Snoring and Food : ನಿಮಗೇನಾದರೂ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ ಈ ಆಹಾರ ಕ್ರಮ ಅನುಸರಿಸಿ !

Snoring Problem: ರಾತ್ರಿ ಮಲಗಿದ ಸುಖ ನಿದ್ರೆಗೆ ಜಾರಬೇಕು ಎನ್ನುವಾಗ ಗೊರಕೆ ನಿದ್ರಾಭಂಗ ಮಾಡಿ ಬಿಡುತ್ತೆ. ಈ ಗೊರಕೆ ಹೊಡೆಯುವ ಸಮಸ್ಯೆಯಿಂದ(Snoring Problem )ಪಾರಾಗೋದು ಹೇಗಪ್ಪಾ ಅಂತ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಾರೆ. ಪರಿಹಾರ ಕಂಡುಕೊಳ್ಳಲು ಏನೇನೋ ಪ್ರಯೋಗ ಕೂಡ ಮಾಡೋದಿದೆ. ಗೊರಕೆ ಹೊಡೆಯುವ ಅಭ್ಯಾಸದಿಂದ ಇನ್ನೂ ಮುಂದೆ ಪರಿಹಾರ ಕಂಡುಕೊಳ್ಳಬಹುದು. ಹೇಗೆ ಅಂತೀರಾ?? ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಗೊರಕೆ ಹೊಡೆಯುವ ಸಮಸ್ಯೆಯಿಂದ ಪಾರಾಗಬಹುದು.

ಮಲಗುವಾಗ ಈ ಗೊರಕೆ ಹೊಡೆಯುವ ಅಭ್ಯಾಸ ಕಂಡು ಬರೋದು ಯಾಕೆ ಎಂಬ ಅನುಮಾನ ಹೆಚ್ಚಿನವರಿಗೆ ಕಾಡಿರಬಹುದು. ಗೊರಕೆ ಹೊಡೆಯಲು ಹಲವು ಕಾರಣಗಳಿದ್ದು, ಆಯಾಸವಾದಾಗ, ಮೂಗು ಕಟ್ಟಿದ ಸಂದರ್ಭದಲ್ಲಿ ಸ್ಥೂಲಕಾಯ ಇದ್ದವರಿಗೆ ಅಷ್ಟೆ ಅಲ್ಲದೇ, ನಿದ್ರೆಯಲ್ಲಿ ಉಸಿರು ಕಟ್ಟಿದಂತೆ ಅನುಭವವಾದಾಗ ಹೆಚ್ಚಿನವರಿಗೆ ಗೊರಕೆ ಹೊಡೆಯುವ ಸಮಸ್ಯೆ (Snoring Problem)ಕಂಡುಬರುತ್ತದೆ. ಗೊರಕೆ ಹೊಡೆಯುವ ಅಭ್ಯಾಸವಿದ್ದರೆ ಗಾಬರಿಯಾಗುವ ಅವಶ್ಯಕತೆ ಇಲ್ಲದಿದ್ದರೂ ಕೂಡ ಇದೆ ಅಭ್ಯಾಸ ಗಂಭೀರ ಸಮಸ್ಯೆಗೆ ಎಡೆ ಮಾಡಿಕೊಡುವ ಸಾಧ್ಯತೆ ಕೂಡ ಇದೆ. ಹೀಗಾಗಿ, ಕೆಲವೊಂದು ಆಹಾರ ಕ್ರಮವನ್ನು ಅನುಸರಿಸುವ ಮೂಲಕ ಗೊರಕೆ ಸಮಸ್ಯೆಯಿಂದ ಪಾರಾಗಬಹುದು.

ಶುಂಠಿ(Ginger)
ಹೊಟ್ಟೆ ಉಬ್ಬರ, ಶೀತ ಕೆಮ್ಮು ಕಾಣಿಸಿಕೊಂಡಾಗ ಮನೆಯಲ್ಲೇ ದೊರೆಯುವ ಶುಂಠಿ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎನ್ನುವ ವಿಚಾರ ಹೆಚ್ಚಿನವರಿಗೆ ಗೊತ್ತಿರುವಂತದ್ದೇ. ಸಾಮಾನ್ಯವಾಗಿ ಹೆಚ್ಚಿನ ಸಮಸ್ಯೆಗೆ ಪರಿಹಾರ ನೀಡುವ ಶುಂಠಿಯ ಸೇವನೆಯಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಅಷ್ಟೇ ಅಲ್ಲದೆ, ಆಯಾಸದ ಜೊತೆಗೆ ಗೊರಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮೆಗ್ನಿಶಿಯಂ, ಪೊಟ್ಯಾಶಿಯಂ ಹಾಗೂ ಸತುವಿನ ಅಂಶಗಳು ರಕ್ತ ಸಂಚಾರ ಸುಲಲಿತ ವಾಗುತ್ತದೆ.ಗೊರಕೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಶುಂಠಿ ಟೀ ಕುಡಿಯುವ ಹವ್ಯಾಸ ರೂಡಿಸಿಕೊಳ್ಳುವುದು ಉತ್ತಮ.

