಿಎಸ್, ಹವಾಲ್ದಾರ್ ಪರೀಕ್ಷೆ ಹೊಸ ವೇಳಾಪಟ್ಟಿ ಹೀಗಿದೆ:

24-02-2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆಫ್‌ಲೈನ್‌ ಚಲನ್‌ ಜನೆರೇಟ್ ಮಾಡಲು 26-02-2023 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಅರ್ಜಿ ತಿದ್ದುಪಡಿಗೆ ಮಾರ್ಚ್‌ 02 ರಿಂದ 03 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಶುಲ್ಕ ಪಾವತಿಗೆ 26-02-2023 ದಿನವಾಗಿದೆ.

ಇದರ ಜೊತೆಗೆ ಆಫ್‌ಲೈನ್‌ ಮೂಲಕ ಶುಲ್ಕ ಪಾವತಿಗೆ 27-02-2023 ಕೊನೆ ದಿನಾಂಕವಾಗಿದೆ. ಮೇಲೆ ತಿಳಿಸಿದ ಮಾಹಿತಿಯನ್ನು ಗಮನಿಸಿ ಅರ್ಹ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.