ಸೇಬುಹಣ್ಣು(Apple)
ಪ್ರತಿದಿನ ಸೇಬು ಹಣ್ಣನ್ನು ತಿನುತ್ತ ಬಂದರೆ ಆರೋಗ್ಯ(Health) ಕಾಪಾಡಿಕೊಳ್ಳಬಹುದು ಎಂಬ ಮಾತು ಹೆಚ್ಚು ಪ್ರಚಲಿತ. ಸೇಬುಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿ ಸಿಗುವ ಹಿನ್ನೆಲೆ ಪ್ರತಿನಿತ್ಯ ಒಂದು ಸೇಬುಹಣ್ಣನ್ನು(Apple) ತಿನ್ನಲು ಬಲ್ಲವರು ಸಲಹೆ ನೀಡುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ರಕ್ತನಾಳಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಗೊರಕೆಯ ಪ್ರಮಾಣ ಕೂಡ ಕಡಿಮೆಯಾಗುವ ಜೊತೆಗೆ ಅನೇಕ ರೋಗಗಳಿಂದ ಪಾರಗಬಹುದು.

ಈರುಳ್ಳಿ(Onion)
ಗೊರಕೆ ಹೊಡೆಯುವ ಸಮಸ್ಯೆಯಿಂದ ಪಾರಾಗಬೇಕು ಎಂದುಕೊಳ್ಳುವವರು ಈರುಳ್ಳಿ(Onion) ಬಳಕೆ ಮಾಡಬಹುದು. ಕೆಮ್ಮು ಕಫ ಕಾಣಿಸಿಕೊಂಡಾಗ ಈರುಳ್ಳಿ ದಿವ್ಯ ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ.ಈರುಳ್ಳಿಯನ್ನು ಬೆಂಕಿಯಲ್ಲಿ ಸುಟ್ಟು ಕೂಡ ಸೇವಿಸಬಹುದು. ಈರುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿರುವ ಹಿನ್ನೆಲೆ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕನ್ನು ತಡೆಯಲು ನೆರವಾಗುತ್ತದೆ. ಕೆಮ್ಮ, ಶೀತ ಇದ್ದ ಸಂದರ್ಭದಲ್ಲಿ ಹಸಿ ಈರುಳ್ಳಿಯನ್ನು ಸೇವಿಸುವ ಮೂಲಕ, ಕಟ್ಟಿದ ಮೂಗಿನ ಸಮಸ್ಯೆಯ ಜೊತೆಗೆ ಗಂಟಲಿನಲ್ಲಿ ಕಫವಿದ್ದರೆ ಕರಗುತ್ತದೆ.

ಅರಿಸಿನ(Turmeric)
ಎಷ್ಟೋ ಬಾರಿ ನಾವು ಅಡಿಗೆಯಲ್ಲಿ ಬಳಸುವ ಆಹಾರ ಪದಾರ್ಥಗಳ ಮೂಲಕ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇವುಗಳಲ್ಲಿ ಅರಿಶಿನ(Turmeric) ಕೂಡ ಒಂದಾಗಿದ್ದು,ಇದರಲ್ಲಿ ಅಡಕವಾಗಿರುವ ಉತ್ಕರ್ಷಣ ವಿರೋಧ ಗುಣದಿಂದ ಮೂಗು ಕಟ್ಟಿಕೊಳ್ಳುವ ಹಾಗೂ ಗಂಟಲು ಬೇನೆಯಿಂದ ಪರಿಹಾರ ಕಂಡುಕೊಳ್ಳಬಹುದು. ಅಷ್ಟೆ ಅಲ್ಲದೇ, ಗೊರಕೆ ಹೊಡೆಯುವವರಿಗೂ ಅರಿಶಿನ ಪರಿಹಾರ ನೀಡೋದರಲ್ಲಿ ಅನುಮಾನವಿಲ್ಲ. ಗೊರಕೆ ಹೊಡೆಯುವ ಸಮಸ್ಯೆಯಿದ್ದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಸಿನ ಪುಡಿ ಮಿಶ್ರಣ ಮಾಡಿ ಸೇವಿಸುವುದು ಒಳ್ಳೆಯದು ಹಾಗೂ ಇದರಿಂದ ರಕ್ತಸಂಚಾರ ಕೂಡ ವೃದ್ಧಿಯಾಗುತ್ತದೆ.

ಜೇನುತುಪ್ಪ(Honey)
ಜೇನುತುಪ್ಪದಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅರಿಶಿನದಂತೆ ಜೇನುತುಪ್ಪ(Honey) ಕೂಡ ಉತ್ಕರ್ಷಣ ವಿರೋಧಿ ಗುಣವನ್ನು ಹೊಂದಿರುವ ಹಿನ್ನೆಲೆ ಶೀತ, ಕಫ ಹಾಗೂ ಗಂಟಲು ಕಟ್ಟುವಂತೆ ಆದಾಗ ಜೇನುತುಪ್ಪವನ್ನು ಜಜ್ಜಿದ ಶುಂಠಿಯ ಜೊತೆ ಬೆರೆಸಿ ತಿನ್ನುವ ಅಭ್ಯಾಸವನ್ನು ಹೆಚ್ಚಿನವರು ಅನುಸರಿಸುತ್ತಾರೆ. ಬಿಸಿ ನೀರು ಇಲ್ಲವೇ ಹಾಲಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ಕುಡಿಯುವ ಹವ್ಯಾಸ ಮಾಡಿಕೊಂಡರೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ(Breathing Related Problem) ಪರಿಹಾರ ಪಡೆಯಬಹುದು. ಜೇನುತುಪ್ಪದ ಬಳಕೆಯಿಂದ ಮೂಗಿನ ಹೊಳ್ಳೆಗಳು ತೆರೆದುಕೊಳ್ಳುವುದರಿಂದ ಉಸಿರಾಟದ ಸಮಸ್ಯೆ ತಲೆದೋರದು. ಇಷ್ಟೇ ಅಲ್ಲದೇ, ನಿಯಮಿತವಾಗಿ ಜೇನುತುಪ್ಪ ಸೇವಿಸಿದರೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ.

Leave A Reply

Your email address will not be published.